alex Certify ಸಂಕೋಚ ಸ್ವಭಾವದ ʼಯುವತಿʼಯನ್ನು ಒಲಿಸಿಕೊಳ್ಳುವುದು ಹೇಗೆ…..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಂಕೋಚ ಸ್ವಭಾವದ ʼಯುವತಿʼಯನ್ನು ಒಲಿಸಿಕೊಳ್ಳುವುದು ಹೇಗೆ…..?

How to Tell if a Shy Girl Likes You: 22 Signs & Ways to Open Her Up

ಕೆಲವರಿಗೆ ಎಲ್ಲರನ್ನೂ ಮಾತನಾಡಿಸಬೇಕು ಎಂಬ ಹಂಬಲ. ಮತ್ತೆ ಕೆಲವರದು ಸ೦ಕೋಚದ ಸ್ವಭಾವ. ಸಾಮಾನ್ಯವಾಗಿ ಕೆಲವು ಯುವತಿಯರು ಅ೦ತರ್ಮುಖಿಗಳಾಗಿರುತ್ತಾರೆ. ಬೇರೆಯರ ಜೊತೆ ಅಷ್ಟಾಗಿ ಬೆರೆಯುವುದಿಲ್ಲ. ಹಾಗಿದ್ದರೆ, ಸ೦ಕೋಚ ಸ್ವಭಾವದವರನ್ನು ಒಲಿಸಿಕೊಳ್ಳಲು ಏನು ಮಾಡಬೇಕು?

ಮೊದಲಿಗೆ ಸ೦ಕೋಚ ಸ್ವಭಾವದ ಹುಡುಗಿಯರನ್ನು ಒಲಿಸಿಕೊಳ್ಳುವುದು ಕಷ್ಟ. ಆದರೆ, ನ೦ತರದಲ್ಲಿ ಅವರೊಂದಿಗಿನ ಒಡನಾಟದಿಂದ ನೀವು ಅವರಿಗೆ ಆತ್ಮೀಯರಾಗಬಹುದು. ಸ೦ಕೋಚ ಸ್ವಭಾವದ ಯುವತಿಯರು ಸ೦ಬ೦ಧಗಳ ವಿಚಾರದಲ್ಲಿ ಬದ್ಧತೆ ಹೊಂದಿರುತ್ತಾರೆ. ಹೆಚ್ಚು ಬೆರೆಯುವ ಸ್ವಭಾವದ ಯುವತಿಯರಿಗಿಂತ ಸೈಲೆಂಟ್ ಯುವತಿಯರು ಹೆಚ್ಚಾಗಿ ದೃಢ ನಿರ್ಧಾರ ಕೈಗೊಳ್ಳುವವರಾಗಿರುತ್ತಾರೆ.

ಸ೦ಕೋಚ ಸ್ವಭಾವದವರನ್ನು ಒಲಿಸಿಕೊಳ್ಳುವ ನಿಟ್ಟಿನಲ್ಲಿ ನಿಮಗೊ೦ದಿಷ್ಟು ತಾಳ್ಮೆಯಿರಲಿ. ಪೋಷಕರು ಹೆಣ್ಣುಮಕ್ಕಳನ್ನು ಹೊರಗೆ ಬಿಡದೆ ಅಂತರ್ಮುಖಿಯಾಗಲು ಕಾರಣರಾಗುತ್ತಾರೆ. ಅ೦ತಹ ಸ೦ಕೋಚ ಸ್ವಭಾವದವರು ಬಹಿರ೦ಗವಾಗಿ ಕೆಲವೊ೦ದು ವರ್ತನೆಗಳಲ್ಲಿ ಎ೦ದೆ೦ದಿಗೂ ತಮ್ಮನ್ನು ತೊಡಗಿಸಿಕೊಳ್ಳಲಾರರು. ಅ೦ತಹವರು ಪುರುಷ ದ್ವೇಷಿಗಳೇನೂ ಆಗಿರುವುದಿಲ್ಲ. ಅದು ಕೇವಲ ಅವರು ಬೆಳೆದು ಬ೦ದ ಪರಿಸರವಷ್ಟೇ.

ಅವರಲ್ಲಿ ಅವರದ್ದೇ ಆದ೦ತಹ ಉತ್ತಮ ನಡವಳಿಕೆಗಳನ್ನು ಹುಟ್ಟು ಹಾಕಿರುತ್ತದೆ. ಅ೦ತಹ ಸ೦ಕೋಚ ಸ್ವಭಾವದ ಹುಡುಗಿಯರನ್ನು ಒಲಿಸಿಕೊಳ್ಳುವ೦ತಾಗಲು, ಸರಳ, ಸಹಜವಾದ ಹುಡುಗನ೦ತೆ ಅಕೆಗೆ ನೀವು ಕಾಣಬೇಕು. ನೀವು ತೀರಾ ನೇರಾನೇರ ಎನ್ನುವ ರೀತಿಯಲ್ಲಿ ಅ೦ತಹ ಹುಡುಗಿಯರೊಡನೆ ವ್ಯವಹರಿಸಿದಲ್ಲಿ, ಆಕೆಯು ಭಯಭೀತಳಾಗುವ ಸಾಧ್ಯತೆ ಇರುತ್ತದೆ. ಜೊತೆಗೆ, ಆಕೆಯೊ೦ದಿಗಿನ ನಿಮ್ಮ ವರ್ತನೆಗಳೂ ಕೂಡ ತೀರಾ ಸಾಮಾನ್ಯವಾಗಿ, ಸಹಜವಾಗಿಯೇ ಇರಬೇಕು.

ಪ್ರಥಮ ಭೇಟಿಯಲ್ಲಿಯೇ ನಿಮ್ಮ ಉದ್ದೇಶಗಳನ್ನು ಆಕೆಗೆ ಸ್ಪಷ್ಟಪಡಿಸಲೇಕೂಡದು. ಆ ಹುಡುಗಿಯು ನಿಮ್ಮೊಡನೆ ಮನಬಿಚ್ಚಿ ಮಾತನಾಡುವಷ್ಟು ಸಲಿಗೆಯನ್ನು ಬೆಳೆಸಿಕೊ೦ಡಿದ್ದಾಳೆ ಎ೦ಬ ಸ೦ಗತಿಯು ನಿಮಗೆ ಮನವರಿಕೆಯಾಗುವವರೆಗೂ ಕೂಡ, ನಿಮಗೆ ಆಕೆಯ ಸಹಾಯದ ಅವಶ್ಯಕತೆ ಇರುವ ಕಾರಣಕ್ಕಾಗಿ ನೀವು ಆಕೆಯನ್ನು ಸಮೀಪಿಸುತ್ತಿರುವಿರೆ೦ಬ ಭಾವನೆಯು ಆಕೆಯಲ್ಲು೦ಟಾಗಬೇಕು.

ಹಾಸ್ಯಪ್ರಜ್ಞೆಯನ್ನು ಆಗಾಗ್ಗೆ ವ್ಯಕ್ತಪಡಿಸಿ. ನಿಮ್ಮ ಮೊದಲ ಸುಮಾರು ಹತ್ತು ಭೇಟಿಗಳು ಎಷ್ಟು ಸಾಧ್ಯವೋ ಅಷ್ಟು ಸಾಧಾರಣವಾದದ್ದಾಗಿರಬೇಕು. ನಿಮ್ಮ ಬಾಂಧವ್ಯ ಗಟ್ಟಿಯಾದ ನಂತರ ನೀವು ಆ ಯುವತಿಗೆ ನಿಮ್ಮ ಅಭಿಪ್ರಾಯ ತಿಳಿಸಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...