alex Certify ಸರ್ಕಾರಿ ಶಾಲೆಯಲ್ಲಿ ನಡೆಯಿತು ಡಿಸ್ಕೋ ಪಾರ್ಟಿ; ಕುಣಿಯುತ್ತಾ ಗನ್ ಝಳಪಿಸಿದ ಯುವಕರು..! ಆಘಾತಕಾರಿ ವಿಡಿಯೋ ಬಹಿರಂಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸರ್ಕಾರಿ ಶಾಲೆಯಲ್ಲಿ ನಡೆಯಿತು ಡಿಸ್ಕೋ ಪಾರ್ಟಿ; ಕುಣಿಯುತ್ತಾ ಗನ್ ಝಳಪಿಸಿದ ಯುವಕರು..! ಆಘಾತಕಾರಿ ವಿಡಿಯೋ ಬಹಿರಂಗ

Viral Video: Men Brandish Guns While Grooving With Dancers at Party in Bihar Govt School. Watchಸೈಫ್-ಸೋನಾಕ್ಷಿ ಚಿತ್ರ ಬುಲೆಟ್ ರಾಜಾ ಚಿತ್ರದ ತಮಂಚೆ ಪೆ ಡಿಸ್ಕೋ ಹಾಡನ್ನು ನೀವು ಕೇಳಿರಬಹುದು. ತಮಾಂಚೆ ಎಂದರೆ ಗನ್ ಮತ್ತು ಡಿಸ್ಕೋ ಎಂದರೆ ಡ್ಯಾನ್ಸ್. ಸೈಫ್ ಅಲಿ ಖಾನ್ ಚಿತ್ರದಲ್ಲಿ ಗ್ಯಾಂಗ್‌ಸ್ಟರ್ ಆಗಿದ್ದು, ಹಾಡಿನಲ್ಲಿ ಸೋನಾಕ್ಷಿ ಸಿನ್ಹಾ ಅವರೊಂದಿಗೆ ಕೈಯಲ್ಲಿ ಗನ್ ಹಿಡಿದು ನೃತ್ಯ ಮಾಡಿದ್ದಾರೆ. ಇದೀಗ ಶಾಲೆಯಲ್ಲಿ ನಡೆದ ಪಾರ್ಟಿಯಲ್ಲಿ ಕೆಲವು ಯುವಕರು ಇದೇ ರೀತಿ ಗನ್ ಹಿಡಿದು ನೃತ್ಯ ಮಾಡಿದ್ದಾರೆ.

ಬಿಹಾರದ ಗೋಪಾಲ್‌ಗಂಜ್‌ನ ಟಾಕಿಯಾ ಯಾಕೂಬ್ ಗ್ರಾಮದ ಸರ್ಕಾರಿ ಶಾಲೆಯೊಂದರಿಂದ ಆಘಾತಕಾರಿ ವಿಡಿಯೋವೊಂದು ಹೊರಬಿದ್ದಿದೆ. ಮಾಧ್ಯಮಿಕ ಶಾಲೆಯ ಆವರಣದಲ್ಲಿ ಹುಟ್ಟುಹಬ್ಬವನ್ನು ಆಯೋಜಿಸಲಾಗಿತ್ತು. ಆದರೆ, ಯಾರಿಗಾಗಿ ಬರ್ತ್ ಡೇ ಪಾರ್ಟಿ ಮಾಡಿದ್ದಾರೆ ಎಂಬುದು ಗೊತ್ತಾಗಿಲ್ಲ. ಡಿಸ್ಕೋ ಡ್ಯಾನ್ಸ್ ಗೆ ನೃತ್ಯಗಾರರನ್ನು ಕೂಡ ಕರೆಸಲಾಗಿತ್ತು.

ಶಾಲೆಯೊಂದರ ಖಾಸಗಿ ಪಾರ್ಟಿಯ ಬಗ್ಗೆ ಅತ್ಯಂತ ಆಘಾತಕಾರಿ ವಿಷಯವೆಂದರೆ ಡ್ಯಾನ್ಸರ್ ಅನ್ನು ಕರೆಸಿರುವುದಲ್ಲ. ಪಾರ್ಟಿಯಲ್ಲಿ ಬಂದೂಕುಗಳು ಮತ್ತು ಸಿಗರೇಟ್‌ಗಳು ಸಹ ಕಾಣಿಸಿಕೊಂಡಿವೆ. ಇನ್‌ಸ್ಟಾಗ್ರಾಮ್‌ನಲ್ಲಿ ಅಪ್‌ಲೋಡ್ ಮಾಡಲಾದ ವಿಡಿಯೋದಲ್ಲಿ ಹಲವಾರು ಯುವಕರು ಕೆಲವು ನೃತ್ಯಗಾರರೊಂದಿಗೆ ಬಾಲಿವುಡ್ ಮತ್ತು ಹರ್ಯಾನ್ವಿ ಹಾಡುಗಳಿಗೆ ಡಾನ್ಸ್ ಮಾಡಿದ್ದಾರೆ. ಯುವಕರು ಅಪ್ರಾಪ್ತರೋ, ಇಲ್ಲವೋ ಎಂಬುದು ಸ್ಪಷ್ಟವಾಗಿಲ್ಲ.

ಡಿಜೆ ಮ್ಯೂಸಿಕ್‌ಗೆ ನೃತ್ಯ ಮಾಡುವಾಗ ಮತ್ತು ಸಿಗರೇಟ್ ಸೇದುವಾಗ ಯುವಕನೊಬ್ಬ ಕ್ಯಾಮರಾ ಕಡೆಗೆ ಗನ್ ಝಳಪಿಸಿದ್ದಾನೆ. ಮತ್ತೊಬ್ಬ ಯುವಕ ಕೂಡ ಕೈಯಲ್ಲಿ ಗನ್ ಹಿಡಿದುಕೊಂಡು ಅವನ ಪಕ್ಕದಲ್ಲಿ ಡಾನ್ಸ್ ಮಾಡಿದ್ದಾನೆ. ಯುವಕರು ನಂತರ ನರ್ತಕಿಯತ್ತ ಬಂದೂಕುಗಳನ್ನು ತೋರಿಸುತ್ತಾ, ಡಿಸ್ಕೋ ಬೀಟ್‌ಗಳಿಗೆ ಅವಳ ಸೊಂಟವನ್ನು ಅಲ್ಲಾಡಿಸುತ್ತಾ ಕುಣಿದಿದ್ದಾರೆ.

ಇದೀಗ ಈ ವಿಡಿಯೋ ಪೊಲೀಸರ ಕಣ್ಣಿಗೆ ಬಿದ್ದಿದೆ. ವಿಡಿಯೋದಲ್ಲಿ ಕಂಡುಬರುವ ಯುವಕರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಅವರು ಭರವಸೆ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...