ಇನ್ನೇನು ಸಂಕ್ರಾಂತಿ ಹಬ್ಬ ಬಂದೇ ಬಡ್ತು. ಸಂಕ್ರಾಂತಿಗೆ ಸಕ್ಕರೆ ಅಚ್ಚು ಮಾಡುವುದು ಹೇಗಪ್ಪಾ ಎಂದು ಯೋಚಿಸುತ್ತಿದ್ದೀರಾ ಇಲ್ಲಿದೆ ನೋಡಿ ಸುಲಭ ವಿಧಾನ.
1 ಕಪ್-ಸಕ್ಕರೆ, ½ ಕಪ್- ನೀರು, 1 ಟೇಬಲ್ ಸ್ಪೂನ್-ಮೊಸರು, 2 ಟೇಬಲ್ ಸ್ಪೂನ್ ಹಾಲು.
ಸಕ್ಕರೆ ಅಚ್ಚನ್ನು ಮಾಡುವ ಮರದ ಮೌಲ್ಡ್ ಅನ್ನು 5-6 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ. 1 ಕಪ್ ಸಕ್ಕರೆ ಹಾಗೂ ½ ಕಪ್ ನೀರಿನಲ್ಲಿ 3 ಗಂಟೆಗಳ ಕಾಲ ನೆನೆಸಿಡಿ. ನಂತರ ಇದನ್ನು ಗ್ಯಾಸ್ ಮೇಲೆ ಇಟ್ಟು ಸಣ್ಣ ಉರಿಯಲ್ಲಿ ಕುದಿಸಿ ಇದಕ್ಕೆ ಹಾಲು ಸೇರಿಸಿ ಮತ್ತೊಮ್ಮೆ ಕುದಿಸಿ. ನಂತರ ಇದನ್ನು ಒಂದು ಕಾಟನ್ ಬಟ್ಟೆಯ ಸಹಾಯದಿಂದ ಒಂದು ಪಾತ್ರೆಗೆ ಸೋಸಿಕೊಳ್ಳಿ.
ಹೀಗೆ ಸೋಸಿಕೊಂಡ ನೀರನ್ನು ಗ್ಯಾಸ್ ಮೇಲೆ ಇಟ್ಟು ಕುದಿಸಿಕೊಳ್ಳಿ. ನಂತರ ಇದಕ್ಕೆ ಮೊಸರು ಸೇರಿಸಿ ಕುದಿಸಿಕೊಂಡು ಪುನಃ ಬಟ್ಟೆಯ ಸಹಾಯದಿಂದ ಸೋಸಿಕೊಳ್ಳಿ. ನಂತರ ಇದನ್ನುಗ್ಯಾಸ್ ಮೇಲೆ ಇಟ್ಟು ಮತ್ತೊಮ್ಮೆ ಕುದಿಸಿ. ಇದು ದಪ್ಪಗಾಗುತ್ತ ಬರುತ್ತದೆ ಹಾಗೇ ಇದರ ಬಣ್ಣ ಬಿಳಿ ಆಗುತ್ತದೆ. ಆಗ ಇದನ್ನು ಮೌಲ್ಡ್ ಗೆ ಸುರಿಯಿರಿ. ಇದು ಸ್ವಲ್ಪ ತಣ್ಣಗಾದ ಮೇಲೆ ಟೂತ್ ಪಿಕ್ ನ ಸಹಾಯದಿಂದ ಎಬ್ಬಿಸಿ ತೆಗೆಯಿರಿ.