alex Certify ವ್ಯಾಯಾಮದ ನಂತರ ನೀರು ಕುಡಿಯುವುದು ಎಷ್ಟು ಸೂಕ್ತ….? ಇಲ್ಲಿದೆ ತಜ್ಞರ ಸಲಹೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವ್ಯಾಯಾಮದ ನಂತರ ನೀರು ಕುಡಿಯುವುದು ಎಷ್ಟು ಸೂಕ್ತ….? ಇಲ್ಲಿದೆ ತಜ್ಞರ ಸಲಹೆ

ನಾವು ವ್ಯಾಯಾಮ ಅಥವಾ ದೈಹಿಕ ಶ್ರಮವಾಗುವಂತಹ ಕೆಲಸವನ್ನು ಮಾಡಿದಾಗ ನಮ್ಮ ಉಸಿರಾಟ ತೀವ್ರಗೊಳ್ಳುತ್ತದೆ. ಅದೇ ಸಮಯದಲ್ಲಿ ಗಂಟಲು ಕೂಡ ಒಣಗುತ್ತದೆ. ನಮಗೆ ತುಂಬಾ ಬಾಯಾರಿಕೆಯಾಗುತ್ತದೆ. ಆದರೆ ಈ ರೀತಿ ಅತಿಯಾಗಿ ಆಯಾಸವಾಗಿದ್ದಾಗ ವಾಕಿಂಗ್ ಅಥವಾ ವ್ಯಾಯಾಮ ಮಾಡಿದ ತಕ್ಷಣವೇ ನೀರು ಕುಡಿಯಬಾರದು ಅಂತಾ ಹಲವರು ಸಲಹೆ ಕೊಡುವುದನ್ನು ನೀವು ಕೂಡ ಗಮನಿಸಿರುತ್ತೀರಿ. ವ್ಯಾಯಾಮದ ನಂತರ ನೀರು ಕುಡಿಯುವುದು ಸೂಕ್ತವೇ? ಎಷ್ಟು ನೀರು ಕುಡಿಯಬೇಕು ಎಂಬುದನ್ನು ನೋಡೋಣ.

ವ್ಯಾಯಾಮದ ನಂತರ ಡಿಹೈಡ್ರೇಶನ್‌ ಸಮಸ್ಯೆಯಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ನೀರು ಕುಡಿಯುವುದು ಬಹಳ ಮುಖ್ಯ. ವಿಶೇಷವಾಗಿ ಬೇಸಿಗೆಯಲ್ಲಿ  ನಾವು ತುಂಬಾ ಬಾಯಾರಿಕೆಯನ್ನು ಅನುಭವಿಸುತ್ತೇವೆ. ಬೇಸಿಗೆಯಲ್ಲೇ ಡಿಹೈಡ್ರೇಶನ್‌ ಅಪಾಯವೂ ಹೆಚ್ಚು. ಹಾಗಾಗಿ ವ್ಯಾಯಾಮ ಮಾಡಿ 2 ಗಂಟೆಗಳೊಳಗೆ ನೀವು ನೀರು ಕುಡಿಯಬೇಕು.

ವ್ಯಾಯಾಮದ ನಂತರ ನೀವು 500 ಮಿಲಿ ಅಥವಾ 1 ಲೀಟರ್ ನೀರನ್ನು ಸೇವಿಸಬೇಕು. ವರ್ಕೌಟ್ ಮಾಡುವಾಗ ಅದಕ್ಕೆ ಸಂಬಂಧಿಸಿದ ನಿಯಮಗಳನ್ನು ಗಮನದಲ್ಲಿಟ್ಟುಕೊಳ್ಳಿ, ಇಲ್ಲದಿದ್ದರೆ ದೇಹದ ಮೇಲೆ ಕೆಟ್ಟ ಪರಿಣಾಮವನ್ನೂ ಬೀರಬಹುದು. ವ್ಯಾಯಾಮವಾದ ತಕ್ಷಣ ನೀರು ಕುಡಿಯಬೇಡಿ. ಬಾಯಾರಿಕೆಯಾಗಿದೆ ಎಂದ ಮಾತ್ರಕ್ಕೆ ತಕ್ಷಣ ನೀರು ಕುಡಿಯುವುದು ಆರೋಗ್ಯಕರವಲ್ಲ. ಹಾಗೆ ಮಾಡಿದರೆ ನಿಮ್ಮ ಎದೆಯಲ್ಲಿ ನೋವು ಉಂಟಾಗಬಹುದು.

ಹೊಟ್ಟೆ ನೋವಿನ ಸಮಸ್ಯೆ ಇರಬಹುದು ಮತ್ತು ವಾಂತಿಯೂ ಆಗಬಹುದು. ಅದಕ್ಕಾಗಿಯೇ ವ್ಯಾಯಾಮ ಮಾಡಿದ ತಕ್ಷಣ ನೀರು ಕುಡಿಯಬೇಡಿ. ವ್ಯಾಯಾಮ ಮಾಡಿ 30 ರಿಂದ 35 ನಿಮಿಷಗಳ ನಂತರ ನೀವು ನೀರನ್ನು ಸೇವಿಸಬಹುದು. ಹೀಗೆ ಮಾಡಿದರೆ ದೇಹದ ಉಷ್ಣತೆ ಸಾಮಾನ್ಯವಾಗುತ್ತದೆ. ಯಾವುದೇ ರೀತಿಯ ವ್ಯಾಯಾಮ ಮಾಡುವಾಗಲೂ ನೀವು ಈ ನಿಯಮವನ್ನು ಅನುಸರಿಸಬಹುದು. ವ್ಯಾಯಾಮದ ಮೊದಲು ನೀರು ಕುಡಿಯುವುದು ಬಹಳ ಮುಖ್ಯ. ಹಾಗಂತ ಅತಿಯಾಗಿ ಲೀಟರ್‌ಗಟ್ಟಲೆ ನೀರು ಕುಡಿಯಬೇಡಿ. ಮಿತವಾಗಿ ನೀರು ಕುಡಿದು ವ್ಯಾಯಾಮ ಆರಂಭಿಸಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...