alex Certify ಸದಾ ಕಾಡುವ ಆಯಾಸ, ಸುಸ್ತಿಗೆ ಕಾರಣ ಈ ʼವಿಟಮಿನ್‌ʼ ಕೊರತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸದಾ ಕಾಡುವ ಆಯಾಸ, ಸುಸ್ತಿಗೆ ಕಾರಣ ಈ ʼವಿಟಮಿನ್‌ʼ ಕೊರತೆ

ಕೆಲವರಿಗೆ ಸದಾ ಆಯಾಸ, ಸುಸ್ತು ಕಾಡ್ತಿರುತ್ತದೆ. ಯಾವುದೇ ಕೆಲಸ ಮಾಡಲು ಉತ್ಸಾಹವಿರುವುದಿಲ್ಲ. ನಿದ್ರೆ ಕೊರತೆ, ದೇಹದಲ್ಲಿ ಶಕ್ತಿ ಕಡಿಮೆಯಾಗಿರುವುದು, ಕೆಟ್ಟ ಆಹಾರ ಪದ್ಧತಿ ಎಲ್ಲವೂ ಕಾರಣವಾಗಿರುತ್ತದೆ. ಎಲ್ಲ ಸಮಯದಲ್ಲೂ ದೇಹ ದಣಿದಂತೆ ಭಾಸವಾಗಲು ಮುಖ್ಯ ಕಾರಣ ವಿಟಮಿನ್ ಕೊರತೆ.

ಅನೇಕರು ವಿಟಮಿನ್ ಬಗ್ಗೆ ಹೆಚ್ಚು ಗಮನ ನೀಡುವುದಿಲ್ಲ. ದೇಹದಲ್ಲಿ ವಿಟಮಿನ್ ಕೊರತೆ ಕಾಣಿಸಿಕೊಂಡರೆ ಅನೇಕ ಸಮಸ್ಯೆಗಳು ಎದುರಾಗುತ್ತವೆ. ದೇಹದಲ್ಲಿ ರಕ್ತ ಕಣಗಳು ಮತ್ತು ಡಿಎನ್‌ಎ ಉತ್ಪತ್ತಿಗೆ ವಿಟಮಿನ್ ಬಿ 12 ಅಗತ್ಯವಿದೆ. ನರಮಂಡಲದ ಬಲಕ್ಕೆ ವಿಟಮಿನ್ ಬಿ 12 ಸಹ ಬಹಳ ಮುಖ್ಯ. ದೇಹದಲ್ಲಿ ವಿಟಮಿನ್ ಬಿ 12 ಕೊರತೆಯು ಎಲ್ಲಾ ಸಮಯದಲ್ಲೂ ಆಯಾಸ ಮತ್ತು ದೌರ್ಬಲ್ಯವನ್ನು ಉಂಟು ಮಾಡುತ್ತದೆ. ವಿಟಮಿನ್ ಬಿ 12 ಕೊರತೆಯಿಂದ ರಕ್ತ ಕಣಗಳು ರೂಪುಗೊಳ್ಳುವುದಿಲ್ಲ. ಈ ಕಾರಣದಿಂದಾಗಿ ಸದಾ ದಣಿವು ಕಾಡುತ್ತದೆ. ವಿಟಮಿನ್ ಬಿ 12 ಕೊರತೆ ನೀಗಿಸಲು ಆಹಾರದಲ್ಲಿ ಮೀನು, ಮಾಂಸ, ಮೊಟ್ಟೆ ಮತ್ತು ಧಾನ್ಯಗಳನ್ನು ಸೇವಿಸಬೇಕು.

ದೇಹವನ್ನು ಸರಿಯಾಗಿ ಮುನ್ನಡೆಸಲು ವಿಟಮಿನ್ ಡಿ ಬಹಳ ಮುಖ್ಯ. ಹಲ್ಲು ಮತ್ತು ಮೂಳೆಗಳಿಗೆ ವಿಟಮಿನ್ ಡಿ ಅತ್ಯಗತ್ಯ. ವಿಟಮಿನ್ ಡಿ ನೇರವಾಗಿ ಪ್ರತಿರಕ್ಷಣಾ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ. ಅದರ ಕೊರತೆಯಿಂದಾಗಿ, ದೇಹದಲ್ಲಿ ಯಾವಾಗಲೂ ಆಲಸ್ಯ ಕಾಡುತ್ತದೆ. ವಿಟಮಿನ್ ಡಿ ಯ ಉತ್ತಮ ಮೂಲವೆಂದರೆ ಸೂರ್ಯನ ಬೆಳಕು. ಸಾಲ್ಮನ್ ಮೀನು, ಮೊಟ್ಟೆಯ ಹಳದಿ ಲೋಳೆ, ಅಣಬೆಗಳು ಮತ್ತು ಬಲವರ್ಧಿತ ಆಹಾರಗಳಲ್ಲಿ ವಿಟಮಿನ್ ಡಿ ಹೇರಳವಾಗಿ ಕಂಡುಬರುತ್ತದೆ.

ವಿಟಮಿನ್ ಸಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದು ಚರ್ಮ ಮತ್ತು ಕೂದಲಿಗೆ ಸಹ ಪ್ರಯೋಜನಕಾರಿಯಾಗಿದೆ. ವಿಟಮಿನ್ ಸಿ ಕೊರತೆಯ ಮೊದಲ ಲಕ್ಷಣವೆಂದರೆ ಅತಿಯಾದ ದಣಿವು. ಸಿಟ್ರಸ್ ಹಣ್ಣುಗಳು, ಕಿವಿ, ಅನಾನಸ್, ಪಪ್ಪಾಯಿ, ಸ್ಟ್ರಾಬೆರಿ, ಕಲ್ಲಂಗಡಿ ಮತ್ತು ಮಾವಿನಹಣ್ಣಿನಲ್ಲಿ ವಿಟಮಿನ್ ಸಿ ಸಾಕಷ್ಟು ಕಂಡುಬರುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...