alex Certify ಸಂದರ್ಶನಕ್ಕೆ ಹಾಜರಾದವನೇ ಒಬ್ಬ……ಕೆಲಸಕ್ಕೆ ಬಂದವ ಮತ್ತೊಬ್ಬ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಂದರ್ಶನಕ್ಕೆ ಹಾಜರಾದವನೇ ಒಬ್ಬ……ಕೆಲಸಕ್ಕೆ ಬಂದವ ಮತ್ತೊಬ್ಬ….!

ಯಾವುದೇ ಕಂಪನಿಯಲ್ಲಿ ಉದ್ಯೋಗಕ್ಕೆ ಸೇರುವ ಮುನ್ನ ಮೊದಲು ಸಂದರ್ಶನಗಳನ್ನು ನಡೆಸಿ ಉದ್ಯೋಗಿಗಳನ್ನು ಆಯ್ಕೆ ಮಾಡಲಾಗುತ್ತದೆ. ಇಲ್ಲಿ ಕೆಲವೇ ಕೆಲವು ಅರ್ಹರು ಮಾತ್ರ ಆಯ್ಕೆಯಾಗುತ್ತಾರೆ. ಆದರೆ, ವಿಚಿತ್ರ ಘಟನೆಯೊಂದರಲ್ಲಿ ಸಂದರ್ಶನಕ್ಕೆ ಹಾಜರಾದ ವ್ಯಕ್ತಿಯನ್ನು ಆಯ್ಕೆ ಮಾಡಿದ ಸಂದರ್ಶನಕಾರ, ಬಳಿಕ ಕಚೇರಿಗೆ ಹಾಜರಾದವನನ್ನು ನೋಡಿ ತಬ್ಬಿಬ್ಬಾಗಿರುವ ವಿಲಕ್ಷಣ ಘಟನೆ ನಡೆದಿದೆ.

ಮಹಿಳೆಯೊಬ್ಬರು ತಮ್ಮ ಪತಿ ಕೆಲಸದಲ್ಲಿ ಎದುರಿಸಿದ ವಿಲಕ್ಷಣ ಘಟನೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಹೌದು, ಇದೊಂಥರಾ ಸಂದರ್ಶನಕ್ಕೆ ಬಂದವನೇ ಬೇರೆ, ಕೆಲಸಕ್ಕೆ ಹಾಜರಾದವನೇ ಬೇರೆ ಎಂಬಂತಾಗಿದೆ. ಕೊನೆಗೆ ಉದ್ಯೋಗ ನೀಡಿದಾತ ಮಾತ್ರ ಇಂಗು ತಿಂದ ಮಂಗನಂತಾದ ಪರಿಸ್ಥಿತಿ ಎದುರಾಗಿದೆ. ನೇಮಕಾತಿ ಸಮಿತಿಯಲ್ಲಿದ್ದ ಮಹಿಳೆಯ ಪತಿ ಹಲವಾರು ಮಂದಿಯ ಸಂದರ್ಶನ ನಡೆಸಿದ್ದಾರೆ. ಸಂದರ್ಶನದಲ್ಲಿ ಒಬ್ಬ ವ್ಯಕ್ತಿಯನ್ನು ಆಯ್ಕೆ ಮಾಡಿದ್ದು, ಆತನಿಗೆ ಕೆಲಸಕ್ಕೆ ಹಾಜರಾಗುವಂತೆ ಆಫರ್ ನೀಡಲಾಗಿತ್ತು. ಆದರೆ, ಕೆಲಸಕ್ಕೆ ಬಂದಾತ ಮಾತ್ರ ಬೇರೆ ವ್ಯಕ್ತಿಯಾಗಿದ್ದ ಅನ್ನೋದು ಈತನ ಗೊಂದಲಕ್ಕೆ ಕಾರಣವಾಗಿದೆ

ಮಧ್ಯಮ ಗಾತ್ರದ ಖಾಸಗಿ ಕಂಪನಿಯಲ್ಲಿ ನಾಯಕತ್ವದ ತಂಡದಲ್ಲಿ ಮಹಿಳೆಯ ಪತಿ ಕೆಲಸ ಮಾಡುತ್ತಿದ್ದಾರೆ. ಜಾನ್ ಎಂಬ ವ್ಯಕ್ತಿಯನ್ನು ಸಂದರ್ಶಿಸಿದ ಅವರಿಗೆ ಕೆಲಸಕ್ಕೆ ಬಂದವ ಮಾತ್ರ ಬೇರೆ ಜಾನ್ ಆಗಿದ್ದ. ಆತನ ಮುಖಚರ್ಯೆ, ಮಾತು ಕೇಳಿ ಬಾಸ್ ಗೊಂದಲಕ್ಕೊಳಗಾಗಿದ್ದಾರೆ.

ಇನ್ನು ನೇಮಕಾತಿ ಸಮಿತಿಯು ಸರಿಯಾದ ಅಭ್ಯರ್ಥಿಗೆ ಕೆಲಸ ನೀಡಲಾಗಿದೆ ಎಂಬುದನ್ನು ದೃಢಪಡಿಸಿದೆ. ಬಳಿಕ ಸಾಕಷ್ಟು ಗೊಂದಲವುಂಟಾಗಿದ್ದು, ಸಂದರ್ಶಕ ಏನು ಮಾಡುವುದೆಂದು ತಿಳಿಯದೆ ತಲೆಕೆರೆದುಕೊಂಡಿದ್ದಾರೆ. ಇದೀಗ ಆ ಉದ್ಯೋಗಿ ತಾನು ಕೆಲಸವನ್ನು ಬಿಟ್ಟಿರುವುದಾಗಿ ಹೇಳಿ ನಾಪತ್ತೆಯಾಗಿಬಿಟ್ಟಿದ್ದಾರಂತೆ..! ಆದರೂ ಇವೆಲ್ಲಾ ಹೇಗೆ ಸಾಧ್ಯವಾಯಿತು ಅನ್ನೋದು ಇನ್ನೂ ಬಗೆಹರಿಯದ ಪ್ರಶ್ನೆಯಾಗಿಯೇ ಉಳಿದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...