
ಸಾವಿರಾರು ಪ್ರತಿಭಟನಾಕಾರರು ಅವರ ಅಧಿಕೃತ ಸರ್ಕಾರಿ ನಿವಾಸ್ ಕಾಂಪೌಂಡ್ ಒಳಗೆ ನುಗ್ಗಿ ಪ್ರತಿಭಟಿಸಿದ್ದಾರೆ. ಕೆಲವು ಪ್ರತಿಭಟನಾಕಾರರು ಕೊಳದಲ್ಲಿ ಸ್ನಾನ ಮಾಡಿದರೆ, ಇನ್ನು ಕೆಲವರು ಅಡುಗೆಮನೆಯಲ್ಲಿ ತಿನ್ನುವ, ಐಷಾರಾಮಿ ಕೊಠಡಿಗಳಲ್ಲಿ ವಿಶ್ರಾಂತಿ ಪಡೆಯುವ, ಜಿಮ್ ಮಾಡುವ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿವು.
ಇದೀಗ ಮತ್ತೊಂದು ಘಟನೆ ಬೆಳಕಿಗೆ ಬಂದಿದ್ದು ಅಧ್ಯಕ್ಷರ ನಿವಾಸದಲ್ಲಿ ಒಟ್ಟಿಗೆ ಕುಳಿತು ಸಾಮೂಹಿಕವಾಗಿ ಧೂಮಪಾನ ಮಾಡುತ್ತಿದ್ದ ವಿಡಿಯೋ ವೈರಲ್ ಆಗಿದೆ.
“ಶ್ರೀಲಂಕಾದ ಅಧ್ಯಕ್ಷರ ಮನೆಯಲ್ಲಿ ಈಗಿನ ಸಂದರ್ಭ: ನಾವು ಪ್ರಸ್ತುತ ಸರ್ಕಾರವನ್ನು ಉರುಳಿಸುತ್ತಿದ್ದೇವೆ” ಎಂದು ರೆಡ್ಡಿಟ್ ಬಳಕೆದಾರರು ಹಾಸ್ಯಮಯ ಶೀರ್ಷಿಕೆ ನೀಡಿ ವಿಡಿಯೋ ಪೋಸ್ಟ್ ಮಾಡಿದ್ದಾರೆ.
ಈ ಹಿಂದೆ ಟ್ವಿಟರ್ ಬಳಕೆದಾರರೊಬ್ಬರು ಮಾಡಿದ್ದ ಪೋಸ್ಟ್‌ನಲ್ಲಿ ಯುವಕರ ಗುಂಪು ಪ್ರಧಾನಿ ನಿವಾಸದಲ್ಲಿ ಹಾಸಿಗೆಯ ಮೇಲೆ ಕುಸ್ತಿಯಾಡುತ್ತಿರುವುದನ್ನು ತೋರಿಸಿತ್ತು.