alex Certify ಸಕಾರಾತ್ಮಕವಾಗಿ ಯೋಚಿಸುವುದು ಎಷ್ಟು ಮುಖ್ಯ ಗೊತ್ತಾ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಕಾರಾತ್ಮಕವಾಗಿ ಯೋಚಿಸುವುದು ಎಷ್ಟು ಮುಖ್ಯ ಗೊತ್ತಾ…?

ಬಿ ಪಾಸಿಟಿವ್ ಎಂದು ಹೇಳುವುದು ಬಹಳ ಸುಲಭ. ಆದರೆ ಆ ರೀತಿ ಇರುವುದು ಕಷ್ಟ. ಅದಕ್ಕೆ ನಮ್ಮ ಸುತ್ತಮುತ್ತಲಿರುವ ಪ್ರತಿಕೂಲ ವಾತಾವರಣ ಕಾರಣ. ನಕಾರಾತ್ಮಕ ಆಲೋಚನೆಗಳಿಂದ ಅರಿಯದಂತಹ ನೋವು, ಭಯ, ಆತಂಕ ಮಾನಸಿಕವಾಗಿ ಎದುರಾದರೆ ತಲೆನೋವು, ಎದೆಯಲ್ಲಿ ನೋವು, ನಿದ್ರೆ ಬರದಿರುವುದು, ದಣಿವಿನಂತಹವು ದೈಹಿಕವಾಗಿ ಕಂಡುಬರುತ್ತದೆ.

ಅದಕ್ಕೆ ಪರಿಹಾರ ಸಕಾರಾತ್ಮಕವಾಗಿ ಆಲೋಚಿಸುವುದು. ಅದರಿಂದ ಮೆದುಳಿನ ಮೇಲೆ ಉತ್ತಮ ಪ್ರಭಾವ ಉಂಟಾಗುವುದಲ್ಲದೆ ಮತ್ತೊಂದಷ್ಟು ಲಾಭಗಳು ದೊರಕುತ್ತದೆ.

ಕಾನ್ಫಿಡೆನ್ಸ್ ಜಾಸ್ತಿ

ಸಕಾರಾತ್ಮಕವಾಗಿ ಆಲೋಚನೆ ಮಾಡುವುದರಿಂದ ಅನುಬಂಧಗಳು ಹೆಚ್ಚಾಗುತ್ತದೆ. ಆರೋಗ್ಯವಾಗಿರುವುದರ ಜೊತೆಗೆ ಆತ್ಮವಿಶ್ವಾಸವು ಸಹ ನಿಮ್ಮದಾಗುತ್ತದೆ ಎಂದು ಅಧ್ಯಯನಗಳಿಂದ ತಿಳಿದು ಬಂದಿದೆ.

ಜೀವನದ ಕಾಲಾವಧಿ ಸಕಾರಾತ್ಮಕವಾದ ದೃಷ್ಟಿಕೋನವನ್ನು ಬೆಳೆಸಿಕೊಳ್ಳುವುದರಿಂದ ಮನಃಸ್ಥಿತಿ ಬದಲಾಗುವುದೊಂದೇ ಅಲ್ಲದೆ, ದೈಹಿಕ ಆರೋಗ್ಯವೂ ಸಹ ಉತ್ತಮಗೊಳ್ಳುತ್ತದೆ. ಹಾಗೆ ಜೀವನದ ಕಾಲಾವಧಿ ಹೆಚ್ಚಾಗುತ್ತದೆ. ಅನಾರೋಗ್ಯಗಳು ಸಹ ಕಡಿಮೆಯಾಗುತ್ತದೆ.

ಕೊಲೆಸ್ಟ್ರಾಲ್

ಪೋಷಕಾಹಾರದ ಸೇವನೆ, ವ್ಯಾಯಾಮ ಮಾಡುವುದರಿಂದ ಮಾತ್ರವಲ್ಲ, ಸಕಾರಾತ್ಮಕ ದೃಷ್ಟಿಕೋನವನ್ನು ಬೆಳೆಸಿಕೊಳ್ಳುವುದರಿಂದಲೂ ಸಹ ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆ ಮಾಡಿಕೊಳ್ಳಬಹುದು.

ರೋಗನಿರೋಧಕ ಶಕ್ತಿ

ಆಶಾವಾದಿ ದೃಷ್ಟಿಕೋನ, ಸಕಾರಾತ್ಮಕತೆಯನ್ನು ಬೆಳೆಸಿಕೊಳ್ಳುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಪ್ರತಿಕೂಲವಾಗಿ ಆಲೋಚಿಸುವುದರಿಂದ ರೋಗ ನಿರೋಧಕ ವ್ಯವಸ್ಥೆಯಲ್ಲಿ ಇರುವಂತಹ ಕಣಗಳ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ಆದ್ದರಿಂದ ಅನಾರೋಗ್ಯಗಳು ಹೆಚ್ಚಾಗುತ್ತದೆ. ಅವುಗಳನ್ನು ನಿಯಂತ್ರಿಸಬೇಕೆಂದರೆ ಮೊದಲು ಸಕಾರಾತ್ಮಕವಾಗಿ ಆಲೋಚಿಸಲು ಆರಂಭ ಮಾಡಬೇಕು.

ಹೃದಯ

ಸಕಾರಾತ್ಮಕ ದೃಷ್ಟಿಕೋನ ಹೊಂದಿರುವವರ ಹೃದಯ ಆರೋಗ್ಯ ಉತ್ತಮವಾಗಿರುತ್ತದೆ. ರಕ್ತದಲ್ಲಿ ಸಕ್ಕರೆ ಪ್ರಮಾಣ ನಿಯಂತ್ರಣದಲ್ಲಿರುತ್ತದೆ. ಆದ್ದರಿಂದ ಪ್ರತಿಕೂಲ ಆಲೋಚನೆಗಳನ್ನು ಕಡಿಮೆ ಮಾಡಿ ಸಕಾರಾತ್ಮಕವಾಗಿ ಯೋಚಿಸುವುದಕ್ಕೆ ಪ್ರಾಮುಖ್ಯತೆ ಕೊಡಿ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...