ಬಹುತೇಕ ಜನರಿಗೆ ಪಪ್ಪಾಯಿ ಹಣ್ಣನ್ನು ಕತ್ತರಿಸಿ ಅದರ ತಾಜಾ ಹೋಳುಗಳನ್ನು ಮಾತ್ರ ತಿಂದು ಗೊತ್ತಿರುತ್ತದೆ. ಆದರೆ ಇದರಿಂದ ವಿವಿಧ ತಿನಿಸುಗಳನ್ನು ಮಾಡಬಹುದು.
ಆರೋಗ್ಯಕ್ಕೆ ಪೂರಕವಾಗಿರುವ ಈ ಹಣ್ಣನ್ನು ಹೇಗೆ ತಿಂದರು ಓಕೆ. ಹಲ್ವಾ ಮಾಡಿ ತಿಂದರೂ ಇನ್ನೂ ರುಚಿಯಾಗಿರುತ್ತದೆ ಇಲ್ಲಿದೆ ಅದರ ರೆಸಿಪಿ.
ಬೇಕಾಗುವ ಸಾಮಾಗ್ರಿಗಳು
ಪಪ್ಪಾಯಿ ತಿರುಳು – 1 ಕಪ್
ಕಾಯಿತುರಿ – 1 ಕಪ್
ಸಣ್ಣ ರವೆ – 1 ಕಪ್
ಸಕ್ಕರೆ – 1 ಕಪ್
ತುಪ್ಪ – ಅರ್ಧ ಕಪ್
ಬಾದಾಮಿ ಚೂರು ಸ್ವಲ್ಪ
ಮಾಡುವ ವಿಧಾನ
ಪಪ್ಪಾಯಿ ಹಣ್ಣಿನ ತಿರುಳನ್ನು ಮಿಕ್ಸಿಯಲ್ಲಿ ಅರೆದು ಬಿಸಿ ಮಾಡಲು ಇಡಬೇಕು. ಅದಕ್ಕೆ ರವೆ, ಕಾಯಿತುರಿ, ಸಕ್ಕರೆ, ತುಪ್ಪ ಸೇರಿಸಿ ಕಡಿಮೆ ಉರಿಯಲ್ಲಿ ಇಟ್ಟು ಮಿಶ್ರಣ ಗಟ್ಟಿಯಾಗುವವರೆಗೆ ತಿರುವುತ್ತ ಇರಬೇಕು. ನಂತರ ಇದನ್ನು ತುಪ್ಪ ಸವರಿದ ತಟ್ಟೆಗೆ ಹಾಕಿ ತುಪ್ಪದಲ್ಲಿ ಹುರಿದ ಬಾದಾಮಿ ಚೂರನ್ನು ಮೇಲೆ ಉದುರಿಸಿ. ಬೇಕಾದ ಆಕಾರಕ್ಕೆ ಕತ್ತರಿಸಿ ಪಪ್ಪಾಯಿ ಹಲ್ವಾ ಸವಿಯಬಹುದು.