
ಹೌದು, ಇತ್ತೀಚೆಗೆ ಶಾರುಖ್‍ರ ನಿವಾಸದ ಹೆಸರು ಮನ್ನತ್‍ನ ನೇಮ್ ಪ್ಲೇಟ್ ಸಾಕಷ್ಟು ಸುದ್ದಿ ಮಾಡಿತ್ತು. ಇದೀಗ ತಮ್ಮ ನಿವಾಸದಲ್ಲಿ ಇಷ್ಟೊಂದು ಮೌಲ್ಯದ ಟಿವಿಗಳಿವೆ ಎಂದು ಹೇಳಿದ್ದು, ಜನರನ್ನು ಬೆಕ್ಕಸ ಬೆರಗಾಗಿಸಿದೆ. ತಮ್ಮ ಮನೆಯಲ್ಲಿ ಯಾವ್ಯಾವ ಕೋಣೆಯಲ್ಲಿ ಟಿವಿಗಳನ್ನು ಇಡಲಾಗಿದೆ ಎಂಬುದನ್ನು ಅವರು ವಿವರಿಸಿದ್ದಾರೆ.
ಶಾರುಖ್ ಮಲಗುವ ಕೋಣೆಯಲ್ಲಿ ಒಂದು ಟಿವಿ ಇರಿಸಲಾಗಿದ್ದರೆ, ಲಿವಿಂಗ್ ರೂಮಿನಲ್ಲೂ ಕೂಡ ಒಂದನ್ನು ಇಡಲಾಗಿದೆ. ಶಾರುಖ್ ಪುಟ್ಟ ಮಗ ಅಬ್ರಾಹಂ, ಹಿರಿಯ ಪುತ್ರ ಆರ್ಯನ್ ಹಾಗೂ ಮಗಳ ಕೋಣೆಯಲ್ಲಿ ಸಹ ಒಂದೊಂದು ಟಿವಿಯನ್ನು ಇಡಲಾಗಿದೆ.
ಶಾರುಖ್ ಅವರ ಮನೆಯಲ್ಲಿ ಸುಮಾರು 11 ರಿಂದ 12 ಟಿವಿಗಳಿವೆ ಎಂದು ಅಂದಾಜಿಸಿದ್ದಾರೆ. ಪ್ರತಿ ದೂರದರ್ಶನದ ಬೆಲೆ ಸುಮಾರು ಒಂದು ಲಕ್ಷ, ಮತ್ತು ಅದಕ್ಕಿಂತ ಹೆಚ್ಚಿನದ್ದಾಗಿದೆ. ಟಿವಿಗಾಗಿ ತಾನು ಸುಮಾರು 30-40 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿರುವುದಾಗಿ ಅವರು ತಿಳಿಸಿದ್ದಾರೆ.
ಶಾರುಖ್ ರ ಈ ಮಾತು ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಇವರು ಖರೀದಿಸಿರೋ ಟಿವಿಯಲ್ಲಿ ಒಂದು ಮನೆಯನ್ನೇ ನಿರ್ಮಿಸಬಹುದು ಎಂದು ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.