alex Certify ಶವ ಪೆಟ್ಟಿಗೆ ಒಳಗಿಂದ ಶಬ್ದ ಕೇಳಿ ಬಂದಾಗಲೇ ಬದುಕಿದ್ದು ಗೊತ್ತಾಯ್ತು….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶವ ಪೆಟ್ಟಿಗೆ ಒಳಗಿಂದ ಶಬ್ದ ಕೇಳಿ ಬಂದಾಗಲೇ ಬದುಕಿದ್ದು ಗೊತ್ತಾಯ್ತು….!

ಸತ್ತು ಹೋದ ವ್ಯಕ್ತಿ ಮತ್ತೆ ಎದ್ದು ಬಂದರೆ…! ಊಹಿಸಲೂ ಸಾಧ್ಯವಾಗದ ಮಾತು ಅಲ್ಲವೇ? ಆದರೆ, ಪೆರುವಿನಲ್ಲಿ ಇಂತಹ ಶಾಕಿಂಗ್ ಘಟನೆ ನಡೆದಿದೆ. ಕಾರು ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ರೋಸಾ ಇಸಾಬೆಲ್ ಸೆಸ್ಪೆಡೆಸ್ ಕ್ಯಾಲಕ ಎಂಬ ಮಹಿಳೆ ನಿಶ್ಚಲ ಸ್ಥಿತಿಯಲ್ಲಿದ್ದ ಕಾರಣ ಆಕೆ ಸಾವನ್ನಪ್ಪಿದ್ದಾಳೆಂದು ತಿಳಿದು ಏಪ್ರಿಲ್ 26 ರಂದು ಅಂತ್ಯಕ್ರಿಯೆಗೆ ಬೇಕಾಗಿದ್ದ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು. ಅದರಂತೆ, ಆಕೆಯನ್ನು ಶವಪೆಟ್ಟಿಗೆಯಲ್ಲಿ ಮಲಗಿಸಿ ಭದ್ರಪಡಿಸಲಾಗಿತ್ತು.

ಅಂತ್ಯಕ್ರಿಯೆಯ ಸ್ಥಳಕ್ಕೆ ಮೆರವಣಿಗೆಯಲ್ಲಿ ಕೊಂಡೊಯ್ಯಲಾಗುತ್ತಿತ್ತು. ಇದೇ ಸಂದರ್ಭದಲ್ಲಿ ಶವಪೆಟ್ಟಿಗೆಯನ್ನು ಯಾರೋ ಬಡಿದ ಶಬ್ಧ ಬಂದಿತು. ದುಃಖತಪ್ತರು ಶವಪೆಟ್ಟಿಗೆಯನ್ನು ಕೆಳಗೆ ಇಳಿಸುತ್ತಿದ್ದಂತೆಯೇ ಒಳಗಡೆಯಿಂದಲೇ ಶವಪೆಟ್ಟಿಗೆಯನ್ನು ತಟ್ಟುತ್ತಿದ್ದ ಶಬ್ಧ ಬಂತು. ಆವಾಕ್ಕಾದ ಜನರು ಶವಪೆಟ್ಟಿಗೆಯನ್ನು ತೆರೆದು ನೋಡಿದಾಗ ರೋಸಾ ಬದುಕಿರುವುದು ಕಂಡುಬಂದಿತು.

PSI ಅಕ್ರಮ; ದಿವ್ಯಾ ಹಾಗರಗಿಗೆ ಪುಣೆಯಲ್ಲಿ ಆಶ್ರಯ ನೀಡಿದ್ದೇ ಕಾಂಗ್ರೆಸ್; ಹೊಸ ಬಾಂಬ್‌ ಸಿಡಿಸಿದ ಗೃಹ ಸಚಿವ ಅರಗ ಜ್ಞಾನೇಂದ್ರ

ಕೂಡಲೇ ಕುಟುಂಬ ಸದಸ್ಯರು ಆಕೆಯನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಲೈಫ್ ಸಪೋರ್ಟ್ ನಲ್ಲಿಟ್ಟು ಚಿಕಿತ್ಸೆ ನೀಡಲಾಯಿತು. ಆದರೆ, ಆಕೆಯ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದ್ದರಿಂದ ಕೆಲವು ಗಂಟೆಗಳ ನಂತರ ಕೊನೆ ಉಸಿರೆಳೆದಿದ್ದಾಳೆ. ಕೋಮಾ ಸ್ಥಿತಿಯಲ್ಲಿದ್ದ ಆಕೆ ಸಾವನ್ನಪ್ಪಿದ್ದಾಳೆ ಎಂದು ಘೋಷಣೆ ಮಾಡಿದ ಆಸ್ಪತ್ರೆಯ ವಿರುದ್ಧ ಕುಟುಂಬ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...