ತಕ್ಷಣ ಎನರ್ಜಿ ನೀಡಬಲ್ಲ, ಹೊಟ್ಟೆ ತುಂಬಿಸಬಲ್ಲ, ಕಡಿಮೆ ಬೆಲೆಗೆ ಸಿಗಬಲ್ಲ ಹಣ್ಣು ಬಾಳೆಹಣ್ಣು. ಈ ಹಣ್ಣನ್ನು ಹಾಗೆ ತಿಂದರೂ ಚೆಂದ ಅಥವಾ ವೆರೈಟಿ ವೆರೈಟಿ ತಿನಿಸುಗಳನ್ನು ಮಾಡಿ ತಿಂದರೂ ಚೆಂದ.
ಬಾಳೆಹಣ್ಣಿನ ಚಿಪ್ಸ್, ಬಜ್ಜಿ ರುಚಿ ನೋಡಿಯಾಯಿತು. ಈಗ ಬಾಳೆಹಣ್ಣಿನ ಟೋಸ್ಟ್ ಮಾಡುವುದು ಹೇಗೆ ಎಂದು ತಿಳಿಯಬೇಕಾ. ಇಲ್ಲಿದೆ ಅದರ ರೆಸಿಪಿ.
ಬೇಕಾಗುವ ಸಾಮಾಗ್ರಿಗಳು
ಬಾಳೆಹಣ್ಣು – 3
ಸಕ್ಕರೆ – 2 ಚಮಚ
ಜೇನುತುಪ್ಪ – 1 ಚಮಚ
ತುಪ್ಪ – 1 ಚಮಚ
ಮಾಡುವ ವಿಧಾನ
ಮೊದಲು ಬಾಳೆಹಣ್ಣನ್ನು ಬಿಲ್ಲೆಗಳಂತೆ ಕತ್ತರಿಸಿಟ್ಟುಕೊಳ್ಳಬೇಕು. ನಂತರ ಒಂದು ಬಾಣಲೆಗೆ ತುಪ್ಪ ಹಾಕಿ ಬಿಸಿ ಯಾಗಲು ಬಿಡಬೇಕು. ತುಪ್ಪ ಬಿಸಿಯಾಗುತ್ತಿದ್ದಂತೆ ಬಾಳೆಹಣ್ಣುಗಳನ್ನು ಹಾಕಬೇಕು. ಹಣ್ಣುಗಳು ಹೊಂಬಣ್ಣ ಬರುವವರೆಗೆ ಹುರಿಯಬೇಕು.
ನಂತರ ಅದಕ್ಕೆ ಸಕ್ಕರೆ ಸೇರಿಸಿ. ಸಕ್ಕರೆಯ ಕರಗಿ ನೀರಾದ ನಂತರ ಮತ್ತೊಮ್ಮೆ ಕೈಯಾಡಿಸಿ ಒಂದು ಬೌಲ್ ಗೆ ವರ್ಗಾಯಿಸಿ ಕೊಳ್ಳಬೇಕು. ನಂತರ ಜೇನುತುಪ್ಪ ಬೆರೆಸಿ, ಬ್ರೆಡ್ ಮೇಲೆ ಸವರಿ ಬಾಳೆಹಣ್ಣಿನ ಟೋಸ್ಟ್ ತಿಂದರೆ ರುಚಿಯಾಗಿರುತ್ತದೆ.