alex Certify ವೈರಲ್‌ ಆಗಿದೆ ಮನೆಗೆ ಬಂದ ಅತಿಥಿಯನ್ನು ಶ್ವಾನಗಳು ವೆಲ್ಕಮ್‌ ಮಾಡಿರೋ ವಿಡಿಯೋ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವೈರಲ್‌ ಆಗಿದೆ ಮನೆಗೆ ಬಂದ ಅತಿಥಿಯನ್ನು ಶ್ವಾನಗಳು ವೆಲ್ಕಮ್‌ ಮಾಡಿರೋ ವಿಡಿಯೋ…!

ನಾಯಿ ಅತ್ಯಂತ ನಿಯತ್ತಿನ ಪ್ರಾಣಿ. ತನ್ನ ಪೋಷಕರಿಗಾಗಿ ಪ್ರಾಣ ಕೊಡಲೂ ಹೇಸುವುದಿಲ್ಲ. ಮನೆಗೆ ಬಂದ ಹೊಸ ಅತಿಥಿಯನ್ನು ಸಾಕು ನಾಯಿಗಳು ವೆಲ್ಕಮ್‌ ಮಾಡಿರೋ ವಿಡಿಯೋ ಒಂದು ಈಗ ವೈರಲ್‌ ಆಗಿದೆ. ಈ ನಾಯಿಗಳ ಹೆಸರು ವಿನ್‌ಸ್ಟನ್‌ ಮತ್ತು ಡೌಗ್‌.

ನಾಯಿಗಳ ಒಡೆಯ ಹೆಣ್ಣು ಮಗುವಿಗೆ ತಂದೆಯಾಗಿದ್ದ. ಮಗುವನ್ನು ಮನೆಗೆ ಕರೆತಂದ ಆತ ನಾಯಿಗಳಿಗೆ ಮೊದಲ ಬಾರಿ ಪರಿಚಯ ಮಾಡಿಸಿದ್ದಾನೆ. ಮುದ್ದಾದ ಮಗು ಮಿಲ್ಲರ್‌ಳನ್ನು ನೋಡಲು ಶ್ವಾನಗಳು ಉತ್ಸಾಹದಿಂದಿದ್ವು. ಮಗು ನೋಡಿದ ತಕ್ಷಣ ನಾಯಿಗಳ ಪ್ರತಿಕ್ರಿಯೆ ಗಮನಿಸಿದ್ರೆ ಎಂಥವರು ಕೂಡ ಭಾವುಕರಾಗ್ತಾರೆ.

ಮಗುವನ್ನು ಹತ್ತಿರ ತರ್ತಿದ್ದಂತೆ ನಾಯಿಗಳು ಬಾಲ ಅಲ್ಲಾಡಿಸುತ್ತ ಓಡೋಡಿ ಬಂದಿವೆ. ಮಗುವಿನ ಮುಖ, ತಲೆಯನ್ನೆಲ್ಲ ಸ್ಪರ್ಷಿಸಿ ನೆಕ್ಕುವ ಮೂಲಕ ಪ್ರೀತಿಯನ್ನು ವ್ಯಕ್ತಪಡಿಸಿವೆ. ಅಷ್ಟೇ ಅಲ್ಲ ಒಂದು ನಾಯಿ ಮುದ್ದು ಮಗುವಿಗಾಗಿ ತನ್ನ ಬಳಿಯಿದ್ದ ಆಟಿಕೆಯನ್ನೇ ತಂದು ಕೊಟ್ಟಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್‌ ಆಗಿದೆ. ವಿಡಿಯೋವನ್ನು ಜನರು ತುಂಬಾ ಇಷ್ಟಪಡುತ್ತಿದ್ದಾರೆ. 7 ಲಕ್ಷಕ್ಕೂ ಹೆಚ್ಚು ಮಂದಿ ಇದನ್ನು ವೀಕ್ಷಿಸಿದ್ದಾರೆ.

https://www.instagram.com/reel/CciWGqTJ453/?utm_source=ig_embed&ig_rid=3f417e41-d780-4f6c-873f-afb49168ae2e

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...