
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಕೆಲವರು ಹಾಸಿಗೆಯ ಮೇಲೆ ಮಲಗಿದ್ದರೆ ಇನ್ನೂ ಕೆಲವರು ಹಾಸಿಗೆಯ ಮೇಲೆ ಕುಳಿತಿದ್ದಾರೆ. ಮತ್ತೊಂದೆಡೆ ನಾಯಿಗಳು ಕೂಡ ಹಾಸಿಗೆಯ ಮೇಲೆ ಮಲಗಿರುವುದನ್ನು ಕಾಣಬಹುದಾಗಿದೆ.
ಸಿವಾನ್ ಸದಾರ್ ಆಸ್ಪತ್ರೆಯ ಜನರಲ್ ವಾರ್ಡ್ನಲ್ಲಿ ಕಂಡು ಬಂದ ದೃಶ್ಯಾವಳಿ ಇದಾಗಿದೆ. ಇದೇ ಆಸ್ಪತ್ರೆಯಲ್ಲಿ ಈ ಹಿಂದೆ ನಾಯಿಗಳು ರೋಗಿಗಳ ಆಹಾರವನ್ನು ಸೇವಿಸುತ್ತಿದ್ದ ಘಟನೆ ಕೂಡ ವರದಿಯಾಗಿತ್ತು.
ಆಸ್ಪತ್ರೆಯ ಈ ದಯನೀಯ ಪರಿಸ್ಥಿತಿಯ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಿವಾನ್ ಸಿವಿಲ್ ಸರ್ಜನ್ ಡಾ. ವೈಕೆ ಶರ್ಮಾ ಆಸ್ಪತ್ರೆಯ ಸಿಬ್ಬಂದಿ ವಿರುದ್ಧ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ ಎಂದು ಹೇಳಿದರು.
ಇದೊಂದು ಹಳೆಯ ಸರ್ಕಾರಿ ಆಸ್ಪತ್ರೆಯಾಗಿದೆ. ಬಾಗಿಲು ಮುರಿದಿದ್ದರಿಂದ ನಾಯಿಗಳು ಹೀಗೆ ಜನರಲ್ ವಾರ್ಡ್ನೊಳಕ್ಕೆ ನುಗ್ಗಿವೆ. ಇಲ್ಲಿ ಹೊಸ ಆಸ್ಪತ್ರೆಯನ್ನು ನಿರ್ಮಿಸಬೇಕಿದೆ. ಈ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಮುರಿದು ಹೋದ ಬಾಗಿಲನ್ನು ಇಟ್ಟಿಗೆ, ಪ್ಲಾಸ್ಟರ್ನಿಂದ ಮುಚ್ಚಿದ್ದೇವೆ ಎಂದು ಡಾ. ವೈ.ಕೆ ಶರ್ಮಾ ಹೇಳಿದರು.