alex Certify ಸಂಜೆ ಸ್ನ್ಯಾಕ್ಸ್ ಗೆ ಟ್ರೈ ಮಾಡಿ ʼಇಡ್ಲಿ ಮಂಚೂರಿಯನ್ʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಂಜೆ ಸ್ನ್ಯಾಕ್ಸ್ ಗೆ ಟ್ರೈ ಮಾಡಿ ʼಇಡ್ಲಿ ಮಂಚೂರಿಯನ್ʼ

Image result for idli manchurianಸಾಮಾನ್ಯವಾಗಿ ಬೆಳಗ್ಗೆ ತಿಂಡಿ ಇಡ್ಲಿ ಉಳಿದಿದ್ದರೆ ಸಂಜೆಗೆ ಅದನ್ನು ತಿಂದು ಮುಗಿಸುತ್ತೇವೆ. ಆದರೆ ಮಕ್ಕಳು ಹಾಗಲ್ಲ. ಏನಾದರೂ ಸ್ಪೆಷಲ್ ಸ್ನಾಕ್ಸ್ ಗಳನ್ನು ಸವಿಯಲು ಇಷ್ಟಪಡುತ್ತಾರೆ.

ಎಲ್ಲರೂ ಇಷ್ಟಪಡುವ ಗೋಬಿಮಂಚೂರಿ ತರಹನೇ ಉಳಿದಿರುವ ಇಡ್ಲಿಯಲ್ಲಿ ಇಡ್ಲಿ ಮಂಚೂರಿಯನ್ ತಯಾರಿಸಬಹುದು.

ಇಲ್ಲಿದೆ ಮನೆಯಲ್ಲಿ ತಯಾರಿಸಬಹುದಾದ ಇಡ್ಲಿ ಮಂಚೂರಿಯನ್ ರೆಸಿಪಿ.

ಬೇಕಾಗುವ ಸಾಮಾಗ್ರಿಗಳು

ಉಳಿದ ಇಡ್ಲಿಗಳು
ಮೈದಾ ಹಿಟ್ಟು ಸ್ವಲ್ಪ
ಕಾರ್ನ್ ಫ್ಲೋರ್ – 1/2 ಕಪ್
ಅಕ್ಕಿಹಿಟ್ಟು ಸ್ವಲ್ಪ
ಸೋಡಾ ಚಿಟಿಕೆಯಷ್ಟು
ಇಂಗು ಚಿಟಿಕೆಯಷ್ಟು
ಸೋಯಾ ಸಾಸ್ – 1 ಸ್ಪೂನ್
ಚಿಲ್ಲಿ ಪೌಡರ್ – 4 ಸ್ಪೂನ್
ಟೊಮೆಟೊ ಸಾಸ್ – 1 ಸ್ಪೂನ್
ವಿನೆಗರ್ – 1/4 ಚಮಚ
ಚಿಲ್ಲಿ ಸಾಸ್ – 1 ಸ್ಪೂನ್
ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಚಮಚ

ಮಾಡುವ ವಿಧಾನ

ಮೊದಲಿಗೆ ಇಡ್ಲಿಯನ್ನು ಸಣ್ಣದಾಗಿ ನಾಲ್ಕೈದು ಪೀಸ್ ಮಾಡಿಟ್ಟುಕೊಳ್ಳಬೇಕು. ನಂತರ ಮೈದಾಹಿಟ್ಟು, ಕಾರ್ನ್ ಫ್ಲೋರ್, ಅಕ್ಕಿಹಿಟ್ಟು, ಸೋಡಾ, ಚಿಲ್ಲಿ ಪೌಡರ್, ಇಂಗು ಎಲ್ಲವನ್ನೂ ಮಿಕ್ಸ್ ಮಾಡಿ ಬೋಂಡಾ ಹದಕ್ಕೆ ಕಲಸಿ ಇಟ್ಟುಕೊಳ್ಳಬೇಕು.

ಈಗ ಇಡ್ಲಿಯನ್ನು ಈ ಮಿಶ್ರಣದಲ್ಲಿ ಅದ್ದಿ ಬೋಂಡಾದಂತೆ ಕರೆದುಕೊಳ್ಳಬೇಕು. ಈಗ ಒಂದು ಪ್ಯಾನ್ ಗೆ ಎಣ್ಣೆ, ಹಸಿಮೆಣಸು, ಈರುಳ್ಳಿ, ಟೊಮ್ಯಾಟೊ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಸಾಸ್, ಸೋಯಾ ಸಾಸ್, ಚಿಲ್ಲಿ ಸಾಸ್ ಎಲ್ಲವನ್ನು ಹಾಕಿ ಫ್ರೈ ಮಾಡಿಕೊಳ್ಳಬೇಕು. ಇದನ್ನು ಬೋಂಡಾದಂತೆ ಕರೆದುಕೊಂಡ ಇಡ್ಲಿಯ ಜೊತೆ ಸೇರಿಸಿದರೆ ಇಡ್ಲಿ ಮಂಚೂರಿಯನ್ ರೆಡಿ ಟು ಈಟ್.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...