alex Certify ಶಿವಮೊಗ್ಗ ಜನತೆಗೆ ಖುಷಿ ಸುದ್ದಿ: ಇಂದಿನಿಂದ FM 90.8 ರೇಡಿಯೊ ಆರಂಭ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಿವಮೊಗ್ಗ ಜನತೆಗೆ ಖುಷಿ ಸುದ್ದಿ: ಇಂದಿನಿಂದ FM 90.8 ರೇಡಿಯೊ ಆರಂಭ

ಶಿವಮೊಗ್ಗ ಜನತೆಯ ಬಹುದಿನಗಳ ನಿರೀಕ್ಷೆಯೊಂದು ಇಂದು ಈಡೇರುತ್ತಿದೆ. ಇಂದಿನಿಂದ ಶಿವಮೊಗ್ಗ ಎಫ್ಎಂ 90.8 ಸಮುದಾಯ ರೇಡಿಯೊ ಕೇಂದ್ರ ಆರಂಭವಾಗುತ್ತಿದ್ದು, ಶಿವಮೊಗ್ಗದ ಮೂವತ್ತು ಕಿಮೀ ವ್ಯಾಪ್ತಿಯಲ್ಲಿ ನೇರವಾಗಿ ಇದರ ಪ್ರಸಾರ ಕೇಳಬಹುದಾಗಿದೆ.

ಆನ್ಲೈನ್ ಮೂಲಕವೂ ಈ ರೇಡಿಯೊ ಪ್ರಸಾರವಾಗಲಿದ್ದು, ಆಪ್ ಡೌನ್ಲೋಡ್ ಮಾಡಿಕೊಳ್ಳುವ ಮೂಲಕ ವಿಶ್ವದ ಯಾವುದೇ ಮೂಲೆಯಲ್ಲಿರುವ ಜನರು ಶಿವಮೊಗ್ಗ ಎಫ್ಎಂ 90.8 ಸಮುದಾಯ ರೇಡಿಯೋ ಪ್ರಸಾರವನ್ನು ಕೇಳಬಹುದಾಗಿದೆ.

ಪ್ರತಿದಿನ ಬೆಳಗ್ಗೆ ಎಂಟರಿಂದ ರಾತ್ರಿ ಎಂಟರವರೆಗೆ ಕಾರ್ಯಕ್ರಮಗಳು ಪ್ರಸಾರವಾಗಲಿದ್ದು, ಕೃಷಿ, ವಾಣಿಜ್ಯ, ಉದ್ಯೋಗ, ಕುಶಲಕಲೆ, ಕೈಗಾರಿಕೆ, ಶಿಕ್ಷಣ, ಪರಿಸರ ಮೊದಲಾದ ವಿಷಯಗಳ ಮಾಹಿತಿಯನ್ನು ವಿಸ್ತೃತವಾಗಿ ನೀಡಲಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...