alex Certify ಶ್ವಾನ ಮಾಡಿದ್ದ ಮಲ ತೆಗೆಯದಿದ್ದಕ್ಕೆ ಮಹಿಳೆಗೆ 42,000 ರೂ. ದಂಡ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶ್ವಾನ ಮಾಡಿದ್ದ ಮಲ ತೆಗೆಯದಿದ್ದಕ್ಕೆ ಮಹಿಳೆಗೆ 42,000 ರೂ. ದಂಡ…!

Town Mails Dog Poop Back To Negligent Owners In Spain | HuffPost nullಸಾರ್ವಜನಿಕ ಸ್ಥಳಗಳಲ್ಲಿ, ರಸ್ತೆಗಳಲ್ಲಿ ಅಥವಾ ತೆರೆದ ಸ್ಥಳದಲ್ಲಿ ಶ್ವಾನಗಳು ಮಲವಿಸರ್ಜನೆ ಮಾಡಿದ್ರೆ, ಅದರ ಮಾಲೀಕರ ವಿರುದ್ಧ ಸ್ಪೇನ್ ಸರ್ಕಾರ ಕಠಿಣ ಕ್ರಮ ಕೈಗೊಳ್ಳುತ್ತದೆ.

ಹಾಗೆಯೇ ಮಹಿಳೆಯೊಬ್ಬಳು ತನ್ನ ಶ್ವಾನದೊಂದಿಗೆ ಹೊರಗೆ ಅಡ್ಡಾಡಿದ್ದಾಳೆ. ಆದರೆ, ಶ್ವಾನ ಮಾಡಿರೋ ಮಲ ತೆಗೆಯದೇ ಆಕೆ ತನ್ನ ಮನೆಗೆ ಹಿಂತಿರುಗಿದ್ದು, ಮರುಕ್ಷಣವೇ ಆಕೆ ಶಾಕ್ ಗೆ ಒಳಗಾಗಿದ್ದಾಳೆ. ಯಾಕೆಂದರೆ ಆಕೆ ತನ್ನ ಶ್ವಾನದ ಮಲವನ್ನು ತೆಗೆಯದಿದ್ದಕ್ಕೆ 42,000 ರೂ.ಗಳ ದಂಡ ತೆರಬೇಕಾಗಿದೆ. ಸ್ಪೇನ್‌ನ ವೇಲೆನ್ಸಿಯಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ.

ಇಲ್ಲಿ ಮುಖ್ಯವಾದ ಪ್ರಶ್ನೆಯೆಂದರೆ, ಸರ್ಕಾರ ಆ ಮಹಿಳೆಯನ್ನು ಗುರುತಿಸಿದ್ದಾದರೂ ಹೇಗೆ ಎಂಬುದು ಸ್ಥಳೀಯ ಜನರ ಅಚ್ಚರಿಗೆ ಕಾರಣವಾಗಿದೆ. ಈ ಕ್ರೆಡಿಟ್ ಸ್ಪ್ಯಾನಿಷ್ ಪುರಸಭೆಗೆ ಸಲ್ಲುತ್ತದೆ.

ಇದು ಸ್ಪೇನ್‌ನ ಎಲ್ಲಾ ಸ್ಥಳಗಳಲ್ಲಿನ ಪುರಸಭೆಗಳಿಂದ ಡೇಟಾಬೇಸ್ ಅನ್ನು ಸಂಗ್ರಹಿಸುತ್ತದೆ ಮತ್ತು ನಿರ್ವಹಿಸುತ್ತದೆ. ಕಾರ್ಪೊರೇಟ್ 2014 ರಿಂದ ಸ್ಥಳೀಯ ಸರ್ಕಾರದೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಸಾಕುಪ್ರಾಣಿಗಳನ್ನು ಹೊರಗೆ ಕರೆತಂದು ಅದರ ಮಲ ತೆಗೆಯದಿದ್ದರೆ ಅಂಥವರನ್ನು ಗುರುತಿಸಿ, ದಂಡ ವಿಧಿಸುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...