alex Certify ‘ಸಂತ ತುಕಾರಾಮ’ ರ ಉಡುಪಿನಲ್ಲಿ ಕಂಗೊಳಿಸಿದ ಮೋದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಸಂತ ತುಕಾರಾಮ’ ರ ಉಡುಪಿನಲ್ಲಿ ಕಂಗೊಳಿಸಿದ ಮೋದಿ

ಪ್ರಧಾನಿ ನರೇಂದ್ರ ಮೋದಿಯವರು ಯಾವುದೇ ಕಾರ್ಯಕ್ರಮಗಳಿಗೆ ತೆರಳಿದರೆ ಆ ಸಂದರ್ಭವನ್ನು ಪ್ರತಿಬಿಂಬಿಸುವ ಉಡುಪು ಧರಿಸುವುದು ಸಾಮಾನ್ಯ ಸಂಗತಿಯಾಗಿದೆ. ಈ ಕಾರಣಕ್ಕಾಗಿಯೇ ಅವರು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಈಗ ಮತ್ತೊಮ್ಮೆ ನರೇಂದ್ರ ಮೋದಿಯವರು ವಿಶಿಷ್ಟ ಉಡುಪಿನಲ್ಲಿ ಕಂಗೊಳಿಸಿದ್ದು, ಇದರ ಫೋಟೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇದಕ್ಕೆ ಸಾಕ್ಷಿಯಾಗಿದ್ದು ಮಹಾರಾಷ್ಟ್ರದಲ್ಲಿ ನಡೆದ ಕಾರ್ಯಕ್ರಮ.

ಮಹಾರಾಷ್ಟ್ರದ ದೇವುವಿನಲ್ಲಿ ನಿರ್ಮಿಸಲಾದ 17ನೇ ಶತಮಾನದ ಭಕ್ತಿ ಆಂದೋಲನದ ಹರಿಕಾರ ಸಂತ ತುಕಾರಾಮರ ಶಿಲಾ ಮಂದಿರವನ್ನು ಮಂಗಳವಾರದಂದು ನರೇಂದ್ರಮೋದಿಯವರು ಲೋಕಾರ್ಪಣೆಗೊಳಿಸಿದ್ದು, ಈ ವೇಳೆ ಅವರಿಗೆ ಸಂತ ತುಕಾರಾಮರ ರೀತಿ ಪೇಟ ತೊಡಿಸಿ, ಕೈಗೆ ತಂಬೂರಿ ನೀಡಿ ಅಭಿನಂದಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...