alex Certify ಶ್ರೀವಲ್ಲಿ ಹಾಡಿಗೆ ತಾಯಿ-ಮಗಳ ಬೊಂಬಾಟ್ ಡಾನ್ಸ್: ಮುದ್ದಾದ ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶ್ರೀವಲ್ಲಿ ಹಾಡಿಗೆ ತಾಯಿ-ಮಗಳ ಬೊಂಬಾಟ್ ಡಾನ್ಸ್: ಮುದ್ದಾದ ವಿಡಿಯೋ ವೈರಲ್

Viral Video: Mother-Daughter Dance to Allu Arjun's Srivalli, Win Hearts With Beautiful Performance | Watchನಟ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಪ: ದಿ ರೈಸ್ ಭಾರತದಲ್ಲಿ ಭರ್ಜರಿ ಯಶಸ್ಸನ್ನು ಗಳಿಸಿದೆ. ಸಿನಿಮಾದ ರೋಚಕ ಸಂಭಾಷಣೆಗಳು ಮತ್ತು ಆಕರ್ಷಕ ಹಾಡುಗಳಿಂದ ಎಲ್ಲರನ್ನೂ ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ.

ಸಾಮಾಜಿಕ ಮಾಧ್ಯಮದ ಬಳಕೆದಾರರು ಕೂಡ ಪುಷ್ಪ ಜ್ವರದಿಂದ ಬಳಲುತ್ತಿದ್ದಾರೆ. ಸಾಕಷ್ಟು ಮಂದಿ ಸಿನಿಮಾದ ಹಾಡುಗಳಿಗೆ ನೃತ್ಯ ಮಾಡಿದ್ದಾರೆ. ಹಾಗೂ ಡೈಲಾಗ್ ಗಳಿಗೆ ಲಿಪ್ ಸಿಂಕ್ ಮಾಡಿದ್ದಾರೆ.  ಇದೀಗ ಪುಟ್ಟ ಬಾಲಕಿಯೊಬ್ಬಳು ತನ್ನ ತಾಯಿಯೊಂದಿಗೆ ಶ್ರೀವಲ್ಲಿ ಹಾಡಿಗೆ ಕುಣಿದು ಕುಪ್ಪಳಿಸಿರುವ ಸುಂದರ ವಿಡಿಯೋ ವೈರಲ್ ಆಗಿದೆ.

ತಾಯಿ-ಮಗಳು ಸಾಂಪ್ರದಾಯಿಕ ಲೆಹೆಂಗಾ-ಚೋಲಿಯನ್ನು ಧರಿಸಿ ತಮ್ಮದೇ ಆದ ಶೈಲಿಯಲ್ಲಿ ಶ್ರೀವಲ್ಲಿ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಇವರನ್ನು ನಿವೇದಿತಾ ಶೆಟ್ಟಿ ಹೆಗ್ಡೆ ಮತ್ತು ಇಶಾನ್ವಿ ಹೆಗ್ಡೆ ಎಂದು ಗುರುತಿಸಲಾಗಿದೆ. ಅವರು ತಮ್ಮ ಯೂಟ್ಯೂಬ್ ಚಾನೆಲ್ ಲಾಸ್ಯದಲ್ಲಿ ಆಗಾಗ್ಗೆ ನೃತ್ಯದ ವಿಡಿಯೋಗಳನ್ನು ಅಪ್‌ಲೋಡ್ ಮಾಡುತ್ತಾರೆ. ಸದ್ಯ, ಈ ವಿಡಿಯೋ ವೈರಲ್ ಆಗಿದ್ದು ನೆಟ್ಟಿಗರು ತಾಯಿ-ಮಗಳ ನೃತ್ಯಕ್ಕೆ ಮನಸೋತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...