ಸಧ್ಯ ಗಾಳಿಪಟ 2 ಸಿನಿಮಾ ಬಿಡುಗಡೆಯ ಹಿನ್ನೆಲೆ ಪ್ರಚಾರ ಕಾರ್ಯಗಳಲ್ಲಿ ಬ್ಯುಸಿಯಾಗಿರುವ ನಟಿ ಶರ್ಮಿಳಾ ಮಾಂಡ್ರೆ ತಮ್ಮ ಬ್ಯುಸಿ ಶೆಡ್ಯೂಲ್ನ ನಡುವೆಯೂ ಬಿಡುವು ಮಾಡಿಕೊಂಡು ಶಿರಡಿ ಸಾಯಿಬಾಬಾ ಮಂದಿರಕ್ಕೆ ಭೇಟಿ ನೀಡಿದ್ದಾರೆ.
ಚಂದನವನದಲ್ಲಿ ಗಾಳಿಪಟ 2, ದಸರಾ ಹಾಗೂ ಮಂಡಲ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟಿ ಶರ್ಮಿಳಾ ಮಾಂಡ್ರೆ ಶಿರಡಿ ಸಾಯಿ ಬಾಬಾನ ದರ್ಶನವನ್ನು ಪಡೆದು ವಿಶೇಷ ಪೂಜೆಯನ್ನು ಸಲ್ಲಿಸಿದ್ದಾರೆ. ಶ್ವೇತ ವರ್ಣದ ಕುರ್ತಾ ಹಾಗೂ ದುಪ್ಪಟ್ಟಾ ಧರಿಸಿರುವ ನಟಿ ಶರ್ಮಿಳಾ ದೇವತೆಯಂತೆ ಕಾಣ್ತಿದ್ದಾರೆ.
ದೇವಸ್ಥಾನದ ಹೊರಗೆ ನಿಂತು ಫೋಟೋ ಕ್ಲಿಕ್ಕಿಸಿರುವ ಶರ್ಮಿಳಾ ಇನ್ಸ್ಟಾಗ್ರಾಂನಲ್ಲಿ ಶಿರಡಿ ಸಾಯಾಬಾಬಾ ಮಂದಿರ ವಿಸಿಟ್ನ ಫೋಟೋವನ್ನು ಹಂಚಿಕೊಂಡಿದ್ದಾರೆ. ಶಿರಡಿಯಲ್ಲಿ ಅದ್ಭುತ ದರ್ಶನವಾಯಿತು, ಓಂ ಸಾಯಿರಾಮ್ ಎಂದು ಬರೆದುಕೊಂಡಿದ್ದಾರೆ.
ಸಜನಿ ಸಿನಿಮಾದ ಮೂಲಕ ಸ್ಯಾಂಡಲ್ವುಡ್ಗೆ ಪಾದಾರ್ಪಣೆ ಮಾಡಿರುವ ನಟಿ ಶರ್ಮಿಳಾ ಮಾಂಡ್ರೆ ಧ್ಯಾನ್ಗೆ ನಾಯಕಿಯಾಗಿ ನಟಿಸಿದ್ದರು.