alex Certify ಸರ್ಕಾರಿ ಕಚೇರಿಯಲ್ಲೇ ವ್ಯಕ್ತಿಗೆ ಹೃದಯಾಘಾತ; ಸಿಪಿಆರ್‌ ನೀಡಿ ಪ್ರಾಣಾಪಾಯದಿಂದ ಬಚಾವ್‌ ಮಾಡಿದ ಐಎಎಸ್‌ ಅಧಿಕಾರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸರ್ಕಾರಿ ಕಚೇರಿಯಲ್ಲೇ ವ್ಯಕ್ತಿಗೆ ಹೃದಯಾಘಾತ; ಸಿಪಿಆರ್‌ ನೀಡಿ ಪ್ರಾಣಾಪಾಯದಿಂದ ಬಚಾವ್‌ ಮಾಡಿದ ಐಎಎಸ್‌ ಅಧಿಕಾರಿ

ಐಎಎಸ್‌ ಅಧಿಕಾರಿಯೊಬ್ಬರು ಹೃದಯಾಘಾತಕ್ಕೊಳಗಾದ ವ್ಯಕ್ತಿಗೆ ಸಿಪಿಆರ್‌ ನೀಡುವ ಮೂಲಕ ಆತನ ಜೀವ ಉಳಿಸಿದ್ದಾರೆ. ಈ ವಿಡಿಯೋ ಕೂಡ ಇಂಟರ್ನೆಟ್‌ನಲ್ಲಿ ವೈರಲ್‌ ಆಗಿದೆ. ಚಂಡೀಗಢದ ಆರೋಗ್ಯ ಕಾರ್ಯದರ್ಶಿ ಯಶಪಾಲ್ ಗರ್ಗ್, ವ್ಯಕ್ತಿಯ ಪ್ರಾಣ ಕಾಪಾಡಿದ ಸಹೃದಯಿ. ಅವರು ಕಚೇರಿಗೆ ಆಗಮಿಸುತ್ತಿದ್ದ ವೇಳೆ ವ್ಯಕ್ತಿಯೊಬ್ಬ ಹೃದಯಾಘಾತದಿಂದ ಕುಸಿದು ಬಿದ್ದಿದ್ದ.

ಕೂಡಲೇ ಅಲರ್ಟ್‌ ಆದ ಯಶಪಾಲ್‌ ಗರ್ಗ್‌, ಸುಮಾರು ಒಂದು ನಿಮಿಷ ಸಿಪಿಆರ್ ಮಾಡುವ ಮೂಲಕ ಆತನ ಜೀವ ಉಳಿಸಿದ್ದಾರೆ. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡಲಾಗಿದೆ. ಐಎಎಸ್‌ ಅಧಿಕಾರಿಯ ಸಮಯಪ್ರಜ್ಞೆ ಮತ್ತು ಧೈರ್ಯವನ್ನು ಎಲ್ಲರೂ ಶ್ಲಾಘಿಸುತ್ತಿದ್ದಾರೆ.

ಜನಕ್ ಲಾಲ್ ಎಂಬ ವ್ಯಕ್ತಿ ತನ್ನ ವಿರುದ್ಧ ದಾಖಲಾಗಿರುವ ಕಟ್ಟಡ ನಿಯಮ ಉಲ್ಲಂಘನೆಯ ದೂರಿನ ಬಗ್ಗೆ ಚರ್ಚಿಸಲು ಚಂಡೀಗಢ ಹೌಸಿಂಗ್ ಬೋರ್ಡ್ ಕಚೇರಿಗೆ ಭೇಟಿ ನೀಡಿದ್ದ. ಈ ವೇಳೆ  ಹೃದಯಾಘಾತಕ್ಕೆ ತುತ್ತಾಗಿದ್ದಾನೆ. ಕೂಡಲೇ ಆತನನ್ನು ಕುರ್ಚಿಯ ಮೇಲೆ ಕೂರಿಸಲಾಯಿತು. ಚಂಡೀಗಢ ಹೌಸಿಂಗ್ ಬೋರ್ಡ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಯಶಪಾಲ್ ಗರ್ಗ್‌, ಆತನಿಗೆ ಸಿಪಿಆರ್ ನೀಡಿದರು. ಸಿಪಿಆರ್ ಪಡೆದ ನಂತರ ಜನಕ್ ಲಾಲ್‌ಗೆ ಪ್ರಜ್ಞೆ ಮರಳಿದೆ.

ನಂತರ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಐಎಎಸ್ ಅಧಿಕಾರಿಯ ತಕ್ಷಣದ ನಿರ್ಧಾರ ಮತ್ತು ಬುದ್ಧಿವಂತಿಕೆಯಿಂದಾಗಿ ಜನಕ್‌ ಲಾಲ್‌ ಪ್ರಾಣ ಉಳಿದಿದೆ. ವಿಡಿಯೋ ನೋಡಿದ ನೆಟ್ಟಿಗರು ಭಾವುಕರಾಗಿದ್ದಾರೆ. ಐಎಎಸ್‌ ಅಧಿಕಾರಿಗೆ ಕೃತಜ್ಞತೆ ಅರ್ಪಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಹೃದಯಾಘಾತಕ್ಕೆ ತುತ್ತಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿರುವ ಬಗ್ಗೆಯೂ ಕಳವಳ ವ್ಯಕ್ತಪಡಿಸಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...