ಟಾಲಿವುಡ್ ನಟ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ʼಪುಷ್ಪ: ದಿ ರೈಸ್ʼ ಚಿತ್ರ ಭಾರತದಲ್ಲಿ ಭರ್ಜರಿ ಯಶಸ್ಸನ್ನು ಗಳಿಸಿದೆ.
ಸಿನಿಮಾದಲ್ಲಿನ ಪ್ರಭಾವಶಾಲಿ ಸಂಭಾಷಣೆಗಳು, ಆಕರ್ಷಕ ಹಾಡುಗಳಿಂದ ಬಹುತೇಕ ಮಂದಿ ಚಿತ್ರವನ್ನು ಇಷ್ಟಪಟ್ಟಿದ್ದಾರೆ. ಇದರಲ್ಲಿನ ಶ್ರೀವಲ್ಲಿ ಹಾಡು ಸಾಕಷ್ಟು ಕ್ರೇಜ್ ಹುಟ್ಟುಹಾಕಿದೆ. ದೊಡ್ಡವರಿಂದ ಹಿಡಿದು ಮಕ್ಕಳವರೆಗೆ ಎಲ್ಲರೂ ಶ್ರೀವಲ್ಲಿ ಚಾಲೆಂಜ್‌ನಲ್ಲಿ ಭಾಗವಹಿಸುತ್ತಿರುವುದು ಕಂಡು ಬರುತ್ತಿದೆ.
ಇದೀಗ ಪುಟ್ಟ ಬಾಲಕಿಯೊಬ್ಬಳು ಶ್ರೀವಲ್ಲಿ ಹಾಡಿಗೆ ಕುಣಿದು ಕುಪ್ಪಳಿಸಿದ್ದಾಳೆ. ಜೊತೆಗೆ ಅಲ್ಲು ಅರ್ಜುನ್ ಅವರಂತೆ ಸ್ಟೆಪ್ಸ್ ಹಾಕಿರುವ ವಿಡಿಯೋ ಸದ್ಯ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ತಾನಿಯಾ ಎಂದು ಗುರುತಿಸಲ್ಟಟ್ಟ ಬಾಲಕಿ ಶ್ರೀವಲ್ಲಿ ಹಾಡಿಗೆ ಮನೋಜ್ಞವಾಗಿ ಹೆಜ್ಜೆ ಹಾಕಿದ್ದು, ನೆಟ್ಟಿಗರ ಮನಗೆದ್ದಿದ್ದಾಳೆ.
ವಿದೇಶದಲ್ಲಿ ನೆಲೆಸಲಿಚ್ಛಿಸುವವರಿಗೆ ಈ ಗ್ರಾಮದಲ್ಲಿ ಸಿಗುತ್ತೆ ಶೂನ್ಯ ಬಡ್ಡಿದರದಲ್ಲಿ ಸಾಲ..!
ವಿಡಿಯೋದಲ್ಲಿ ಬಾಲಕಿ ಅಲ್ಲು ಅರ್ಜುನ್ ಅವರು ಹಾಡಿನಲ್ಲಿ ಧರಿಸಿರುವ ಚೆಕ್ಸ್ ಶರ್ಟ್ ಹಾಗೂ ಪ್ಯಾಂಟ್ ಉಡುಪಿನಂತೆಯೇ ತಾನು ಕೂಡ ಧರಿಸಿದ್ದಾಳೆ.
ದೂರದರ್ಶನದಲ್ಲಿ ಶ್ರೀವಲ್ಲಿ ಹಾಡು ಪ್ಲೇ ಆಗುತ್ತಿದ್ರೆ, ಅಲ್ಲು ಅರ್ಜುನ್ ನಂತೆಯೇ ಹಾಡಿಗೆ ನೃತ್ಯ ಮಾಡಿದ್ದಾಳೆ. ಈ ವಿಡಿಯೋ ಸದ್ಯ ಆನ್ಲೈನ್ ನಲ್ಲಿ ಟ್ರೆಂಡಿಂಗ್ ಆಗಿದೆ.
ಈ ವಿಡಿಯೋ ವೈರಲ್ ಆಗಿದ್ದು, ಜನರು ಬಾಲಕಿಯ ಸುಂದರವಾದ ನೃತ್ಯವನ್ನು ಇಷ್ಟಪಟ್ಟಿದ್ದಾರೆ. ಕಾಮೆಂಟ್ ವಿಭಾಗದಲ್ಲಿ ಪ್ರೀತಿ ಮತ್ತು ಹೃದಯದ ಎಮೋಜಿಗಳ ಸುರಿಮಳೆಯನ್ನೇ ಸುರಿಸಿದ್ದಾರೆ.
ನಟ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ತೆಲುಗು ಚಿತ್ರ ʼಪುಷ್ಪʼ ಬಾಕ್ಸ್ ಆಫೀಸ್ ಹಿಟ್ ಆಗಿದೆ. ಈ ಸಿನಿಮಾವನ್ನು ಸುಕುಮಾರ್ ನಿರ್ದೇಶಿಸಿದ್ದಾರೆ.
https://youtu.be/ePVX5MBYFRA