alex Certify ಸಮ್ಮತಿಯ ಸೆಕ್ಸ್ ವೇಳೆ ವಯಸ್ಸು ದೃಢೀಕರಿಸಲು ‘ಆಧಾರ್’ ನೋಡಲಾಗದು; ಹೈಕೋರ್ಟ್ ಮಹತ್ವದ ಅಭಿಪ್ರಾಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಮ್ಮತಿಯ ಸೆಕ್ಸ್ ವೇಳೆ ವಯಸ್ಸು ದೃಢೀಕರಿಸಲು ‘ಆಧಾರ್’ ನೋಡಲಾಗದು; ಹೈಕೋರ್ಟ್ ಮಹತ್ವದ ಅಭಿಪ್ರಾಯ

ಪರಸ್ಪರ ಒಪ್ಪಿಗೆಯ ಮೇರೆಗೆ ದೈಹಿಕ ಸಂಬಂಧ ಬೆಳೆಸಲು ಮುಂದಾಗುವ ವ್ಯಕ್ತಿ ಅದಕ್ಕೂ ಮುನ್ನ ತನ್ನ ಸಂಗಾತಿಯ ನಿಜವಾದ ವಯಸ್ಸನ್ನು ತಿಳಿಯಲು ಆಧಾರ್ ಅಥವಾ ಪಾನ್ ಕಾರ್ಡ್ ಅಥವಾ ಶಾಲಾ ದಾಖಲಾತಿ ಪತ್ರವನ್ನು ನೋಡಲು ಸಾಧ್ಯವಾಗುವುದಿಲ್ಲ ಎಂದು ದೆಹಲಿ ಹೈಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.

ಪ್ರಕರಣ ಒಂದರ ವಿಚಾರಣೆ ವೇಳೆ ಈ ಅಭಿಪ್ರಾಯ ವ್ಯಕ್ತಪಡಿಸಿರುವ ದೆಹಲಿ ಹೈಕೋರ್ಟ್, ಅಪ್ರಾಪ್ತೆ ಮೇಲೆ ಅತ್ಯಾಚಾರ ನಡೆಸಿದ ಕುರಿತಂತೆ ದೂರು ದಾಖಲಾಗಿದ್ದ ಆರೋಪಿಗೆ ಜಾಮೀನು ಮಂಜೂರು ಮಾಡಿದೆ. ಅಲ್ಲದೆ ದೂರು ನೀಡಿದ್ದ ಮಹಿಳೆ ವಿರುದ್ಧ ತನಿಖೆ ನಡೆಸಲು ಪೊಲೀಸರಿಗೆ ಸೂಚಿಸಿದೆ.

ತನ್ನ ಮೇಲೆ 2009 ರಿಂದ 2021ರ ನಡುವೆ ಹಲವು ಬಾರಿ ಅತ್ಯಾಚಾರವೆಸಗಲಾಗಿದೆ ಎಂದು ಯುವಕನೊಬ್ಬನ ವಿರುದ್ಧ ದೂರು ದಾಖಲಿಸಿದ್ದ ಮಹಿಳೆ ತಾನು ಅಪ್ರಾಪ್ತೆ ಎಂದು ನಿರೂಪಿಸಲು ಹಲವು ದಾಖಲೆಗಳನ್ನು ನೀಡಿದ್ದರು. ಆದರೆ ಮೂರು ಜನ್ಮ ದಿನಾಂಕಗಳನ್ನು ಗಮನಿಸಿದ ನ್ಯಾಯಾಲಯ, ಆರೋಪಿಯನ್ನು ಸಿಲುಕಿಸಲು ನಡೆಸಿರುವ ಯತ್ನ ಇದಾಗಿರಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದು, ಇವರಿಬ್ಬರ ನಡುವೆ ಸಾಕಷ್ಟು ಹಣ ವರ್ಗಾವಣೆಯಾಗಿದೆ. ಅಲ್ಲದೆ ಈ ಪ್ರಕರಣ ಹನಿ ಟ್ರ್ಯಾಪ್ ನಂತಿದೆ ಎಂದು ಹೇಳಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...