alex Certify ಸಂಧಿವಾತ ಮಾತ್ರವಲ್ಲ ಹೊಟ್ಟೆಯ ಕ್ಯಾನ್ಸರ್‌ಗೂ ಕಾರಣವಾಗುತ್ತೆ ನಾವು ಮಾಡುವ ಈ ತಪ್ಪು….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಂಧಿವಾತ ಮಾತ್ರವಲ್ಲ ಹೊಟ್ಟೆಯ ಕ್ಯಾನ್ಸರ್‌ಗೂ ಕಾರಣವಾಗುತ್ತೆ ನಾವು ಮಾಡುವ ಈ ತಪ್ಪು….!

ಹೆಚ್ಚು ಉಪ್ಪು ಮತ್ತು ಹೆಚ್ಚು ಸಕ್ಕರೆ ತಿನ್ನುವುದು ಹಾನಿಕಾರಕವೆಂದು ಪರಿಗಣಿಸಲಾಗುತ್ತದೆ. ಸಕ್ಕರೆಯನ್ನು ಅತಿಯಾಗಿ ಸೇವಿಸುವುದರಿಂದ ತೂಕ ಹೆಚ್ಚಾಗಬಹುದು. ಸಕ್ಕರೆಯ ಮಟ್ಟವು ಹೆಚ್ಚಾಗುವ ಅಪಾಯವಿದೆ. ಅದೇ ರೀತಿ ಹೆಚ್ಚು ಉಪ್ಪು ತಿನ್ನುವುದು ಕೂಡ ಅಪಾಯಕಾರಿಯೇ. ಇದರಿಂದ ರಕ್ತದೊತ್ತಡ ಹೆಚ್ಚಾಗುತ್ತದೆ ಮತ್ತು ಹೃದಯದ ಕಾಯಿಲೆಗಳಿಗೆ ದುಕಾರಣವಾಗಬಹುದು.ಅದಕ್ಕಾಗಿಯೇ ಸಕ್ಕರೆ ಮತ್ತು ಉಪ್ಪನ್ನು ಕಡಿಮೆ ತಿನ್ನಲು ಸಲಹೆ ನೀಡಲಾಗುತ್ತದೆ.

ಹೆಚ್ಚಿನ ಪ್ರಮಾಣದ ಉಪ್ಪು ಬೆರೆಸಿದ ಪದಾರ್ಥಗಳನ್ನು ಸೇವಿಸುವುದರಿಂದ ಸಂಧಿವಾತಕ್ಕೆ ತುತ್ತಾಗಬಹುದು. ಇದು ಮೂಳೆಗಳಿಗೆ ಹಾನಿ ಮಾಡುತ್ತದೆ. ಉಪ್ಪು ಮೂಳೆಗಳ ನಷ್ಟದ ಅಪಾಯವನ್ನು ಹೆಚ್ಚಿಸುತ್ತದೆ. ಅತಿಯಾದ ಉಪ್ಪು ನಮ್ಮ ದೇಹದ ಕ್ಯಾಲ್ಸಿಯಂ ಅನ್ನು ಕಡಿಮೆ ಮಾಡಬಹುದು.  ಆರೋಗ್ಯ ತಜ್ಞರ ಪ್ರಕಾರ, ಹೆಚ್ಚಿನ ಪ್ರಮಾಣದ ಉಪ್ಪನ್ನು ಸೇವಿಸುವುದರಿಂದ ದೇಹದಿಂದ ಅದೇ ಪ್ರಮಾಣದ ಕ್ಯಾಲ್ಸಿಯಂ ಕಡಿಮೆಯಾಗುತ್ತದೆ.

ಹೆಚ್ಚಿನ ಸೋಡಿಯಂ ಕ್ಯಾಲ್ಸಿಯಂ ವಿಸರ್ಜನೆಯನ್ನು ಹೆಚ್ಚಿಸುತ್ತದೆ. ಕ್ಯಾಲ್ಸಿಯಂ ಕೊರತೆಯು ಕಡಿಮೆ ಮೂಳೆ ಸಾಂದ್ರತೆಗೆ ಕಾರಣವಾಗಬಹುದು, ಇದು ಸಂಧಿವಾತ ಅಥವಾ ಮೂಳೆ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಅಷ್ಟೇ ಅಲ್ಲ ಹೆಚ್ಚು ಸೋಡಿಯಂ ಸೇವನೆಯಿಂದ ಆಸ್ಟಿಯೊಪೊರೋಸಿಸ್‌ ಬರುವ ಸಾಧ್ಯತೆ ಇದೆ.

