alex Certify ಶಾಲಾ ವಾಹನ​​ ಚಲಾಯಿಸುತ್ತಿದ್ದಾಗಲೇ ಹೃದಯಾಘಾತದಿಂದ ಸಾವನ್ನಪ್ಪಿದ ಚಾಲಕ; ಬಸ್‌ ಪಲ್ಟಿಯಾದರೂ ಅದೃಷ್ಟವಶಾತ್‌ ಮಕ್ಕಳು ಪಾರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಾಲಾ ವಾಹನ​​ ಚಲಾಯಿಸುತ್ತಿದ್ದಾಗಲೇ ಹೃದಯಾಘಾತದಿಂದ ಸಾವನ್ನಪ್ಪಿದ ಚಾಲಕ; ಬಸ್‌ ಪಲ್ಟಿಯಾದರೂ ಅದೃಷ್ಟವಶಾತ್‌ ಮಕ್ಕಳು ಪಾರು

ಶಾಲಾ ಮಕ್ಕಳ ಬಸ್​ನ್ನು ಚಲಾಯಿಸುತ್ತಿದ್ದ ವೇಳೆಯಲ್ಲಿ ಚಾಲಕನಿಗೆ ಹೃದಯಾಘಾತವಾದ ಪರಿಣಾಮ ಅವರು ಸ್ಟೀರಿಂಗ್​ ಮೇಲೆಯೇ ಕುಸಿದುಬಿದ್ದ ಘಟನೆಯು ತಮಿಳುನಾಡಿನ ಕಡಲೂರಿನಲ್ಲಿ ಸಂಭವಿಸಿದೆ. ಅದೃಷ್ಟವಶಾತ್​ ಬಸ್​ನಲ್ಲಿದ್ದ ಎಲ್ಲಾ 12 ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕಡಲೂರಿನ ಖಾಸಗಿ ಶಾಲೆಯೊಂದಕ್ಕೆ ಸೇರಿದ ಬಸ್​ ಇದಾಗಿದ್ದು ಮೃತಪಟ್ಟ ಬಸ್​ ಚಾಲಕನನ್ನು 43 ವರ್ಷದ ಪ್ರಭು ಎಂದು ಗುರುತಿಸಲಾಗಿದೆ.

ನಿನ್ನೆ ಬೆಳಗ್ಗೆ ವಿದ್ಯಾರ್ಥಿಗಳನ್ನು ಶಾಲೆಗೆ ಕರೆದುಕೊಂಡು ಹೋಗುತ್ತಿದ್ದ ವೇಳೆಯಲ್ಲಿ ಪ್ರಭುಗೆ ತೀವ್ರ ಹೃದಯಾಘಾತವಾಗಿತ್ತು. ಚಾಲಕ ಪ್ರಭು ಡ್ರೈವಿಂಗ್​ ಸೀಟ್​ನಲ್ಲಿದ್ದಾಗಲೇ ಕುಸಿದು ಬಿದ್ದ ಪರಿಣಾಮ ಬಸ್​ ಪಲ್ಟಿಯಾಗಿದೆ ಎಂದು ಹೇಳಿದ್ದಾರೆ.

ಕೂಡಲೇ ಸ್ಥಳದತ್ತ ಧಾವಿಸಿದ ಸ್ಥಳೀಯರು ಬಸ್​ನಲ್ಲಿದ್ದ 12 ವಿದ್ಯಾರ್ಥಿಗಳನ್ನು ರಕ್ಷಿಸಿದ್ದಾರೆ. ಅಪಘಾತದಲ್ಲಿ ವಿದ್ಯಾರ್ಥಿಗಳಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...