
ಭಾರತೀಯ ಆಡಳಿತ ಸೇವೆ (ಐಎಎಸ್) ಅಧಿಕಾರಿ ಸುಪ್ರಿಯಾ ಸಾಹು ಅವರು ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಕುಟುಂಬದ ಸದಸ್ಯರ ಗುಂಪೊಂದು ತಡರಾತ್ರಿಯಲ್ಲಿ ತಮ್ಮ ಅಂಗಡಿಯಲ್ಲಿ ಕಲ್ಲಂಗಡಿ ಹಣ್ಣನ್ನು ಇಡುತ್ತಿರುವ ವಿಡಿಯೋವನ್ನು ಅವರು ಹಂಚಿಕೊಂಡಿದ್ದಾರೆ.
13 ಸೆಕೆಂಡುಗಳ ವಿಡಿಯೋದಲ್ಲಿ, ಮೂವರು ವಯಸ್ಕರು ಮತ್ತು ಇಬ್ಬರು ಮಕ್ಕಳ ಗುಂಪು ಟ್ರಕ್‌ನಿಂದ ಕಲ್ಲಂಗಡಿ ಹಣ್ಣುಗಳನ್ನು ತಮ್ಮ ರಸ್ತೆಬದಿಯ ಅಂಗಡಿಗೆ ರವಾನಿಸಿದ್ದಾರೆ. ಒಬ್ಬರಿಂದ ಒಬ್ಬರಿಗೆ ಹಣ್ಣನ್ನು ರವಾನಿಸುವ ಮೂಲಕ ಕಲ್ಲಂಗಡಿ ಹಣ್ಣನ್ನು ತಮ್ಮ ಅಂಗಡಿಯಲ್ಲಿ ಇಟ್ಟಿದ್ದಾರೆ.
ಈ ವಿಡಿಯೋವನ್ನು ಹಂಚಿಕೊಂಡ ಐಎಎಸ್ ಅಧಿಕಾರಿ ಸಾಹು, ಈ ಇಡೀ ಕುಟುಂಬವು ರಾತ್ರಿ ತಮ್ಮ ಕಲ್ಲಂಗಡಿ ಹಣ್ಣನ್ನು ಅಂಗಡಿಯಲ್ಲಿ ಇಡುತ್ತಿರುವ ದೃಶ್ಯವನ್ನು ನೋಡಿದೆ. ಸಣ್ಣ ಮಾರಾಟಗಾರರು ಮತ್ತು ವ್ಯಾಪಾರಸ್ಥರು ತಮ್ಮ ಜೀವನೋಪಾಯವನ್ನು ಗಳಿಸಲು ಶ್ರಮಿಸುತ್ತಿರುವುದನ್ನು ನೋಡಲು ಯಾವಾಗಲೂ ವಿನೀತರಾಗುತ್ತಾರೆ. ಇಂತವರ ಬಳಿ ಎಂದಿಗೂ ಚೌಕಾಶಿ ಮಾಡಬೇಡಿ. ಅವರಿಗೆ ನೀಡಬೇಕಾದ ಬೆಂಬಲವನ್ನು ನೀಡಿ ಎಂದು ಬರೆದಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋ ಸಾವಿರಾರು ವೀಕ್ಷಣೆಗಳೊಂದಿಗೆ ವೈರಲ್ ಆಗಿದೆ.