![](https://kannadadunia.com/wp-content/uploads/2022/01/ccqertbfljqnuu7n_1641122853.jpeg)
ನೇರಪ್ರಸಾರದ ವೇಳೆ ಪಾಪ್ ಗಾಯಕಿಯ ಉಡುಪು ಆಕಸ್ಮಾತ್ ಆಗಿ ಕಳಚಿದ ವಿಡಿಯೋ ಭಾರಿ ವೈರಲ್ ಆಗಿತ್ತು. ಈ ಬಗ್ಗೆ ಮಿಲಿ ಸೈರಸ್ ತನ್ನ ಟ್ವಿಟ್ಟರ್ ಪುಟದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ. ಸಮಸ್ಯೆಯನ್ನು ಸ್ವತಃ ತಿಳಿಸುತ್ತಾ, ತಾನು ಬಹಳ ಸಂತೋಷವಾಗಿದ್ದು, ಪ್ರತಿ ಕ್ಷಣವನ್ನೂ ಪ್ರೀತಿಸುವುದಾಗಿ ಟ್ವೀಟ್ ಮಾಡಿದ್ದಾರೆ.
ಅಮೆರಿಕಾದಲ್ಲಿ ಹೊಸವರ್ಷದ ಸ್ವಾಗತಕ್ಕೆ ನಡೆದ ಕಾರ್ಯಕ್ರಮದಲ್ಲಿ ಗಾಯಕಿ ಸೈರಸ್ ವೇದಿಕೆ ಮೇಲೆ ನಿಂತು ಬಹಳ ಜೋಶ್ ನಿಂದ ಹಾಡುತ್ತಿದ್ದರು. ಈ ವೇಳೆ ಏಕಾಏಕಿ ಆಕೆಯ ಉಡುಪು ಕಳಚಿದೆ. ಕೂಡಲೇ ಕ್ಯಾಮರಾವನ್ನು ಪ್ರೇಕ್ಷಕರ ಕಡೆಗೆ ತಿರುಗಿಸಲಾಗಿದ್ದು, ಮತ್ತದೇ ಜೋಶ್ ನಲ್ಲಿ ಕೆಂಪು ಬಣ್ಣದ ಕೋಟ್ ಧರಿಸಿದ ಸೈರಸ್ ಪ್ರದರ್ಶನವನ್ನು ಮುಂದುವರೆಸಿದ್ದರು. ನೆರೆದಿದ್ದ ಜನರು ಗಾಯಕಿಯ ಹಾಡಿಗೆ ಕುಣಿದು ಕುಪ್ಪಳಿಸಿದ್ದಾರೆ.
https://twitter.com/MileyCentraI/status/1477145265807179783?ref_src=twsrc%5Etfw%7Ctwcamp%5Etweetembed%7Ctwterm%5E1477145265807179783%7Ctwgr%5E%7Ctwcon%5Es1_&ref_url=https%3A%2F%2Fd-8415094963947267073.ampproject.net%2F2111242025001%2Fframe.html