alex Certify ಶಬರಿಮಲೆಯಲ್ಲಿ ಸಂಪೂರ್ಣ ಶುಚಿತ್ವವನ್ನು ಸಾಧಿಸಲಿರುವ ಯೋಜನೆಯೇ ‘ಪುಣ್ಯಂ ಪೂಂಗಾವನಂ’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಬರಿಮಲೆಯಲ್ಲಿ ಸಂಪೂರ್ಣ ಶುಚಿತ್ವವನ್ನು ಸಾಧಿಸಲಿರುವ ಯೋಜನೆಯೇ ‘ಪುಣ್ಯಂ ಪೂಂಗಾವನಂ’

‘ಪುಣ್ಯಂ ಪೂಂಗಾವನಂ’ ಯೋಜನೆಯ ಲಕ್ಷ್ಯ ಶಬರಿಮಲೆ ಹಾಗೂ ಪರಿಸರವನ್ನು ಶುಚಿತ್ವ ಪೂರ್ಣ ಪ್ರದೇಶವನ್ನಾಗಿ ಮಾಡುವುದಾಗಿದೆ.

ಅಯ್ಯಪ್ಪ ಸ್ವಾಮಿಯ ದರ್ಶನಕ್ಕಾಗಿ ಬರುವ ತೀರ್ಥಯಾತ್ರಿಕರ ಸಹಕಾರದೊಂದಿಗೆ ಕರ್ತವ್ಯಕ್ಕೆ ನೇಮಿಸಲ್ಪಟ್ಟಿರುವ ದೇವಸ್ವಂ, ಪೊಲೀಸ್, ಇತರ ಇಲಾಖೆಗಳ ಉದ್ಯೋಗಸ್ಥರನ್ನೂ ಒಳಗೊಳ್ಳಿಸಿಕೊಂಡು ಈ ಪುಣ್ಯಂ ಪೂಂಗಾವನಂ ಎಂಬ ಶುಚೀಕರಣ ಕಾರ್ಯಗಳನ್ನು ನಡೆಸಲಾಗುತ್ತದೆ. ಎಂಟು ವರ್ಷಗಳಿಗೂ ಹೆಚ್ಚು ಕಾಲ ಮಂಡಲ ಸಮಯಗಳಲ್ಲಿ ಸನ್ನಿಧಾನವನ್ನೂ ಪರಿಸರವನ್ನೂ ದಿನಾ ಬೆಳಗ್ಗೆ 9ರಿಂದ 10ರ ವರೆಗೆ ಶುಚಿಗೊಳಿಸುತ್ತಾ ಬರಲಾಗುತ್ತದೆ.

ವಿವಿಧ ಚಟುವಟಿಕೆಗಳ ಮೂಲಕ ಶುಚೀಕರಣ ಕಾರ್ಯ ನಡೆಸುವುದರಲ್ಲಿ ಅಯ್ಯಪ್ಪ ಭಕ್ತರೂ ಪಾಲುಗಾರರಾಗಬೇಕು ಎಂಬುದು ‘ಪುಣ್ಯಂ ಪೂಂಗಾವನಂ’ ಎಂಬ ಯೋಜನೆಯ ಗುರಿ. ಶಬರಿಮಲೆಯ ದರ್ಶನಕ್ಕಾಗಿಯೂ ಸೇವಾಕಾರ್ಯಗಳಿಗಾಗಿಯೂ ಬರುವ ಪ್ರಸಿದ್ಧ ವ್ಯಕ್ತಿಗಳೂ ದಿನಾ ನಡೆಯುವ ಶುಚೀಕರಣ ಕೆಲಸಗಳಲ್ಲಿ ಭಾಗಿಗಳಾಗುತ್ತಾರೆ. ಕೈ ಗ್ಲೌಸುಗಳು, ಕಾಲಿಗಿರುವ ಸಾಕ್ಸ್ಗಳು ಸೇರಿದಂತೆ ನೈರ್ಮಲ್ಯ ಸಾಧನಗಳೊಂದಿಗೆ ಶುಚೀಕರಣ ಕೆಲಸ ನಡೆಯುತ್ತದೆ. ಶಬರಿಮಲೆಯಿಂದ ಎಲ್ಲಾ ವಿಧದ ತ್ಯಾಜ್ಯಗಳನ್ನು ಹೊರಹಾಕುವುದು ಇಲ್ಲಿನ ಪರಮ ಲಕ್ಷ್ಯ. ಸನ್ನಿಧಾನವನ್ನೂ ಪರಿಸರವನ್ನೂ ಸ್ವಚ್ಛವಾಗಿಟ್ಟು ಕಾಪಾಡಿಕೊಳ್ಳಬೇಕು ಎಂಬ ಗುರಿಯೊಂದಿಗೆ 2011ರಲ್ಲಿ ಐ.ಜಿ.ಪಿ. ವಿಜಯನ್ ಅವರು ‘ಬೆಳಗ್ಗೆ ಒಂದು ಗಂಟೆ ಕಾಲ ಶುಚೀಕರಣ ಕಾರ್ಯಕ್ರಮ’ ಎಂಬ ಆಶಯವನ್ನು ಜಾರಿಗೊಳಿಸಿದ್ದಾರೆ.