ಹೃದಯಕ್ಕೆ ಅಪಾಯಕಾರಿ- ಹೆಚ್ಚು ಸೋಡಿಯಂ ಸೇವನೆಯು ಹೃದಯದ ಆರೋಗ್ಯವನ್ನು ಹದಗೆಡಿಸುತ್ತದೆ. ಹೆಚ್ಚಿನ ಸೋಡಿಯಂ ದೇಹದಲ್ಲಿ ಪೊಟ್ಯಾಸಿಯಮ್ ಪ್ರಮಾಣವನ್ನು ಕಡಿಮೆ ಮಾಡುತ್ತದೆ ಮತ್ತು ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತದೆ. ಹೆಚ್ಚಿನ ಸೋಡಿಯಂ ಪದಾರ್ಥಗಳನ್ನು ಸೇವಿಸುವವರಲ್ಲಿ ಅಕಾಲಿಕ ಮರಣದ ಅಪಾಯವು ಉಳಿದವರಿಗಿಂತ ಶೇ.20ರಷ್ಟು  ಹೆಚ್ಚಾಗಿರುತ್ತದೆ. ಸೋಡಿಯಂ ರಕ್ತದೊತ್ತಡವನ್ನು ಹೆಚ್ಚಿಸುವ ಮೂಲಕ ಹೃದ್ರೋಗಕ್ಕೆ ಕಾರಣವಾಗಬಹುದು.

ಹೊಟ್ಟೆಯ ಕ್ಯಾನ್ಸರ್ – ಹೆಚ್ಚಿನ ಸೋಡಿಯಂ ಆಹಾರವನ್ನು ಸೇವಿಸುವುದರಿಂದ ಹೊಟ್ಟೆಯ ಕ್ಯಾನ್ಸರ್ ಬರಬಹುದು. 2,68,000 ಕ್ಕೂ ಹೆಚ್ಚು ಜನರನ್ನು ಸಂಶೋಧನೆಗೆ ಒಳಪಡಿಸಿ ಇದನ್ನು ಪತ್ತೆ ಮಾಡಲಾಗಿದೆ. ದಿನಕ್ಕೆ 1 ಗ್ರಾಂ ಉಪ್ಪನ್ನು ಸೇವಿಸುವವರಿಗೆ ಹೋಲಿಸಿದರೆ ದಿನಕ್ಕೆ 3 ಗ್ರಾಂ ಅಥವಾ ಅದಕ್ಕಿಂತ ಹೆಚ್ಚು ಉಪ್ಪನ್ನು ತಿನ್ನುವವರಲ್ಲಿ ಹೊಟ್ಟೆಯ ಕ್ಯಾನ್ಸರ್ ಅಪಾಯ 68 ಪ್ರತಿಶತದಷ್ಟು ಹೆಚ್ಚಾಗಿರುತ್ತದೆ. ಹೆಚ್ಚು ಉಪ್ಪನ್ನು ಹೊಂದಿರುವ ವಸ್ತುಗಳು ಹೊಟ್ಟೆಯ ಹುಣ್ಣು ಅಥವಾ ಉರಿಯೂತವನ್ನು ಉತ್ತೇಜಿಸಬಹುದು.

ಎಷ್ಟು ಉಪ್ಪು ತಿನ್ನಬೇಕು? ಆರೋಗ್ಯವಂತ ವ್ಯಕ್ತಿಗೆ ದಿನಕ್ಕೆ 1500-2000 ಮಿಲಿಗ್ರಾಂ ಉಪ್ಪನ್ನು ಸೇವಿಸುವುದರಿಂದ ಸುರಕ್ಷಿತವಾಗಿರಬಹುದು. ಆದರೆ ಚಿಪ್ಸ್, ತಿಂಡಿಗಳು ಅಥವಾ ಇತರ ಉಪ್ಪು ಬೆರೆತ ಪದಾರ್ಥಗಳ ಸೇವನೆ ಸೂಕ್ತವಲ್ಲ.  ಅಂದರೆ ದಿನಕ್ಕೆ ಒಂದು ಚಮಚಕ್ಕಿಂತ ಹೆಚ್ಚು ಉಪ್ಪನ್ನು ಸೇವಿಸಬಾರದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...