
ಬೆಂಗಳೂರು: ಚಾವುಂಡರಾಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಗೃಹ ಸಚಿವ ಡಾ. ಜಿ.ಪರಮೇಶ್ವರ್, ಸಚಿವ ಶಿವರಾಜ್ ತಂಗಡಗಿಗೆ ಸಮಯದ ಪಾಠ ಮಾಡಿದ ಪ್ರಸಂಗ ನಡೆಯಿತು.
ತಡವಾಗಿ ಕಾರ್ಯಕ್ರಮಕ್ಕೆ ಆಗಮಿಸಿದ ಸಚಿವ ಶಿವರಾಜ್ ತಂಗಡಗಿಯವರಿಗೆ, ಭಾಷಣದ ವೇಳೆಯೇ ಗರಂ ಆದ ಗೃಹ ಸಚಿವರು, ಯಾಕಪ್ಪ ಇಷ್ಟೊಂದು ತಡವಾಗಿ ಬರುತ್ತೀಯಾ ? ಕಾರ್ಯಕ್ರಮಗಳಿಗೆ ಸರಿಯಾದ ಸಮಯಕ್ಕೆ ಬರಬೇಕು. ಇಲ್ಲದಿದ್ದರೆ ಜನರು ಸಚಿವರ ಬಗ್ಗೆ ಲಘುವಾಗಿ ಮಾತನಾಡಿಕೊಳ್ಳುತ್ತಾರೆ ಎಂದು ಹೇಳಿದರು.
ಸಚಿವರೇ ತಡವಾಗಿ ಬರುತ್ತಾರೆ ಎಂದು ಜನರೇ ಹೇಳುತ್ತಾರೆ ಎಂದರು. ಈ ವೇಳೆ ಸಚಿವ ತಂಗಡಗಿ ನಗುತ್ತಲೇ ತಲೆಯಾಡಿಸಿ ವೇದಿಕೆ ಮೇಲೆ ಕುಳಿತ ಘಟನೆ ನಡೆಯಿತು.