alex Certify ಸಮವಸ್ತ್ರ ಪಾಲನೆ ಮಕ್ಕಳ ಕರ್ತವ್ಯ; ಇಲ್ಲಿ ರಾಜಕೀಯ ಮಾಡುತ್ತಿರುವುದು ಕಾಂಗ್ರೆಸ್ ನಾನಲ್ಲ ಎಂದ ಶಿಕ್ಷಣ ಸಚಿವ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಮವಸ್ತ್ರ ಪಾಲನೆ ಮಕ್ಕಳ ಕರ್ತವ್ಯ; ಇಲ್ಲಿ ರಾಜಕೀಯ ಮಾಡುತ್ತಿರುವುದು ಕಾಂಗ್ರೆಸ್ ನಾನಲ್ಲ ಎಂದ ಶಿಕ್ಷಣ ಸಚಿವ

ರಾಜ್ಯದ ಹಿಜಾಬ್ ವಿವಾದ ಕೋರ್ಟ್ ಮೆಟ್ಟಿಲೇರಿದೆ. ಹೈಕೋರ್ಟ್ ಇಂದು ಈ ವಿಚಾರವಾಗಿ ತೀರ್ಪು ನೀಡಲಿದೆ. ಈ ವಿಚಾರವಾಗಿ ಶಿಕ್ಷಣ ಸಚಿವರು ಹಾಗೂ ಗೃಹ ಮಂತ್ರಿ, ಸಿಎಂ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದ್ದಾರೆ‌‌.

ಇದೇ ವೇಳೆ ಮಾತನಾಡಿರುವ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಸಮಾನತೆ ಕಾಪಾಡಿಕೊಳ್ಳಿ ಎಂದು ವಿದ್ಯಾರ್ಥಿಗಳಲ್ಲಿ ಮನವಿ‌ ಮಾಡಿದ್ದಾರೆ. ಮಕ್ಕಳು ಸರ್ಕಾರದ ಆದೇಶದಂತೆ ಸಮವಸ್ತ್ರ ಧರಿಸಿಕೊಂಡು ಶಾಲಾ-ಕಾಲೇಜುಗಳಿಗೆ ಬರಬೇಕು. ಮಕ್ಕಳ ನಡುವೆ ತಾರತಮ್ಯ ಬೇಡ. ಎಲ್ಲರೂ‌ ಒಂದೇ, ಸಮವಸ್ತ್ರ ನಿಯಮ ಪಾಲನೆ ಮಕ್ಕಳ ಕರ್ತವ್ಯ. ಈ ಬಗ್ಗೆ ಮಕ್ಕಳಿಗೆ ತಿಳಿಹೇಳಬೇಕು ಎಂದಿದ್ದಾರೆ.

ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಹಿಂದೂಗಳಿಗೆ ಹಿಜಾಬ್ ಹಾಕಿಸಿಬಿಡ್ತಾರೆ; ಸಿದ್ದರಾಮಯ್ಯ ವಿರುದ್ಧ ಸುನಿಲ್‌ ಕುಮಾರ್ ಕಿಡಿ

ಈ ಸಂದರ್ಭದಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿರುವ ಅವರು, ವಿವಾದಕ್ಕೆ ಬೆಂಕಿ ಹಚ್ಚಿರುವ ಕಾಂಗ್ರೆಸ್ ತಾವು ಮಾಡಿ ನನ್ನ ಮೇಲೆ ಹೇಳುತ್ತಿದೆ. ಈ ವಿವಾದದ ಹಿಂದೆ ಸರ್ಕಾರ ಅಥವಾ ಬಿಜೆಪಿಯ ಕೈವಾಡ ಇಲ್ಲ. ಉಡುಪಿಯ ಒಂದೇ ಒಂದು ಕಾಲೇಜಲ್ಲಿ ಇದ್ದ ಈ ಪ್ರಕರಣ, ಈಗ ರಾಜ್ಯದ ಬೇರೆ ಬೇರೆ ಕಡೆ ಆಗ್ತಿದೆ ಅಂದರೆ ಇದರ ಹಿಂದೆ ರಾಜಕೀಯ ಕೈವಾಡ ಇದೆ ಎಂಬುದನ್ನ ಅರ್ಥ ಮಾಡಿಕೊಳ್ಳಬೇಕು.

ವಿವಾದ ಹತ್ತಿಕ್ಕಲು, ಸರ್ಕಾರ ಎಲ್ಲಾ ರೀತಿ ತೀರ್ಮಾನ ಕೈಗೊಂಡಿದೆ‌. ಇನ್ನೂ ಮೂರ್ನಾಲ್ಕು ದಿನಗಳಲ್ಲಿ ಎಲ್ಲಾ ಸರಿ ಹೋಗುತ್ತೆ ಎನ್ನುವ ಭರವಸೆ ಇದೆ. ಪ್ರತಿಯೊಬ್ಬ ಮಕ್ಕಳು ಕಾನೂನು ಹಾಗೂ ಸರ್ಕಾರದ ಆದೇಶವನ್ನು ಪಾಲನೆ ಮಾಡಬೇಕು.‌ ಪ್ರಕರಣ ಈಗಾಗ್ಲೇ ಕೋರ್ಟ್ ಅಂಗಳದಲ್ಲಿದೆ, ಇಂದೂ ವಿಚಾರಣೆ ನಡೆಯಲಿದೆ. ಮುಂದಿನ ತಿಂಗಳು ಪಿಯುಸಿ ಎಕ್ಸಾಮ್ ಬರುತ್ತೆ ಅದರ ಕಡೆ ಗಮನ ಕೊಡಿ. ಕೋರ್ಟ್ ತೀರ್ಪು ಏನೇ ಬಂದರೂ ಅದಕ್ಕೆ ನಮ್ಮ ಸರ್ಕಾರ ಬದ್ಧವಾಗಿರುತ್ತೆ ಎಂದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...