ಸಕ್ಕರೆ ಕಾಯಿಲೆ ಈಗ ಬಹಳಷ್ಟು ಮಂದಿಯನ್ನು ಕಾಡುವ ಆರೋಗ್ಯ ಸಮಸ್ಯೆಗಳಲ್ಲೊಂದು. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿರ್ವಹಿಸುವಲ್ಲಿ ಆಹಾರವು ಪ್ರಮುಖ ಪಾತ್ರ ವಹಿಸುತ್ತದೆ. ಮಧುಮೇಹದಿಂದ ಬಳಲುತ್ತಿರುವವರು ತಮ್ಮ ಆಹಾರ, ತೂಕ ಮತ್ತು ಜೀವನಶೈಲಿ ಬಗ್ಗೆ ವಿಶೇಷ ಗಮನಹರಿಸಬೇಕು. ಹೆಚ್ಚಿನ ಪೋಷಕಾಂಶಗಳು, ಪ್ರೋಟೀನ್, ಕಡಿಮೆ ಕೊಬ್ಬು, ಕಡಿಮೆ ಕ್ಯಾಲೊರಿ ಇರುವ ಆರೋಗ್ಯಕರ ಆಹಾರವನ್ನು ಸೇವಿಸಬೇಕು.
ಇವು ಮಧುಮೇಹಕ್ಕೆ ಸಂಬಂಧಿಸಿದ ತೊಡಕುಗಳನ್ನು ತಪ್ಪಿಸಲು ಸಹಾಯ ಮಾಡುತ್ತವೆ. ಸಕ್ಕರೆ ಕಾಯಿಲೆ ಇರುವವರು ತಿನ್ನಲೇಬೇಕಾದ ತರಕಾರಿ ಎಂದರೆ ಈರುಳ್ಳಿ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ಈರುಳ್ಳಿ ಕಡಿಮೆ ಕ್ಯಾಲೋರಿಗಳನ್ನು ಹೊಂದಿದೆ. ಆದರೆ ವಿಟಮಿನ್‌ಗಳು, ಖನಿಜಾಂಶಗಳು ಇದರಲ್ಲಿ ಹೇರಳವಾಗಿವೆ. ಉತ್ಕರ್ಷಣ ನಿರೋಧಕಗಳಲ್ಲಿ ಈರುಳ್ಳಿ ಸಾಕಷ್ಟು ಸಮೃದ್ಧವಾಗಿದೆ. ಹಾಗಾಗಿ ಅನೇಕ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.
ಈರುಳ್ಳಿಯಲ್ಲಿರುವ ಕೆಲವು ರಾಸಾಯನಿಕಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತವೆ. ಈರುಳ್ಳಿಯಲ್ಲಿ ಹೆಚ್ಚಿನ ಸಾಂದ್ರತೆಗಳಲ್ಲಿ ಕಂಡುಬರುವ ಫ್ಲೇವನಾಯ್ಡ್, ಉತ್ಕರ್ಷಣ ನಿರೋಧಕವಾದ ಕ್ವೆರ್ಸೆಟಿನ್, ಮಧುಮೇಹದ ಲಕ್ಷಣಗಳನ್ನು ನಿವಾರಿಸುತ್ತದೆ. ಈರುಳ್ಳಿಯಲ್ಲಿರುವ ಸಲ್ಫರ್ ಸಂಯುಕ್ತಗಳು ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡುವ ಗುಣಗಳನ್ನು ಹೊಂದಿದೆ. ಈರುಳ್ಳಿ ಔಷಧೀಯ ಬಳಕೆಯ ಸುದೀರ್ಘ ಇತಿಹಾಸವನ್ನು ಹೊಂದಿದೆ.
ಈರುಳ್ಳಿಯಲ್ಲಿ ಹೆಚ್ಚಿನ ಪ್ರಮಾಣದ ಫೈಬರ್, ಕಬ್ಬಿಣ, ವಿಟಮಿನ್ ಸಿ ಮತ್ತು ಇತರ ಸೂಕ್ಷ್ಮ ಪೋಷಕಾಂಶಗಳಿದ್ದು, ಹಲವಾರು ರೀತಿಯಲ್ಲಿ ಆರೋಗ್ಯವನ್ನು ಉತ್ತೇಜಿಸುತ್ತದೆ.ಅಮೇರಿಕನ್ ಡಯಾಬಿಟಿಸ್ ಅಸೋಸಿಯೇಷನ್, ನಿರ್ದಿಷ್ಟವಾಗಿ ಹೆಚ್ಚು ಪಿಷ್ಟರಹಿತ ತರಕಾರಿಗಳನ್ನು ತಿನ್ನಲು ಶಿಫಾರಸು ಮಾಡುತ್ತದೆ. ಏಕೆಂದರೆ ಅವುಗಳಲ್ಲಿ ಕ್ಯಾಲೋರಿ ಕಡಿಮೆ ಮತ್ತು ಕಾರ್ಬೋಹೈಡ್ರೇಟ್‌ಗಳನ್ನು ಅವು ಹೊಂದಿರುತ್ತವೆ.
ಎಡಿಎ ಪ್ರಕಾರ, ಈರುಳ್ಳಿಯಂತಹ ಪಿಷ್ಟರಹಿತ ತರಕಾರಿಗಳನ್ನು ದಿನಕ್ಕೆ ಮೂರರಿಂದ ಐದು ಬಾರಿ ತಿನ್ನಬಹುದು. ಹಸಿ ಈರುಳ್ಳಿಯಾದರೆ ಒಮ್ಮೆಲೆ ಒಂದೇ ಈರುಳ್ಳಿ ತಿನ್ನಬೇಕು. ಬೇಯಿಸಿದ್ದಾದರೆ ಒಂದೂವರೆ ಕಪ್ನಷ್ಟು ತಿನ್ನಬಹುದು. ಆದಾಗ್ಯೂ ಈರುಳ್ಳಿ ಒಂದಕ್ಕಿಂತ ಹೆಚ್ಚು ಕಪ್ ಬೇಯಿಸಿದ ಈರುಳ್ಳಿ ಸೇವನೆಯ ಪ್ರಮಾಣ ಮಿತಿಮೀರುವಂತಿಲ್ಲ. ಒಮ್ಮೆಲೇ ಎರಡು ಕಪ್ನಷ್ಟು ಹಸಿ ಈರುಳ್ಳಿ ತಿನ್ನುವುದರಿಂದ ಕಾರ್ಬೋಹೈಡ್ರೇಟ್ ಹೆಚ್ಚಾಗುವ ಸಾಧ್ಯತೆ ಇರುತ್ತದೆ.