alex Certify ಶಾರೀರಿಕ ಸಂಬಂಧದ ನಂತ್ರ ಮಹಿಳೆಯರಲ್ಲಾಗುತ್ತೆ ಈ ಕೆಲ ಬದಲಾವಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಾರೀರಿಕ ಸಂಬಂಧದ ನಂತ್ರ ಮಹಿಳೆಯರಲ್ಲಾಗುತ್ತೆ ಈ ಕೆಲ ಬದಲಾವಣೆ

ಮೊದಲ ಬಾರಿ ಶಾರೀರಿಕ ಸಂಬಂಧ ಬೆಳೆಸಿದ ನಂತ್ರ ಮಹಿಳೆಯರಲ್ಲಿ ಸಾಕಷ್ಟು ಬದಲಾವಣೆಗಳು ಕಂಡು ಬರುತ್ತವೆ. ಹಾರ್ಮೋನ್ ಬದಲಾವಣೆಯಿಂದಾಗಿ ಏನೆಲ್ಲ ಬದಲಾವಣೆಗಳಾಗುತ್ತವೆ ಎನ್ನುವುದನ್ನು ಕೆಲವೊಂದು ಸಂಶೋಧನೆಗಳು ಬಿಚ್ಚಿಟ್ಟಿವೆ.

ಮೊದಲ ಬಾರಿ ಶಾರೀರಿಕ ಸಂಬಂಧ ಬೆಳೆಸಿದ ನಂತ್ರ ಮಹಿಳೆಯರ ತೂಕ ನಿಧಾನವಾಗಿ ಜಾಸ್ತಿಯಾಗಲು ಶುರುವಾಗುತ್ತದೆ. ಮಹಿಳೆಯರಲ್ಲಿ ಒತ್ತಡ ಕಡಿಮೆಯಾಗುತ್ತದೆ ಎಂದು ಅಧ್ಯಯನವೊಂದು ಹೇಳಿದೆ.

ನಿಯಮಿತ ರೂಪದಲ್ಲಿ ಶಾರೀರಿಕ ಸಂಬಂಧ ಬೆಳೆಸುವುದರಿಂದ ಮಹಿಳೆ ಖುಷಿಯಾಗಿರ್ತಾಳಂತೆ. ಜೊತೆಗೆ ಒತ್ತಡ ಕಡಿಮೆಯಾಗುತ್ತದೆ. ಸಂಶೋಧನೆಯೊಂದರ ಪ್ರಕಾರ ಮೊದಲ ಸಂಭೋಗದ ನಂತ್ರ ಮಹಿಳೆಯರ ಶರೀರದ ಆಕಾರದಲ್ಲಿ ಸ್ವಲ್ಪ ಬದಲಾವಣೆಯಾಗುತ್ತದೆಯಂತೆ.

ಶಾರೀರಿಕ ಸಂಬಂಧದ ನಂತ್ರ ಮುಟ್ಟಿನ ಸಮಯದಲ್ಲಿ ಏರುಪೇರಾಗುವ ಸಾಧ್ಯತೆಗಳಿವೆ. ಹಾರ್ಮೋನ್ ಬದಲಾವಣೆ ಇದಕ್ಕೆ ಕಾರಣ. ದೈಹಿಕ ಸಂಬಂಧದ ನಂತ್ರ ಮಹಿಳೆಯರ ಮಿದುಳು ಮತ್ತಷ್ಟು ಕ್ರಿಯಾಶೀಲವಾಗುತ್ತದೆ ಎಂದು ಅಧ್ಯಯನವೊಂದು ಹೇಳಿದೆ. ಮಹಿಳೆಯರ ಐಕ್ಯೂ ಮಟ್ಟ ಮೊದಲಿಗಿಂತ ಜಾಸ್ತಿಯಾಗುತ್ತದೆಯಂತೆ. ಮೊದಲ ಬಾರಿ ಶಾರೀರಿಕ ಸಂಬಂಧ ಬೆಳೆಸಿದ ನಂತ್ರ ಕೆಲ ಮಹಿಳೆಯರಿಗೆ ಮೂರ್ನಾಲ್ಕು ದಿನ ಬ್ಲೀಡಿಂಗ್ ಆಗುತ್ತದೆ. ಈ ಬಗ್ಗೆ ಭಯಪಡುವ ಅಗತ್ಯವಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...