alex Certify ಸಕಲ ಸಂಕಷ್ಟಗಳ ನಿವಾರಣೆಗೆ ʼರಾಮ ನವಮಿʼ ಯಂದು ತಪ್ಪದೇ ಮಾಡಬೇಕು ಈ ಕೆಲಸ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಕಲ ಸಂಕಷ್ಟಗಳ ನಿವಾರಣೆಗೆ ʼರಾಮ ನವಮಿʼ ಯಂದು ತಪ್ಪದೇ ಮಾಡಬೇಕು ಈ ಕೆಲಸ

ಶ್ರೀರಾಮ ನವಮಿ ಹಿಂದೂಗಳ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. ಭಾರತ ಮಾತ್ರವಲ್ಲದೆ ಪ್ರಪಂಚದಾದ್ಯಂತ ಬಹಳ ವಿಜೃಂಭಣೆಯಿಂದ ರಾಮನವಮಿಯನ್ನು ಆಚರಿಸಲಾಗುತ್ತದೆ.

ವಿಷ್ಣುವಿನ 7ನೇ ಅವತಾರವಾದ ಮರ್ಯಾದಾ ಪುರುಷೋತ್ತಮ ಭಗವಾನ್ ರಾಮನ ಜನ್ಮದಿನದ ನೆನಪಿಗಾಗಿ ರಾಮ ನವಮಿ ಆಚರಿಸುವುದು ವಾಡಿಕೆ. ಪ್ರತಿ ವರ್ಷ ಚೈತ್ರ ಮಾಸದ ನವಮಿ ದಿನಾಂಕವನ್ನು ಶ್ರೀರಾಮ ನವಮಿ ಎಂದು ಕರೆಯಲಾಗುತ್ತದೆ.

ರಾಮ ನವಮಿಯಂದು ಶ್ರೀರಾಮನನ್ನು ಮೆಚ್ಚಿಸಲು ಭಕ್ತರು ಹಲವು ರೀತಿಯಲ್ಲಿ ಪೂಜೆ, ಆರಾಧನೆಗಳನ್ನು ಕೈಗೊಳ್ಳುತ್ತಾರೆ. ಈ ದಿನ ರಾಮರಕ್ಷಾ ಸ್ತೋತ್ರವನ್ನು ಪಠಿಸುವುದರಿಂದ ಜೀವನದ ಎಲ್ಲಾ ಕಷ್ಟಗಳು ದೂರವಾಗುತ್ತವೆ ಎಂಬ ನಂಬಿಕೆಯಿದೆ. ರಾಮರಕ್ಷಾ ಸ್ತ್ರೋತ್ರ ಪಠಣ ಕೂಡ ವಿಧಿವಿಧಾನಕ್ಕೆ ಅನುಸಾರವಾಗಿ ಇದ್ದರೆ ಅದರ ಫಲಾಫಲಗಳು ಕೂಡ ಹೆಚ್ಚಾಗಿರುತ್ತವೆ.

ಹಾಗಾಗಿ ರಾಮ ನವಮಿಯ ದಿನದಂದು ಬೆಳಗ್ಗೆ ಬೇಗನೆ ಎದ್ದು ಸ್ನಾನ ಮುಗಿಸಿಕೊಂಡು, ಶ್ರೀರಾಮನ ಮೂರ್ತಿಯ ಮುಂದೆ ಕುಳಿತು ಶುದ್ಧ ತುಪ್ಪದ ದೀಪವನ್ನು ಹಚ್ಚಿ. ನಂತರ ಶ್ರೀರಾಮನಿಗೆ ಹೂವುಗಳು ಮತ್ತು ಮಾಲೆಗಳನ್ನು ಅರ್ಪಿಸಿ,  ತಿಲಕವನ್ನು ಹಚ್ಚಿ ಭಕ್ತಿಯಿಂದ ಪೂಜೆ ಮಾಡಿ. ಬಳಿಕ ಕುಶಾನ ಆಸನದ ಮೇಲೆ ಕುಳಿತು ಶಾಂತ ಮನಸ್ಸಿನಿಂದ ರಾಮ ರಕ್ಷಾ ಸ್ತೋತ್ರವನ್ನು ಪಠಿಸಿ. ರಾಮ ರಕ್ಷಾ ಸ್ತೋತ್ರವನ್ನು ನೀವೇ ಪಠಿಸಲು ಸಾಧ್ಯವಾಗದಿದ್ದರೆ ಅರ್ಹ ಬ್ರಾಹ್ಮಣರ ಸಹಾಯದಿಂದ ಈ ಪಠಣವನ್ನು ಮಾಡಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...