alex Certify ಶುಭ ಸುದ್ದಿ ಹಂಚಿಕೊಂಡ ಬಾಲಿವುಡ್ ನಟಿ ಸೋನಂ ಕಪೂರ್​​…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶುಭ ಸುದ್ದಿ ಹಂಚಿಕೊಂಡ ಬಾಲಿವುಡ್ ನಟಿ ಸೋನಂ ಕಪೂರ್​​…..!

ಬಾಲಿವುಡ್​ ನಟಿ ಸೋನಂ ಕಪೂರ್​​ ತಾವು ತಾಯಿಯಾಗುತ್ತಿರುವ ಶುಭ ಸುದ್ದಿಯನ್ನು ಸೋಶಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿದ್ದಾರೆ. ಇನ್​​ಸ್ಟಾಗ್ರಾಂನಲ್ಲಿ ತಮ್ಮ ಪತಿ ಆನಂದ್​ ಅಹುಜಾ ಜೊತೆಯಲ್ಲಿ ನಟಿ ಸೋನಂ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋಗಳಲ್ಲಿ ಸೋನಂ ಕಪೂರ್​​ರ ಬೇಬಿ ಬಂಪ್​ ಮುದ್ದಾಗಿ ಕಾಣುತ್ತಿದೆ.

ಈ ಫೋಟೋಗಳನ್ನು ಶೇರ್​ ಮಾಡಿರುವ ಸೋನಂ ಕಪೂರ್​, ನಿನ್ನನ್ನು ಅತ್ಯಂತ ಉತ್ತಮವಾಗಿ ಬೆಳೆಸಲು ನಾಲ್ಕು ಕೈಗಳಿವೆ. ಪ್ರತಿ ಹೆಜ್ಜೆಗೂ ನಿನಗಾಗಿ ಮಿಡಿಯುವ ಎರಡು ಹೃದಯಗಳು, ನಿನಗೆ ಪ್ರೀತಿ ಹಾಗೂ ಬೆಂಬಲವನ್ನು ನೀಡಲು ಒಂದು ಕುಟುಂಬವಿದೆ. ನಿನ್ನನ್ನು ಸ್ವಾಗತಿಸಲು ನಾವು ಕಾತುರದಿಂದ ಕಾಯುತ್ತಿದ್ದೇವೆ ಎಂದು ಶೀರ್ಷಿಕೆ ನೀಡಿದ್ದಾರೆ.

ಬಾಲಿವುಡ್​ ಹಿರಿಯ ನಟ ಅನಿಲ್​ ಕಪೂರ್​ ಪುತ್ರಿ ಹಾಗೂ ನಟಿ ಸೋನಂ ಕಪೂರ್​ 2018ರ ಮೇ 8 ರಂದು ಆನಂದ್​ ಅಹುಜಾ ಜೊತೆಯಲ್ಲಿ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದರು.

https://www.instagram.com/p/CbWqpeFq-T6/?utm_source=ig_embed&ig_rid=8bdb811f-6edc-4a9e-a9e8-9fc39b9ac51f

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...