alex Certify ಶೇ.1 ರಷ್ಟು ಭಾರತೀಯರ ಬಳಿಯಿದೆ ದೇಶದ ಒಟ್ಟಾರೆ ಸಂಪತ್ತಿನ 40 ಪ್ರತಿಶತಕ್ಕಿಂತಲೂ ಹೆಚ್ಚು…! ಆರ್ಥಿಕ ಅಸಮಾನತೆಯ ವಿವರ ಬಿಡುಗಡೆ ಮಾಡಿದ Oxfam | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶೇ.1 ರಷ್ಟು ಭಾರತೀಯರ ಬಳಿಯಿದೆ ದೇಶದ ಒಟ್ಟಾರೆ ಸಂಪತ್ತಿನ 40 ಪ್ರತಿಶತಕ್ಕಿಂತಲೂ ಹೆಚ್ಚು…! ಆರ್ಥಿಕ ಅಸಮಾನತೆಯ ವಿವರ ಬಿಡುಗಡೆ ಮಾಡಿದ Oxfam

ಹೊಸ ಅಧ್ಯಯನವೊಂದರ ಪ್ರಕಾರ ಭಾರತದಲ್ಲಿರುವ ಶೇ.1ರಷ್ಟು ಶ್ರೀಮಂತರು ದೇಶದ ಒಟ್ಟಾರೆ ಸಂಪತ್ತಿನಲ್ಲಿ ಶೇ.40ಕ್ಕಿಂತಲೂ ಹೆಚ್ಚಿನ ಪಾಲನ್ನು ಹೊಂದಿದ್ದಾರೆ. ಭಾರತದ ಜನಸಂಖ್ಯೆಯ ಅರ್ಧದಷ್ಟು ಜನರ ಬಳಿ ಇರುವ ಸಂಪತ್ತು ಕೇವಲ ಶೇ.3ರಷ್ಟು ಮಾತ್ರ.

ವಿಶ್ವ ಆರ್ಥಿಕ ವೇದಿಕೆಯ ವಾರ್ಷಿಕ ಸಭೆಯಲ್ಲಿ ಆಕ್ಸ್‌ಫ್ಯಾಮ್ ಇಂಟರ್‌ನ್ಯಾಷನಲ್ ತನ್ನ ವಾರ್ಷಿಕ ಅಸಮಾನತೆಯ ವರದಿಯನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಅಧ್ಯಯನದ ಸಂಪೂರ್ಣ ವಿವರಗಳಿವೆ. ಭಾರತದ ಹತ್ತು ಶ್ರೀಮಂತರಿಗೆ ಶೇ.5ರಷ್ಟು ತೆರಿಗೆ ವಿಧಿಸಿದರೆ ಮಕ್ಕಳನ್ನು ಮರಳಿ ಶಾಲೆಗೆ ಕರೆತರಲು ಸಂಪೂರ್ಣ ಹಣವನ್ನು ಪಡೆಯಬಹುದು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ವರದಿಗೆ ‘ಸರ್ವೈವಲ್ ಆಫ್ ದಿ ರಿಚೆಸ್ಟ್’ ಎಂದು ಶೀರ್ಷಿಕೆ ನೀಡಲಾಗಿದೆ. ಬಿಲಿಯನೇರ್ ಗೌತಮ್ ಅದಾನಿ ಅವರಿಗೆ 2017 ರಿಂದ 2021ರವರೆಗೆ ಅವಾಸ್ತವಿಕ ಲಾಭಗಳ ಮೇಲೆ ತೆರಿಗೆ ವಿಧಿಸಿದ್ದರೆ 1.79 ಲಕ್ಷ ಕೋಟಿಯನ್ನು ಸಂಗ್ರಹಿಸಬಹುದಿತ್ತು. ಈ ಮೊತ್ತ ಐದು ಮಿಲಿಯನ್‌ಗಿಂತಲೂ ಹೆಚ್ಚು ಭಾರತೀಯ ಪ್ರಾಥಮಿಕ ಶಾಲಾ ಶಿಕ್ಷಕರನ್ನು ನೇಮಿಸಿಕೊಳ್ಳಲು ಸಾಕಾಗುತ್ತದೆ ಅನ್ನೋದು ಅಧ್ಯಯನದಲ್ಲಿ ಬಹಿರಂಗವಾಗಿದೆ. ಆಕ್ಸ್‌ಫ್ಯಾಮ್ ವರದಿಯ ಪ್ರಕಾರ, ಭಾರತದ ಬಿಲಿಯನೇರ್‌ಗಳಿಗೆ ಅವರ ಸಂಪೂರ್ಣ ಸಂಪತ್ತಿನ ಮೇಲೆ ಒಮ್ಮೆ 2 ಪ್ರತಿಶತದಷ್ಟು ತೆರಿಗೆ ವಿಧಿಸಿದರೆ ಮುಂದಿನ ಮೂರು ವರ್ಷಗಳವರೆಗೆ ದೇಶದ ಅಪೌಷ್ಟಿಕತೆಯ ಪೋಷಣೆಗಾಗಿ 40,423 ಕೋಟಿ ಹಣವನ್ನು ಸಂಗ್ರಹಿಸಬಹುದು.

