alex Certify ವಿದೇಶದಲ್ಲಿ ನೆಲೆಸಲಿಚ್ಛಿಸುವವರಿಗೆ ಈ ಗ್ರಾಮದಲ್ಲಿ ಸಿಗುತ್ತೆ ಶೂನ್ಯ ಬಡ್ಡಿದರದಲ್ಲಿ ಸಾಲ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿದೇಶದಲ್ಲಿ ನೆಲೆಸಲಿಚ್ಛಿಸುವವರಿಗೆ ಈ ಗ್ರಾಮದಲ್ಲಿ ಸಿಗುತ್ತೆ ಶೂನ್ಯ ಬಡ್ಡಿದರದಲ್ಲಿ ಸಾಲ..!

ವಿದೇಶಕ್ಕೆ ತೆರಳಬೇಕು ಎಂಬ ಕನಸು ಲಕ್ಷಾಂತರ ಭಾರತೀಯರಲ್ಲಿದೆ. ಗುಜರಾತ್​ನ ಗ್ರಾಮವೊಂದರಲ್ಲಿ ನೀವು ಇಂತಹದ್ದೊಂದು ಕನಸನ್ನು ಅತ್ಯಂತ ಸುಲಭವಾಗಿ ಈಡೇರಿಸಿಕೊಳ್ಳಬಹುದಾಗಿದೆ. ಏಕೆಂದರೆ ಈ ಗ್ರಾಮದ ನಿವಾಸಿಗಳು ವಿದೇಶಕ್ಕೆ ತೆರಳುವ ಇಲ್ಲಿನ ಜನತೆಯ ಕನಸುಗಳನ್ನು ನನಸು ಮಾಡಲು ಮುಂದಾಗುತ್ತಾರೆ.

ಸ್ಥಳೀಯ ಸಮುದಾಯವು ಇಂತಹ ಕನಸುಗಳು ನನಸಾಗಲೆಂದೇ ದೇಣಿಗೆ ಸಂಗ್ರಹಿಸಲು ಮುಂದಾಗುತ್ತದೆ. ಡೊಲರಿಯಾ ಗ್ರಾಮದ ಜನತೆ ಶೂನ್ಯ ಬಡ್ಡಿದರದಲ್ಲಿ ಹಣವನ್ನು ಸಾಲದ ರೂಪದಲ್ಲಿ ನೀಡುತ್ತದೆ. ಸಾಲ ಮರುಪಾವತಿ ಮಾಡುವವರ ಮೇಲೆ ಇಎಂಐ ಹೊರೆ ಇರೋದಿಲ್ಲ. ಡೊಲರಿಯಾ ಗ್ರಾಮವು ಗುಜರಾತ್​ನ ವಡೋದರಾದಲ್ಲಿದೆ.

ಇಲ್ಲಿಂದ ಸಾಲ ಪಡೆದು ವಿದೇಶಕ್ಕೆ ತೆರಳಿ ಅಲ್ಲಿ ಸೆಟಲ್​ ಆದವರು ಈ ಗ್ರಾಮಕ್ಕೆ ಡಬಲ್​ ಹಣವನ್ನು ಕಳುಹಿಸಿಕೊಡುತ್ತಾರೆ. ವಿದೇಶದಲ್ಲಿ ನೆಲೆಸಲು ಸ್ಥಳೀಯ ಸಮುದಾಯದಿಂದ ಹಣಕಾಸಿನ ನೆರವು ಪಡೆದ ಪ್ರತಿಯೊಬ್ಬ ಜನರ ವಿಚಾರದಲ್ಲಿಯೂ ಇದು ನಿಜವಾಗಿದೆ. ಜನರು ಲಕ್ಷಗಳ ರೂಪದಲ್ಲಿ ಹಣವನ್ನು ಪಡೆದು ಈ ಗ್ರಾಮದ ಜನತೆಗೆ ದುಪ್ಪಟ್ಟು ಹಣವನ್ನು ಹಿಂದಿರುಗಿಸಿದ ಸಾಕಷ್ಟು ನಿದರ್ಶನಗಳು ಇಲ್ಲಿ ನಡೆದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...