ಅಯ್ಯಪ್ಪ ಸೇವಾ ಸಂಘದೊಂದಿಗೆ ಸಹಕರಿಸಿ ಶುಚೀಕರಣಕ್ಕಾಗಿ ಪಂಬ, ನಿಲಯ್ಕಲ್, ಸನ್ನಿಧಾನ ಎಂಬೀ ಎಡೆಗಳಲ್ಲಿ 900ಕ್ಕೂ ಹೆಚ್ಚು ಮಂದಿ ವಿಶುದ್ಧಿ ಸೇವಾ ಸದಸ್ಯರನ್ನು ಪಟ್ಟಣಂತಿಟ್ಟ ಜಿಲ್ಲಾ ಆಡಳಿತ ಮಂಡಳಿ ನಿಯೋಜಿಸಿದೆ. ಇವರೆಲ್ಲರೂ ಸೇವಾ ಮನೋಭಾವ ಹೊಂದಿರುವ ತಮಿಳುನಾಡಿನ ಮಂದಿ. ಇವರಲ್ಲಿ ಶುಚೀಕರಣಕ್ಕಾಗಿ ಸನ್ನಿಧಾನದಲ್ಲಿ 300 ಮಂದಿಯನ್ನು, ಪಂಬೆಯಲ್ಲಿ 205 ಮಂದಿಯನ್ನು, ನಿಲಯ್ಕಲ್ನಲ್ಲಿ 360 ಮಂದಿಯನ್ನೂ, ಪಂದಳಂನಲ್ಲಿ 25 ಮಂದಿಯನ್ನು, ಕುಳನಡದಲ್ಲಿ 10 ಮಂದಿಯನ್ನು ನಿಯೋಜಿಸಲಾಗಿದೆ.

ಮಿಷನ್ ಗ್ರೀನ್ ಶಬರಿಮಲೆಯು ಶುಚೀಕರಣ ಸೇನೆಯ ನೇತೃತ್ವದಲ್ಲಿ ಪ್ಲಾಸ್ಟಿಕ್ನ ಉಪಯೋಗವನ್ನು ತಡೆಯುವ ಮತ್ತು ಪಂಪಾ ನದಿಯನ್ನು ತ್ಯಾಜ್ಯ ಮುಕ್ತಗೊಳಿಸುವ ಉದ್ದೇಶದಿಂದ ಜಾಗೃತಿ ಅಭಿಯಾನವನ್ನು ನಡೆಸುತ್ತಿದೆ. ಶುಚೀಕರಣ ಸೇನೆಯ ಸದಸ್ಯರ ಸೇವೆಯು ದಿನದ 24 ಗಂಟೆಗಳ ಕಾಲವೂ ಲಭಿಸುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...