alex Certify ಶಾಕಿಂಗ್​: NSG ಕಮಾಂಡೋ ಮೇಲೆ ದುಷ್ಕರ್ಮಿಗಳಿಂದ ಮಾರಣಾಂತಿಕ ದಾಳಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಾಕಿಂಗ್​: NSG ಕಮಾಂಡೋ ಮೇಲೆ ದುಷ್ಕರ್ಮಿಗಳಿಂದ ಮಾರಣಾಂತಿಕ ದಾಳಿ

ಎನ್​ಎಸ್​ಜಿ ಕಮಾಂಡೋ ಮೇಲೆ ಕೆಲವು ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ನಡೆಸಿದ ಘಟನೆಯು ಉತ್ತರ ಪ್ರದೇಶದ ಇಟಾವಾ ಜಿಲ್ಲೆಯ ಫತೇಪುರ ಗ್ರಾಮದಲ್ಲಿ ಸಂಭವಿಸಿದೆ.

ಈ ದಾಳಿಯಲ್ಲಿ ಎನ್​ಎಸ್​ಜಿ ಕಮಾಂಡೋ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಘಟನೆ ಸಂಬಂಧ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ. ಪೊಲೀಸರು ಬೇಜಾವಾಬ್ದಾರಿ ಮೆರೆಯುವ ಮೂಲಕ ದುಷ್ಕರ್ಮಿಗಳಿಗೆ ಪರೋಕ್ಷ ಸಾಥ್​ ನೀಡಿದ್ದಾರೆ ಎಂದು ಕಮಾಂಡೋ ಆರೋಪಿಸಿದ್ದಾರೆ.

ಕಮಾಂಡೋರನ್ನು ರಕ್ಷಿಸಬೇಕೆಂದು ನಾವು ಹತ್ತಿರಕ್ಕೆ ಬರುವ ವೇಳೆ ಗಾಳಿಯಲ್ಲಿ ಗುಂಡು ಹಾರಿಸುವುದರ ಜೊತೆಯಲ್ಲಿ ಲಾಠಿಯಿಂದ ದಾಳಿ ನಡೆಸಲು ಆರಂಭಿಸಿದರು ಎಂದು ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ.

ಎನ್​ಎಸ್​ಜಿ ಕಮಾಂಡೋ ತನ್ನ ಜೀವ ಉಳಿಸಿಕೊಳ್ಳಲು ಎಸ್​ಎಸ್​ಪಿಯನ್ನು ಸಂಪರ್ಕಿಸಿದ್ದಾರೆ. ದೇಶಕ್ಕೆ ಅತ್ಯುನ್ನತ ಮಟ್ಟದಲ್ಲಿ ಭದ್ರತೆ ಒದಗಿಸುವ ಎನ್​ಸಿಜಿ ಸಿಬ್ಬಂದಿಗೇ ಸುರಕ್ಷತೆ ಇಲ್ಲ ಎಂದು ಕಮಾಂಡೋ ಆಕ್ರೋಶ ಹೊರ ಹಾಕಿದ್ದಾರೆ.

ದರೋಡೆಯ ಘಟನೆ ಸೇರಿದಂತೆ ಎರಡು ದಿನಗಳಲ್ಲಿ ಎನ್‌ಎಸ್‌ಜಿ ಕಮಾಂಡೋ ಮೇಲೆ ಎರಡು ಬಾರಿ ದಾಳಿ ಮಾಡಲಾಗಿದೆ, ಇದು ಪೊಲೀಸರ ನಡೆ ಬಗ್ಗೆ ಅನುಮಾನ ಮೂಡಿಸುವಂತೆ ಮಾಡಿದೆ.

ತನ್ನ ಸಹೋದರರಾದ ಸಂಜೀವ್​ ಬದೌರಿಯಾ ಹಾಗೂ ಸೋದರಳಿಯ ಶಿವಾಂಶು ಬದೌರಿಯಾ ಜೊತೆಯಲ್ಲಿ ಇಟಾವಾ ಪೊಲೀಸ್​ ಠಾಣೆ ತಲುಪಿದ ಎನ್​ಎಸ್​ಜಿ ಕಮಾಂಡೋ ರಾಜೀವ್ ಬದೌರಿಯಾ ಭೂ ವಿವಾದ ಸಂಬಂಧ ಗ್ರಾಮದ ಕೆಲ ಕಿಡಿಗೇಡಿಗಳ ತಮಗೆ ಥಳಿಸಿದ್ದಾರೆ ಎಂದು ದೂರು ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...