alex Certify ಸಂಕಷ್ಟದಲ್ಲಿರುವ ಮಹಿಳೆಯರಿಗೆ ಸಹಾಯ ಮಾಡುತ್ತೆ ಈ ಸಾಧನ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಂಕಷ್ಟದಲ್ಲಿರುವ ಮಹಿಳೆಯರಿಗೆ ಸಹಾಯ ಮಾಡುತ್ತೆ ಈ ಸಾಧನ…!

ಅರ್ಧಕ್ಕೆ ಶಾಲೆಯನ್ನು ಮೊಟಕುಗೊಳಿಸಿದ್ದರೂ ಸಹ 32 ವರ್ಷದ ಶ್ಯಾಮ್​ ಚೌರಾಸಿಯಾ ಎಂಬವರು ಮಹಿಳೆಯರ ವಿರುದ್ಧದ ಅಪರಾಧಗಳನ್ನು ತಡೆಯಲು ಸಹಾಯ ಮಾಡುವಂತಹ ಪುಟ್ಟ ಸಾಧನವೊಂದನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಸಾಧನವನ್ನು ಆಭರಣಗಳಲ್ಲಿ ಅಳವಡಿಸಬಹುದಾಗಿದೆ.

ಇದು ಜಿಪಿಎಸ್​ ವ್ಯವಸ್ಥೆಯನ್ನು ಹೊಂದಿದ್ದು ಯಾರಾದರೂ ಮಹಿಳೆಯರ ಜೊತೆ ಅನುಚಿತ ವರ್ತನೆಯನ್ನು ತೋರಿದ್ದು ಗಮನಕ್ಕೆ ಬಂದಲ್ಲಿ ಕೂಡಲೇ ಪೊಲೀಸ್​ ಹಾಗೂ ಮಹಿಳೆಯರ ಹತ್ತಿರದ ಸಂಬಂಧಿಗಳಿಗೆ ಫೋನ್​ ಮೂಲಕ ಮಾಹಿತಿ ಸಿಗಲಿದೆ.

ಶ್ಯಾಮ್​ ಮೀರತ್​​ ಇನ್​ಸ್ಟಿಟ್ಯೂಟ್​ ಆಫ್ ಇಂಜಿನಿಯರಿಂಗ್​ ಹಾಗೂ ಟೆಕ್ನಾಲಜಿಯಲ್ಲಿ ಈ ಸಾಧನವನ್ನು ಅಭಿವೃದ್ಧಿಪಡಿಸಿದ್ದಾರೆ. ಅಟಲ್​ ಕಮ್ಯೂನಿಟಿ ಇನ್ನೋವೇಶನ್​ ಸೆಂಟರ್​ ಶ್ಯಾಮ್​ಗೆ ಇಂತಹದ್ದೊಂದು ಸಾಧನವನ್ನು ತಯಾರಿಸಲು ವೇದಿಕೆಯನ್ನು ಕಲ್ಪಿಸಿದೆ.

ಇನ್ನು ಈ ವಿಚಾರವಾಗಿ ಮಾತನಾಡಿದ ಎಂಐಇಟಿ ಉಪಾಧ್ಯಕ್ಷ ಪುನೀತ್​ ಅರ್ಗವಾಲ್​, ನಾನು 8 ತಿಂಗಳ ಹಿಂದೆ ದೆಹಲಿಯ ಎಕ್ಸಿಬಿಷನ್​ ಒಂದರಲ್ಲಿ ಶ್ಯಾಮ್​ರನ್ನು ಮೊದಲ ಬಾರಿಗೆ ಭೇಟಿಯಾದೆ. ಬಳಿಕ ನಾವು ಅವರನ್ನು ನಮ್ಮ ವಿಶ್ವವಿದ್ಯಾಲಯಕ್ಕೆ ಆಹ್ವಾನಿಸಿದೆವು. ಅವರಿಗೆ ತಂತ್ರಜ್ಞಾನದ ಬಗ್ಗೆ ಅತಿಯಾದ ಜ್ಞಾನವಿದೆ ಎಂದು ಹೇಳಿದರು.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...