ಅಯ್ಯೋ ಚಪಾತಿ ಮಾಡಿದ್ದು ಜಾಸ್ತಿ ಆಯ್ತು. ವೇಸ್ಟ್ ಆಗುತ್ತಲಾ ಅಂತಾ ಬೇಜಾರು ಮಾಡ್ಕೋಬೇಡಿ. ಉಳಿದಿರುವ ಚಪಾತಿಯಿಂದ ರುಚಿಕರವಾದ ಜಾಮೂನ್ ನ್ನು ಮಾಡಬಹುದು. ಇದನ್ನು ಮಾಡುವುದು ತುಂಬಾ ಸುಲಭ. ನೀವೂ ಒಮ್ಮೆ ಟ್ರೈ ಮಾಡಿ ನೋಡಿ.
ಬೇಕಾಗುವ ಸಾಮಗ್ರಿಗಳು
ಉಳಿದಿರುವ ಚಪಾತಿ
ಸ್ವಲ್ಪ ಹಾಲು
2 ಚಮಚ ಹಾಲಿನ ಪುಡಿ
2 ಹನಿ ರೋಸ್ ಎಸ್ಸೆನ್ಸ್
2 ಕಪ್ ಸಕ್ಕರೆ
ನೀರು
ಮಾಡುವ ವಿಧಾನ
ಮೊದಲು ಚಪಾತಿಯನ್ನು ತುಂಡುಗಳನ್ನಾಗಿ ಮಾಡಿ ಮಿಕ್ಸರ್ ನಲ್ಲಿ ಪುಡಿ ಮಾಡಬೇಕು. ನಂತರ ಮಿಕ್ಸರ್ ಮಾಡಿದ ಚಪಾತಿ ಪುಡಿಗೆ 2 ಚಮಚ ಹಾಲಿನ ಪುಡಿ ಹಾಕಿ ಅದು ಮುಳುಗುವಷ್ಟು ಹಾಲನ್ನು ಹಾಕಿ ಮೃದುವಾಗಿ ಹಿಟ್ಟನ್ನು ಕಲೆಸಬೇಕು. ಅದನ್ನು 20 ನಿಮಿಷ ನೆನೆಯಲು ಬಿಡಬೇಕು.
ನಂತರ ಒಂದರಿಂದ ಒಂದೂವರೆ ಕಪ್ ಸಕ್ಕರೆಗೆ 2 ಕಪ್ ನೀರನ್ನು ಹಾಕಿ ಪಾಕವನ್ನು ತಯಾರಿಸಬೇಕು.
ನಂತರ ನೆನೆದ ಹಿಟ್ಟನ್ನು ಇನ್ನೊಮ್ಮೆ ನಾದಿ ನಿಮಗೆ ಬೇಕಾದ ಆಕಾರದಲ್ಲಿ ಉಂಡೆಗಳನ್ನು ಮಾಡಿ ಎಣ್ಣೆಯಲ್ಲಿ ಕರಿಯಬೇಕು.
ನಂತರ ಜಾಮೂನುಗಳು ಸ್ವಲ್ಪ ಆರಿದ ನಂತರ ಸಕ್ಕರೆ ಪಾಕಕ್ಕೆ 2 ಹನಿ ರೋಸ್ ಎಸ್ಸೆನ್ಸ್ ಮತ್ತು ಜಾಮೂನುಗಳನ್ನು ಹಾಕಿ ಅರ್ಧ ಗಂಟೆಯ ಬಳಿಕ ರುಚಿ ರುಚಿಯಾದ ಚಪಾತಿ ಜಾಮೂನು ಸವಿಯಲು ಸಿದ್ಧ.