alex Certify ಸಮಯವಿಲ್ಲದ ಪಾಲಕರು ರಾತ್ರಿಯನ್ನು ಮಕ್ಕಳಿಗಾಗಿ ಮೀಸಲಿಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಮಯವಿಲ್ಲದ ಪಾಲಕರು ರಾತ್ರಿಯನ್ನು ಮಕ್ಕಳಿಗಾಗಿ ಮೀಸಲಿಡಿ

ಪಾಲಕರಿಗೆ ಮಕ್ಕಳ ಜೊತೆ ಸಮಯ ಕಳೆಯಲು ಆಗ್ತಾ ಇಲ್ಲ. ಓಡುತ್ತಿರುವ ಸಮಯ ಹಾಗೂ ಬದಲಾದ ಜೀವನ ಶೈಲಿಯಿಂದಾಗಿ ಪಾಲಕರು ಸದಾ ಬ್ಯುಸಿ. ಹಾಗಾಗಿ ಅನೇಕ ಪಾಲಕರು ರಾತ್ರಿ ಮಕ್ಕಳ ಜೊತೆ ಮಲಗ್ತಾರೆ. ಹೀಗೆ ಮಾಡುವುದರಿಂದ ಅನೇಕ ಉಪಯೋಗಗಳಿವೆ.

ಸುರಕ್ಷಿತ ಭಾವನೆ : ಸಾಮಾನ್ಯವಾಗಿ ಮಕ್ಕಳಿಗೆ ರಾತ್ರಿ ಎಂದ್ರೆ ಭಯ. ಕತ್ತಲಲ್ಲಿ ಒಬ್ಬರೇ ಮಲಗಿದಾಗ ಅವರು ಭಯಗೊಳ್ತಾರೆ. ನಿದ್ದೆಯಲ್ಲಿ ಎದ್ದು ಅಳುವುದುಂಟು. ಅಸುರಕ್ಷಿತವಾಗಿದ್ದೇವೆಂಬ ಭಾವನೆ ಬೆಳೆಯುತ್ತದೆ. ಅಪ್ಪ-ಅಮ್ಮನ ತೋಳು ಅವರಿಗೆ ಸುರಕ್ಷಿತ ಭಾವನೆ ನೀಡುತ್ತದೆ.

ಆರೋಗ್ಯದಲ್ಲಿ ವೃದ್ಧಿ : ಸರಿಯಾದ ಸಮಯಕ್ಕೆ ಮಲಗಿದ್ರೆ ಒಳ್ಳೆಯ ನಿದ್ದೆ ಬರುವ ಜೊತೆಗೆ ಆರೋಗ್ಯ ಕೂಡ ಸರಿಯಾಗಿರುತ್ತದೆ. ಮಕ್ಕಳ ಆರೋಗ್ಯಕ್ಕಾಗಿ ಹಾಗೂ ಪ್ರತಿದಿನ ಒಂದೇ ಸಮಯದಲ್ಲಿ ಮಕ್ಕಳು ನಿದ್ದೆ ಮಾಡುವ ಪದ್ಧತಿಯನ್ನು ಅಭ್ಯಾಸ ಮಾಡಿಸಲು ಪಾಲಕರು ಅವರ ಜೊತೆ ಮಲಗುವುದು ಅವಶ್ಯ.

ಮಾನಸಿಕವಾಗಿ ಹತ್ತಿರವಾಗ್ತಾರೆ: ಮಕ್ಕಳ ಜೊತೆ ಪಾಲಕರು ಮಲಗುವುದರಿಂದ ಮಲಗುವ ವೇಳೆ ಮಕ್ಕಳ ದಿನಚರಿಯನ್ನು ಆರಾಮವಾಗಿ ಕೇಳಿ ತಿಳಿದುಕೊಳ್ಳಬಹುದು. ಈ ವೇಳೆ ಮಕ್ಕಳಿಗೆ ಯಾವುದಾದ್ರೂ ಸಮಸ್ಯೆ ಇದ್ದಲ್ಲಿ ಮುಕ್ತವಾಗಿ ಪಾಲಕರ ಮುಂದೆ ಹೇಳುತ್ತಾರೆ. ಜೊತೆಗೆ ಟೆನ್ಷನ್ ಇಲ್ಲದೆ ನಿದ್ದೆ ಮಾಡ್ತಾರೆ.

ಸಮಯ ಕಳೆಯಲು : ಕೆಲ ಮಕ್ಕಳಿಗೆ ರಾತ್ರಿ ಮಲಗುವಾಗ ಪಾಲಕರು ಕಥೆ ಹೇಳಲೇ ಬೇಕು. ಅವರಿಗೆ ಕಥೆ ಹೇಳಿದ್ರೆ ನಿದ್ದೆ ಬರುತ್ತೆ ಎಂದಲ್ಲ. ಅವರು ಈ ಸಮಯವನ್ನು ಪಾಲಕರ ಜೊತೆ ಕಳೆಯಲು ಇಷ್ಟ ಪಡ್ತಾರೆ. ಹಾಗಾಗಿ ದಿನದಲ್ಲಿ ಮಕ್ಕಳ ಜೊತೆ ಸಮಯ ಕಳೆಯಲು ಆಗದ ಪಾಲಕರು ಅವಶ್ಯವಾಗಿ ರಾತ್ರಿ ಅವರ ಜೊತೆ ಮಲಗಿ.

ಒಳ್ಳೆಯ ಸಂಸ್ಕಾರ : ರಾತ್ರಿ ಮಕ್ಕಳ ಜೊತೆ ಮಲಗುವಾಗ ಪಾಲಕರು ಒಳ್ಳೊಳ್ಳೆ ವಿಚಾರಗಳನ್ನು ಮಕ್ಕಳಿಗೆ ತಿಳಿಸಿ ಹೇಳಬಹುದು. ಕಥೆಯ ರೂಪದಲ್ಲಿ ಈ ವಿಷಯಗಳನ್ನು ಮಕ್ಕಳಿಗೆ ಹೇಳಿದ್ರೆ ಮಕ್ಕಳು ಎಂದಿಗೂ ಮರೆಯುವುದಿಲ್ಲ.

ಸ್ವಾಭಿಮಾನದ ವೃದ್ಧಿ : ಪಾಲಕರ ಜೊತೆ ಮಲಗುವ ಮಕ್ಕಳು ಸ್ವಾಭಿಮಾನಿಗಳಾಗಿರುತ್ತಾರೆ. ಪಾಲಕರ ತೋಳಿನಲ್ಲಿ ಯಾವುದೇ ಒತ್ತಡವಿಲ್ಲದೆ ಅವರು ಮಲಗುವುದರಿಂದ ನೆಮ್ಮದಿ ಜೊತೆಗೆ ಅವರಿಗೆ ಖುಷಿ ಸಿಗುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...