ಬಾಯಲ್ಲಿ ನೀರೂರಿಸುವ ಚಾಕಲೇಟ್ ನಿಂದ ಯಾವುದೇ ರೆಸಿಪಿ ಮಾಡಿದರು ಸಖತ್ ಆಗಿರುತ್ತದೆ. ಅದರಲ್ಲೂ ಕೊಬ್ಬರಿ ಜೊತೆ ಚಾಕ್ಲೇಟ್ ಸವಿದರೆ ಅದರ ಟೇಸ್ಟೇ ಬೇರೆ. ಹಾಗಿದ್ದರೆ ಫಟಾಫಟ್ ಚಾಕ್ಲೇಟ್ ಕೊಬ್ಬರಿ ಮಿಠಾಯಿ ತಯಾರಿಸುವ ವಿಧಾನ ಇಲ್ಲಿದೆ.
ಬೇಕಾಗುವ ಸಾಮಗ್ರಿಗಳು
ತುರಿದ ತೆಂಗಿನಕಾಯಿ – 2 ಬಟ್ಟಲು
ಸಕ್ಕರೆ -1 ಬಟ್ಟಲು
ಕೋಕೋ ಪುಡಿ – 2 ಚಮಚ
ಹಾಲು – 2 ಚಮಚ
ಏಲಕ್ಕಿ ಪುಡಿ ಸ್ವಲ್ಪ
ಮಾಡುವ ವಿಧಾನ
ಮೊದಲು ತೆಂಗಿನಕಾಯಿ ತುರಿ, ಸಕ್ಕರೆ, ಹಾಲು, ಏಲಕ್ಕಿ ಪುಡಿ, ಕೋಕೋ ಪುಡಿ ಎಲ್ಲವನ್ನೂ ಒಂದು ಬಟ್ಟಲಿನಲ್ಲಿ ಹಾಕಿ 4 ಗಂಟೆಗಳ ಕಾಲ ನೆನೆಸಿಡಬೇಕು. ನಂತರ ಆ ಮಿಶ್ರಣವನ್ನು ಬಾಣಲೆಗೆ ಹಾಕಿ ಸಣ್ಣ ಉರಿಯಲ್ಲಿ ಬೇಯಿಸಬೇಕು. ಚೆನ್ನಾಗಿ ಬೆಂದ ನಂತರ ತಟ್ಟೆಗೆ ತುಪ್ಪ ಸವರಿ ಮಿಶ್ರಣ ಹರಡಿ ಸ್ವಲ್ಪ ಬಿಸಿ ಇರುವಾಗಲೇ ಚೌಕಾಕಾರವಾಗಿ ಕಟ್ ಮಾಡಬೇಕು. ನಂತರ ತಣ್ಣಗಾದ ಮೇಲೆ ಚಾಕ್ಲೇಟ್ ಕೊಬ್ಬರಿ ಮಿಠಾಯಿ ಸವಿಯಿರಿ.