alex Certify ಸವಿದಿದ್ದೀರಾ ಕಿತ್ತಳೆ ಹಣ್ಣಿನ ಸಿಪ್ಪೆಯ ಗೊಜ್ಜು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸವಿದಿದ್ದೀರಾ ಕಿತ್ತಳೆ ಹಣ್ಣಿನ ಸಿಪ್ಪೆಯ ಗೊಜ್ಜು

ಕಿತ್ತಳೆ ಹಣ್ಣಿನ ಸಿಪ್ಪೆಯನ್ನು ಯಾರು ತಿನ್ನಲು ಸಾಧ್ಯವಿಲ್ಲ. ಆದರೆ ಈ ಸಿಪ್ಪೆಯಲ್ಲಿ ದೇಹಕ್ಕೆ ಬೇಕಾಗುವ ಸಾಕಷ್ಟು ಪ್ರಯೋಜನಗಳಿವೆ. ಸಿಪ್ಪೆಯನ್ನು ಹಾಗೇ ತಿನ್ನಲು ಸಾಧ್ಯವಿರದ ಕಾರಣ ಗೊಜ್ಜನ್ನು ತಯಾರಿಸಿ ತಿನ್ನಬಹುದು. ಇಲ್ಲಿದೆ ಅದರ ರೆಸಿಪಿ.

ಬೇಕಾಗುವ ಸಾಮಾಗ್ರಿಗಳು

ದೊಡ್ಡ ಕಿತ್ತಳೆ ಹಣ್ಣು – 2
ಕಡಲೆ ಬೇಳೆ – 1/4 ಚಮಚ
ಉದ್ದಿನ ಬೇಳೆ – 1/4 ಚಮಚ
ಒಣ ಮೆಣಸಿನ ಕಾಯಿ – 2
ಮೆಂತ್ಯೆ – 1/4 ಚಮಚ
ಬೆಲ್ಲ ಸಣ್ಣ ತುಂಡು
ಹುಣಸೆಹಣ್ಣು ಸ್ವಲ್ಪ
ಕರಿಬೇವು – 1 ಕಡ್ಡಿ.

ಮಾಡುವ ವಿಧಾನ
ಮೊದಲು ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ಕಿತ್ತಳೆ ಹಣ್ಣಿನ ಸಿಪ್ಪೆಯನ್ನು ಬಾಡಿಸಿಕೊಳ್ಳಬೇಕು. ಕಿತ್ತಳೆ ಸಿಪ್ಪೆ ಮೆತ್ತಗಾದ ಮೇಲೆ ಹುಣಸೆ ರಸ, ಉಪ್ಪು, ಬೆಲ್ಲ, ಕರಿಬೇವು ಹಾಕಿ ಸ್ವಲ್ಪ ಕುದಿಸಿ ಕೊಳ್ಳಬೇಕು. ನಂತರ ಒಗ್ಗರಣೆಗೆ ಕಡಲೆಬೇಳೆ, ಉದ್ದಿನಬೇಳೆ, ಒಣ ಮೆಣಸಿನ ಕಾಯಿ, ಮೆಂತ್ಯ ಹಾಕಿ ಗೊಜ್ಜಿ ನೊಂದಿಗೆ ಕಲಸಿದರೆ ಕಿತ್ತಳೆ ಹಣ್ಣಿನ ಸಿಪ್ಪೆಯ ಗೊಜ್ಜು ರೆಡಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...