ತಮಿಳುನಾಡಿನ ಯುಎನ್‌ಐ ಸುದ್ದಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಹಿರಿಯ ಫೋಟೋ ಜರ್ನಲಿಸ್ಟ್ ಟಿ. ಕುಮಾರ್ ಅವರು ಕಚೇರಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ಹಿರಿಯ ಫೋಟೊ ಜರ್ನಲಿಸ್ಟ್ ಕುಮಾರ್ (56) ಅವರು ಕಳೆದ ಕೆಲ ದಿನಗಳಿಂದ ಆರ್ಥಿಕ ತೊಂದರೆಯಿಂದ ಬಳಲುತ್ತಿದ್ದರು. ಅವರು ಕೆಲಸ ಮಾಡುತ್ತಿದ್ದ ಕಂಪನಿಯು ಅವರಿಗೆ ಸರಿಯಾಗಿ ಸಂಬಳ ನೀಡಿರಲಿಲ್ಲ, ಸಾಕಷ್ಟು ಸಂಬಳ ಬಾಕಿ ಇತ್ತು ಎಂದು ವರದಿಯಲ್ಲಿ ತಿಳಿದು ಬಂದಿದೆ.
ದಿನಕ್ಕೆ 12 ಗಂಟೆ ನಿದ್ರಿಸುವ ಅಖಿಲೇಶ್ 6 ಗಂಟೆ ಸ್ನೇಹಿತರ ಜೊತೆ ಮೋಜು ಮಸ್ತಿಯಲ್ಲಿ ಕಳೆಯುತ್ತಾರೆ: ಯುಪಿ ಸಿಎಂ ಯೋಗಿ ಆದಿತ್ಯನಾಥ್
ಕುಮಾರ್ ಅವರ ಸಹೋದ್ಯೋಗಿಯೊಬ್ಬರು ನಿನ್ನೆ ರಾತ್ರಿ ಚೆನ್ನೈನ, ನುಂಗಂಬಾಕ್ಕಂನಲ್ಲಿರುವ ಏಜೆನ್ಸಿಯ ಕಚೇರಿಯಲ್ಲಿ ಕುಮಾರ್ ಅವರು ಸೀಲಿಂಗ್ ಹುಕ್‌ಗೆ ನೇಣು ಬಿಗಿದುಕೊಂಡಿರುವುದನ್ನ ನೋಡಿದ್ದಾರೆ. ತಕ್ಷಣ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.
ಮಾಹಿತಿ ಮೇರೆಗೆ ಸ್ಥಳಕ್ಕೆ ಪೊಲೀಸರು ಆಗಮಿಸಿ ಕುಮಾರ್ ಅವರನ್ನು ಕಿಲ್ಪಾಕ್ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕರೆದುಕೊಂಡು ಹೋದರು. ಆದರೆ ಆಸ್ಪತ್ರೆ ವೈದ್ಯರು ಕುಮಾರ್ ಅವರು ಸಾವನ್ನಪ್ಪಿದ್ದಾರೆಂದು ಘೋಷಿಸಿದರು. ಮರಣೋತ್ತರ ಪರೀಕ್ಷೆಯ ನಂತರ, ಶವವನ್ನು ಅವರ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ.
ಟಿ. ಕುಮಾರ್ ಅವರಿಗೆ ಮಾಧ್ಯಮ ಕ್ಷೇತ್ರದಲ್ಲಿ 30 ವರ್ಷಗಳ ಅನುಭವವಿದೆ. 1986 ರಲ್ಲಿ ಯುಎನ್ಐ ಸುದ್ದಿ ಸಂಸ್ಥೆಗೆ ಫೋಟೊ ಜರ್ನಲಿಸ್ಟ್ ಆಗಿ ಸೇರಿದ ಅವರು ಉತ್ತಮ ಸ್ಥಾನ ತಲುಪಿದ್ದರು. ಅಷ್ಟೇ ಅಲ್ಲಾ ಏಜೆನ್ಸಿಯೊಂದರ ರಾಜ್ಯ ಬ್ಯೂರೋ ಮುಖ್ಯಸ್ಥ ರಾದ ಮೊದಲ ಛಾಯಾಗ್ರಾಹಕ ಎಂದು ಪ್ರಸಿದ್ಧಿ ಪಡೆದಿದ್ದರು.