ಉಳಿದ ಇಡ್ಲಿಗಳು
ಮೈದಾ ಹಿಟ್ಟು ಸ್ವಲ್ಪ
ಕಾರ್ನ್ ಫ್ಲೋರ್ – 1/2 ಕಪ್
ಅಕ್ಕಿಹಿಟ್ಟು ಸ್ವಲ್ಪ
ಸೋಡಾ ಚಿಟಿಕೆಯಷ್ಟು
ಇಂಗು ಚಿಟಿಕೆಯಷ್ಟು
ಸೋಯಾ ಸಾಸ್ – 1 ಸ್ಪೂನ್
ಚಿಲ್ಲಿ ಪೌಡರ್ – 4 ಸ್ಪೂನ್
ಟೊಮೆಟೊ ಸಾಸ್ – 1 ಸ್ಪೂನ್
ವಿನೆಗರ್ – 1/4 ಚಮಚ
ಚಿಲ್ಲಿ ಸಾಸ್ – 1 ಸ್ಪೂನ್
ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಚಮಚ
ಮಾಡುವ ವಿಧಾನ
ಮೊದಲಿಗೆ ಇಡ್ಲಿಯನ್ನು ಸಣ್ಣದಾಗಿ ನಾಲ್ಕೈದು ಪೀಸ್ ಮಾಡಿಟ್ಟುಕೊಳ್ಳಬೇಕು. ನಂತರ ಮೈದಾಹಿಟ್ಟು, ಕಾರ್ನ್ ಫ್ಲೋರ್, ಅಕ್ಕಿಹಿಟ್ಟು, ಸೋಡಾ, ಚಿಲ್ಲಿ ಪೌಡರ್, ಇಂಗು ಎಲ್ಲವನ್ನೂ ಮಿಕ್ಸ್ ಮಾಡಿ ಬೋಂಡಾ ಹದಕ್ಕೆ ಕಲಸಿ ಇಟ್ಟುಕೊಳ್ಳಬೇಕು.
ಈಗ ಇಡ್ಲಿಯನ್ನು ಈ ಮಿಶ್ರಣದಲ್ಲಿ ಅದ್ದಿ ಬೋಂಡಾದಂತೆ ಕರೆದುಕೊಳ್ಳಬೇಕು. ಈಗ ಒಂದು ಪ್ಯಾನ್ ಗೆ ಎಣ್ಣೆ, ಹಸಿಮೆಣಸು, ಈರುಳ್ಳಿ, ಟೊಮ್ಯಾಟೊ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಸಾಸ್, ಸೋಯಾ ಸಾಸ್, ಚಿಲ್ಲಿ ಸಾಸ್ ಎಲ್ಲವನ್ನು ಹಾಕಿ ಫ್ರೈ ಮಾಡಿಕೊಳ್ಳಬೇಕು. ಇದನ್ನು ಬೋಂಡಾದಂತೆ ಕರೆದುಕೊಂಡ ಇಡ್ಲಿಯ ಜೊತೆ ಸೇರಿಸಿದರೆ ಇಡ್ಲಿ ಮಂಚೂರಿಯನ್ ರೆಡಿ ಟು ಈಟ್.