alex Certify ‘ಸಚಿವ ಹಾಲಪ್ಪ ಆಚಾರ್ ​ಗೂ ಇದೆ ಸಿಎಂ ಆಗೋ ಯೋಗ’ – ಭವಿಷ್ಯ ನುಡಿದ ಶಾಸಕ ಶಿವನಗೌಡ ನಾಯಕ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಸಚಿವ ಹಾಲಪ್ಪ ಆಚಾರ್ ​ಗೂ ಇದೆ ಸಿಎಂ ಆಗೋ ಯೋಗ’ – ಭವಿಷ್ಯ ನುಡಿದ ಶಾಸಕ ಶಿವನಗೌಡ ನಾಯಕ್

ರಾಜ್ಯದಲ್ಲಿ ವಿಧಾನಪರಿಷತ್​ ಚುನಾವಣೆ ಅಖಾಡ ಕಾವೇರಿರುವ ಬೆನ್ನಲ್ಲೇ ಪ್ರಚಾರ ಕಾರ್ಯ ಕೂಡ ಭರದಿಂದ ಸಾಗುತ್ತಿದೆ. ಆದರೆ ಬಿಜೆಪಿಯಲ್ಲಿ ಮಾತ್ರ ಇನ್ನೂ ಸಿಎಂ ಬದಲಾವಣೆ ಚರ್ಚೆಯೇ ಮುಗಿದಿಲ್ವಾ ಎಂಬ ಪ್ರಶ್ನೆ ಎದುರಾಗಿದೆ.‌

ವಿಧಾನಪರಿಷತ್​ ಚುನಾವಣೆ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಿದ್ದ ಶಾಸಕ ಶಿವನಗೌಡ ನಾಯಕ್‌, ಸಚಿವ ಹಾಲಪ್ಪ ಆಚಾರ್​ಗೂ ಮುಖ್ಯಮಂತ್ರಿಯಾಗುವ ಯೋಗವಿದೆ ಎಂದು ಭವಿಷ್ಯ ನುಡಿದಿದ್ದಾರೆ.

ಕೊಪ್ಪಳ ಜಿಲ್ಲೆ ಕುಕನೂರು ತಾಲೂಕು ಮಸಬ ಹಂಚಿನಾಳ ಗ್ರಾಮದಲ್ಲಿ ವಿಧಾನಪರಿಷತ್​ ಚುನಾವಣಾ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಿ ಮಾತನಾಡಿದ ಶಿವನಗೌಡ ನಾಯಕ್ ಇನ್ನೊಂದು ಹತ್ತಿಪ್ಪತ್ತು ವರ್ಷಗಳಲ್ಲಿ ಹಾಲಪ್ಪ ಆಚಾರ್​ಗೆ ಮುಖ್ಯಮಂತ್ರಿಯಾಗುವ ಯೋಗವಿದೆ ಎಂದು ಹೇಳಿದ್ರು.‌

ನಾನು ಈಶ್ವರಪ್ಪರಂತೆ ಇಂಥವರೇ ಬೇಗ ಸಿಎಂ ಆಗಲಿ ಎಂದು ಹೇಳುವುದಿಲ್ಲ. ರಾಜಕೀಯ ಜೀವನದಲ್ಲಿ ಹಾಲಪ್ಪ ಆಚಾರ್​ಗೆ ಮುಖ್ಯಮಂತ್ರಿ ಯೋಗ ಬಂದರೆ ನಾವೇನೂ ವಿರೋಧ ಮಾಡೋದಿಲ್ಲ. ಭಗವಂತನ ಆರ್ಶೀವಾದದಿಂದ ಅವರು ಆ ಸ್ಥಾನವನ್ನು ಮುಟ್ಟಲಿ. ಹಾಲಪ್ಪ ಬಳಿ ಆ ಶಕ್ತಿಯಿದೆ ಎಂದು ಹೇಳಿದ್ರು.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...