alex Certify ಶಿಕ್ಷಕರ ಆದೇಶದಂತೆ 100 ಬಸ್ಕಿ ಹೊಡೆದು ಪ್ರಜ್ಞೆತಪ್ಪಿ ಬಿದ್ದ ವಿದ್ಯಾರ್ಥಿನಿಯರು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಿಕ್ಷಕರ ಆದೇಶದಂತೆ 100 ಬಸ್ಕಿ ಹೊಡೆದು ಪ್ರಜ್ಞೆತಪ್ಪಿ ಬಿದ್ದ ವಿದ್ಯಾರ್ಥಿನಿಯರು…!

ಟೀಚರ್‌ ಆಜ್ಞೆಯಂತೆ ತಲಾ 100 ಬಸ್ಕಿ ಹೊಡೆದ 7 ವಿದ್ಯಾರ್ಥಿನಿಯರು ಪ್ರಜ್ಞಾಹೀನರಾಗಿ ಬಿದ್ದಿರುವ ಘಟನೆ ಓಡಿಶಾದ ಪಟ್ನಾಗರ್‌ ನಲ್ಲಿ ನಡೆದಿದೆ. ಬಾಪೂಜಿ ಹೈಸ್ಕೂಲ್‌ ನ ಈ ವಿದ್ಯಾರ್ಥಿನಿಯರನ್ನು ಕೂಡಲೇ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ತುರ್ತು ಚಿಕಿತ್ಸೆ ಬಳಿಕ ಬಾಲಕಿಯರು ಚೇತರಿಸಿಕೊಂಡಿದ್ದಾರೆ.

ಈ ವಿದ್ಯಾರ್ಥಿನಿಯರು ಶಾಲೆಗೆ ತಡವಾಗಿ ಆಗಮಿಸಿದ್ದರು. ಬೆಳಗಿನ ಪ್ರಾರ್ಥನೆಗೆ ಹಾಜರಾಗಿರಲಿಲ್ಲ. ಪ್ರೇಯರ್‌ ಮುಗಿದ ಬಳಿಕ ತರಗತಿಗೆ ಹಾಜರಾಗಿದ್ದರಿಂದ ಕೋಪಗೊಂಡ ಶಿಕ್ಷಕ ಬಿಕಾಶ್‌ ದರುವಾ ಎಂಬುವವರು, ತಲಾ 100 ಬಸ್ಕಿ ಹೊಡೆಯುವಂತೆ ವಿದ್ಯಾರ್ಥಿನಿಯರಿಗೆ ಶಿಕ್ಷೆ ವಿಧಿಸಿದ್ದಾರೆ.

ಈ ವೇಳೆ 7 ವಿದ್ಯಾರ್ಥಿನಿಯರು ಕುಸಿದು ಬಿದ್ದಿದ್ದಾರೆ. ಆಸ್ಪತ್ರೆಗೆ ಕರೆತಂದಾಗ ವಿದ್ಯಾರ್ಥಿನಿಯರ ಸ್ಥಿತಿ ಗಂಭೀರವಾಗಿತ್ತು ಅಂತ ಪಟ್ನಾಗರ್ ಉಪ-ವಿಭಾಗೀಯ ಆಸ್ಪತ್ರೆಯ ವೈದ್ಯಕೀಯ ಅಧಿಕಾರಿ ಮಾಹಿತಿ ನೀಡಿದ್ದಾರೆ. ಆದ್ರೆ ವಿದ್ಯಾರ್ಥಿನಿಯರೆಲ್ಲ ಅಪಾಯದಿಂದ ಪಾರಾಗಿದ್ದಾರೆ. ಈ ಘಟನೆ ಬಗ್ಗೆ ತನಿಖೆ ನಡೆಸುವಂತೆ ಅಲ್ಲಿನ ಶಿಕ್ಷಣ ಸಚಿವ ಸಮೀರ್‌ ರಂಜನ್‌ ಆದೇಶಿಸಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...