alex Certify ಸಕ್ಕರೆ ಕಾಯಿಲೆಗೆ ಪರಿಣಾಮಕಾರಿ ಮದ್ದು ಅಡುಗೆ ಮನೆಯಲ್ಲಿರೋ ಈ ಮಸಾಲೆ ಪದಾರ್ಥ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಕ್ಕರೆ ಕಾಯಿಲೆಗೆ ಪರಿಣಾಮಕಾರಿ ಮದ್ದು ಅಡುಗೆ ಮನೆಯಲ್ಲಿರೋ ಈ ಮಸಾಲೆ ಪದಾರ್ಥ..!

ಸಕ್ಕರೆ ಕಾಯಿಲೆ ಲಕ್ಷಾಂತರ ಜನರನ್ನು ಕಾಡುತ್ತಿರುವ ಆರೋಗ್ಯ ಸಮಸ್ಯೆ. ವೈದ್ಯಕೀಯ ನೆರವಿನ ಜೊತೆಗೆ ಕೆಲವೊಂದು ಮನೆಮದ್ದುಗಳನ್ನು ಕೂಡ ಪ್ರಯತ್ನಿಸಿದರೆ ಮಧುಮೇಹವನ್ನು ನಿಯಂತ್ರಿಸಬಹುದು.

ಇವುಗಳನ್ನು ಸೇವಿಸುವ ಮೂಲಕ ಹೆಚ್ಚುತ್ತಿರುವ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಬಹುದು. ಕೆಲವೊಂದು ನಿರ್ದಿಷ್ಟ ಮಸಾಲೆ ಪದಾರ್ಥಗಳು ಮಧುಮೇಹವನ್ನು ನಿಯಂತ್ರಿಸುತ್ತವೆ.

ಶುಂಠಿ: ಶುಂಠಿಯನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ಅಥವಾ ಜಜ್ಜಿಕೊಳ್ಳಿ. ಪಾತ್ರೆಯಲ್ಲಿ ಒಂದು ಲೋಟ ನೀರು ಹಾಕಿ ಅದಕ್ಕೆ ಜಜ್ಜಿದ ಶುಂಠಿಯನ್ನು ಹಾಕಿ ಚೆನ್ನಾಗಿ ಕುದಿಸಿ. ನಂತರ ಅದನ್ನು ಸೋಸಿಕೊಂಡು ಬಿಸಿಯಾಗಿ ಸೇವಿಸಿ. ಶುಂಠಿ ಚಹಾವನ್ನು ಕುಡಿಯುವುದರಿಂದ ರಕ್ತದಲ್ಲಿನ ಸಕ್ಕರೆ ನಿಯಂತ್ರಣದಲ್ಲಿರುತ್ತದೆ.

ದಾಲ್ಚಿನಿ: ಪಾತ್ರೆಯೊಂದರಲ್ಲಿ ದಾಲ್ಚಿನಿ ಹಾಗೂ ನೀರನ್ನು ಹಾಕಿ ಚೆನ್ನಾಗಿ ಕುದಿಸಿ. ಅದನ್ನು ಫಿಲ್ಟರ್‌ ಮಾಡಿಕೊಂಡು ಕುಡಿಯಿರಿ. ದಾಲ್ಚಿನಿಯಲ್ಲಿ ಎಂಟಿವೈರಲ್, ಎಂಟಿಬ್ಯಾಕ್ಟೀರಿಯಲ್ ಮತ್ತು ಎಂಟಿಫಂಗಲ್ ಗುಣಲಕ್ಷಣಗಳಿವೆ. ಆದ್ದರಿಂದ ಇದು ಮಧುಮೇಹ ರೋಗಿಗಳಿಗೆ ಉತ್ತಮ ಪರಿಣಾಮ ನೀಡುತ್ತದೆ.

ಮೆಂತ್ಯ: ಎರಡು ಚಮಚ ಮೆಂತ್ಯದ ಕಾಳನ್ನು ಒಂದು ಲೋಟ ನೀರಿನಲ್ಲಿ ಹಾಕಿ ರಾತ್ರಿಯಿಡೀ ನೆನೆಸಿ. ಮರುದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಈ ನೀರನ್ನು ಸೇವಿಸಿ. ಇದು ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದರೊಂದಿಗೆ ನಿಮ್ಮ ಹೃದಯದ ಆರೋಗ್ಯವೂ ಸುಧಾರಿಸುತ್ತದೆ.

ಲವಂಗ: ಲವಂಗದಲ್ಲಿ ಎಂಟಿವೈರಲ್, ಉರಿಯೂತ ನಿವಾರಕ, ಕಾರ್ಮಿನೇಟಿವ್ ಮತ್ತು ಎಂಟಿ ಫ್ಲಾಟ್ಯುಲೆನ್ಸ್ ಗುಣಗಳನ್ನು ಹೊಂದಿದೆ. ಅದಕ್ಕಾಗಿಯೇ ಲವಂಗವು ಮಧುಮೇಹವನ್ನು ನಿಯಂತ್ರಿಸಲು ಉಪಯುಕ್ತವಾಗಿದೆ. ಇದಕ್ಕಾಗಿ ಸುಮಾರು 4 ರಿಂದ 5 ಲವಂಗವನ್ನು ಒಂದು ಲೋಟ ನೀರಿನಲ್ಲಿ ರಾತ್ರಿಯಿಡೀ ನೆನೆಸಿಡಿ. ಮರುದಿನ ಬೆಳಗ್ಗೆ ಅದನ್ನು ಕುಡಿಯಿರಿ ಮತ್ತು ಲವಂಗವನ್ನು ಕೂಡ ಅಗಿದು ತಿನ್ನಿರಿ.

ಅರಿಶಿನ: ಅರಿಶಿನದಲ್ಲಿ ಆಯುರ್ವೇದ ಗುಣಗಳಿದ್ದು, ಇದು ಮಧುಮೇಹ ರೋಗಿಗಳಿಗೆ ಪ್ರಯೋಜನಕಾರಿಯಾಗಿದೆ. ಅರಿಶಿನವನ್ನು ನೀರಿನಲ್ಲಿ ಕುದಿಸಿ ಅಥವಾ ಹಾಲಿಗೆ ಸೇರಿಸಿ ಕುದಿಸಿಕೊಂಡು ಬಿಸಿಯಾಗಿ ಸೇವಿಸುವುದರಿಂದ ಸಕ್ಕರೆ ಕಾಯಿಲೆಗೆ ತುತ್ತಾಗುವವರಿಗೆ ಸಾಕಷ್ಟು ಪ್ರಯೋಜನವಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...