ದೇಶದ 10 ಶ್ರೀಮಂತ ಬಿಲಿಯನೇರ್‌ಗಳ ಮೇಲೆ ಶೇ.5 ರಷ್ಟು ತೆರಿಗೆಯನ್ನು ಒಮ್ಮೆ ವಿಧಿಸಿದ್ರೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹಾಗೂ ಆಯುಷ್ ಸಚಿವಾಲಯ ಅಂದಾಜು ಮಾಡಿದ ನಿಧಿಗಿಂತ 1.5 ಪಟ್ಟು ಹೆಚ್ಚು ಮೊತ್ತ 2022-23ರಲ್ಲಿ ಸಂಗ್ರಹವಾಗುತ್ತಿತ್ತು ಎಂಬುದು ಅಧ್ಯಯನದಲ್ಲಿ ಸ್ಪಷ್ಟವಾಗಿದೆ. ವರದಿಯಲ್ಲಿ ಲಿಂಗ ಅಸಮಾನತೆ ಬಗ್ಗೆ ಕೂಡ ಉಲ್ಲೇಖಿಸಲಾಗಿದೆ. ಪುರುಷ ಕಾರ್ಮಿಕರು ಗಳಿಸುವ ಪ್ರತಿ 1 ರೂಪಾಯಿಗೆ ಮಹಿಳಾ ಕಾರ್ಮಿಕರು ಕೇವಲ 63 ಪೈಸೆಗಳನ್ನು ಮಾತ್ರ ಗಳಿಸುತ್ತಿದ್ದಾರೆ. ಪರಿಶಿಷ್ಟ ಜಾತಿಗಳು ಮತ್ತು ಗ್ರಾಮೀಣ ಕಾರ್ಮಿಕರ ಬವಣೆಯನ್ನೂ ವರದಿಯಲ್ಲಿ ಬಿಚ್ಚಿಡಲಾಗಿದೆ.

ಭಾರತದ 100 ಟಾಪ್‌ ಬಿಲಿಯನೇರ್‌ಗಳಿಗೆ ಶೇ. 2.5 ತೆರಿಗೆ ವಿಧಿಸುವುದು, ಭಾರತದ ಅಗ್ರ 10 ಬಿಲಿಯನೇರ್‌ಗಳಿಗೆ ಶೇಕಡಾ 5 ರಷ್ಟು ತೆರಿಗೆ ವಿಧಿಸುವುದು ಸರಿಸಮನಾಗಿರುತ್ತದೆ. ದೇಶದ ಸಂಪತ್ತಿನ ಅಸಮಾನತೆ ಮತ್ತು ಬಿಲಿಯನೇರ್ ಸಂಪತ್ತನ್ನು ನೋಡಲು Forbes ಮತ್ತು Credit Suisse ನಂತಹ ಮಾಧ್ಯಮಿಕ ಮೂಲಗಳನ್ನು ಬಳಸಲಾಗಿದೆ. ಇದರ ಜೊತೆಗೆ ಯೂನಿಯನ್ ಬಜೆಟ್ ದಾಖಲೆಗಳು, ಸಂಸದೀಯ ಪ್ರಶ್ನೆಗಳು ಮುಂತಾದ ಸರ್ಕಾರಿ ಮೂಲಗಳನ್ನು ಸಹ ಬಳಸಿಕೊಳ್ಳಲಾಗಿದೆ. ಕೊರೊನಾ ಪ್ರಾರಂಭವಾದಾಗಿನಿಂದ ಭಾರತದ ಬಿಲಿಯನೇರ್‌ಗಳ ಸಂಪತ್ತಿನಲ್ಲಿ ಶೇ.121ರಷ್ಟು ಹೆಚ್ಚಳ ಅಂದ್ರೆ ದಿನಕ್ಕೆ 3,608 ಕೋಟಿಗಳಷ್ಟು ಏರಿಕೆ ಕಂಡಿದೆ.

ಭಾರತದಲ್ಲಿ 2020 ರಲ್ಲಿ 102 ಬಿಲಿಯನೇರ್‌ಗಳಿದ್ದರು, 2022 ರಲ್ಲಿ ಈ ಸಂಖ್ಯೆ 166ಕ್ಕೆ ಏರಿದೆ. ಭಾರತದ 100 ಶ್ರೀಮಂತರ ಒಟ್ಟು ಸಂಪತ್ತು 660 ಶತಕೋಟಿ ಡಾಲರ್‌ ಅಂದ್ರೆ ಸರಿಸುಮಾರು 54.12 ಲಕ್ಷ ಕೋಟಿ ದಾಟಿದೆ. ಇದು ಇಡೀ ಕೇಂದ್ರ ಬಜೆಟ್‌ಗಿಂತಲೂ ಹೆಚ್ಚು. ಸಂಪತ್ತಿನ ಅಸಮಾನತೆಯನ್ನು ಹೋಗಲಾಡಿಸಲು ಏಕಮಾತ್ರ ಸಂಪತ್ತಿನ ತೆರಿಗೆಗಳು ಮತ್ತು ವಿಂಡ್‌ಫಾಲ್ ತೆರಿಗೆಗಳನ್ನು ಪರಿಚಯಿಸಲು ಆಕ್ಸ್‌ಫಾಮ್‌ ಒತ್ತಾಯಿಸಿದೆ. ಬಂಡವಾಳ ಲಾಭಗಳ ಮೇಲಿನ ತೆರಿಗೆಗಳ ಏರಿಕೆಗೂ ಆಗ್ರಹಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...