alex Certify ಸಮುದ್ರದಿಂದ ಹೊರಬಂದು ಸ್ವಿಮ್ಮಿಂಗ್ ಪೂಲ್‍ಗೆ ಜಿಗಿದ ಕಡಲ ಸಿಂಹ; ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಮುದ್ರದಿಂದ ಹೊರಬಂದು ಸ್ವಿಮ್ಮಿಂಗ್ ಪೂಲ್‍ಗೆ ಜಿಗಿದ ಕಡಲ ಸಿಂಹ; ವಿಡಿಯೋ ವೈರಲ್

ಸಮುದ್ರ ಸಿಂಹವು ಸೀಲ್ ಕುಟುಂಬದ ಸಮುದ್ರ ನಿವಾಸಿ. ಭೂಮಿಯ ಸಿಂಹಗಳಿಗೆ ಬಾಹ್ಯ ಹೋಲಿಕೆಯನ್ನು ಹೊಂದಿರುವುದರಿಂದ ಸಮುದ್ರ ಸಿಂಹಕ್ಕೆ ಈ ಹೆಸರು ಬಂದಿದೆ. ಇದು ಬಹಳ ಮುಗ್ಧ ಜೀವಿಯಾಗಿದೆ. ಆದರೆ, ಕೆಲವು ಸಂದರ್ಭಗಳಲ್ಲಿ ಈ ಜೀವಿ ಆಕ್ರಮಣಕಾರಿಯಾಗಿ ವರ್ತಿಸಬಹುದು. ಇದೀಗ ಕಡಲ ಸಿಂಹದ ಮನಮೋಹಕ ವಿಡಿಯೋವೊಂದು ಹೊರಬಿದ್ದಿದೆ.

ಈಕ್ವೆಡಾರ್‌ನ ಗ್ಯಾಲಪಗೋಸ್ ದ್ವೀಪಗಳಲ್ಲಿನ ಬೀಚ್‌ಸೈಡ್ ರೆಸಾರ್ಟ್ ನಲ್ಲಿ ಸಮುದ್ರ ಸಿಂಹವು ವಿಐಪಿ ಅತಿಥಿಯಂತೆ ಎಂಟ್ರಿ ಕೊಟ್ಟಿರುವ ಉಲ್ಲಾಸದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಹಾಗ್ ಎಂಬ ಪುಟ ಹಂಚಿಕೊಂಡಿದೆ.

ರೆಸಾರ್ಟ್‌ನಲ್ಲಿ ತಮ್ಮ ವಿಲಕ್ಷಣ ರಜೆಯನ್ನು ಆನಂದಿಸುತ್ತಿದ್ದ ಪ್ರವಾಸಿಗರಿಗೆ, ಸಮುದ್ರದಿಂದ ತೆವಳುತ್ತಾ ಬಂದು ಸ್ವಿಮ್ಮಿಂಗ್ ಪೂಲ್ ಗೆ ಸಮುದ್ರ ಸಿಂಹ ಪ್ರವೇಶಿಸಿದಾಗ ದಿಗ್ಭ್ರಮೆಗೊಂಡಿದ್ದಾರೆ. ಕಡಲ ಸಿಂಹವೊಂದು ಸಮುದ್ರದಿಂದ ಹೊರಬಂದು, ಮೆಟ್ಟಿಲುಗಳನ್ನು ಹತ್ತಿ ಸ್ವಿಮ್ಮಿಂಗ್ ಪೂಲ್‌ಗೆ ಜಿಗಿಯುತ್ತಿರುವುದನ್ನು ವಿಡಿಯೋದಲ್ಲಿ ತೋರಿಸಲಾಗಿದೆ.

ಸಮುದ್ರ ಸಿಂಹವು ಕೊಳದಲ್ಲಿ ಈಜುವುದನ್ನು ಆನಂದಿಸಿದೆ. ನಂತರ ಅಲ್ಲಿಂದ ಹೊರಬಂದು, ವ್ಯಕ್ತಿಯೊಬ್ಬ ಕುಳಿತಿದ್ದ ವಿಶ್ರಾಂತಿ ಪಡೆಯುವ ಕುರ್ಚಿಯತ್ತ ಧಾವಿಸುತ್ತದೆ. ಇಲ್ಲಿ ಏನಾಗುತ್ತಿದೆ ಎಂದು ತಬ್ಬಿಬ್ಬಾದ ವ್ಯಕ್ತಿ ಕುರ್ಚಿಯಿಂದ ಎದ್ದಿದ್ದಾನೆ. ಸಮುದ್ರ ಸಿಂಹದ ಕೆಳಗಿದ್ದ ತನ್ನ ಟವೆಲ್ ಅನ್ನು ಎಳೆದು ನಿರಾಶೆಯಿಂದ ಇನ್ನೊಂದು ಕುರ್ಚಿಯ ಮೇಲೆ ಎಸೆಯುತ್ತಾನೆ. ಈ ವಿಡಿಯೋ ವೈರಲ್ ಆಗಿದ್ದು, ವ್ಯಕ್ತಿಯ ವರ್ತನೆಗೆ ನೆಟ್ಟಿಗರು ಅಸಹನೆ ವ್ಯಕ್ತಪಡಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...