alex Certify ವೇದಿಕೆಯಲ್ಲೇ ಕಣ್ಣೀರಿಟ್ಟ ಶಾಸಕ ಸಾ.ರಾ. ಮಹೇಶ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವೇದಿಕೆಯಲ್ಲೇ ಕಣ್ಣೀರಿಟ್ಟ ಶಾಸಕ ಸಾ.ರಾ. ಮಹೇಶ್

ಸಾಮಾಜಿಕ ಜಾಲತಾಣದಲ್ಲಿ ವಿದ್ಯಾರ್ಥಿಯೊಬ್ಬ ತಮ್ಮನ್ನು ಅವಾಚ್ಯ ಪದಗಳಲ್ಲಿ ನಿಂದಿಸಿ ಹಾಕಿದ ಪೋಸ್ಟ್ ಕುರಿತು ಪ್ರಸ್ತಾಪಿಸಿರುವ ಶಾಸಕ ಸಾ.ರಾ ಮಹೇಶ್, ವೇದಿಕೆಯಲ್ಲಿಯೇ ಕಣ್ಣೀರಿಟ್ಟಿರುವ ಘಟನೆ ನಡೆದಿದೆ.

ಕೆ ಆರ್ ನಗರ ಕ್ಷೇತ್ರದ ಸರ್ಕಾರಿ ಕಾಲೇಜು ಕಟ್ಟಡ ಉದ್ಘಾಟನೆ ವಿಚಾರ ಕುರಿತಂತೆ ಈ ವಿದ್ಯಾರ್ಥಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದ ಎನ್ನಲಾಗಿದ್ದು, ಇದರ ಉದ್ಘಾಟನೆ ಸಂದರ್ಭದಲ್ಲಿ ಸಾ.ರಾ ಮಹೇಶ್ ಇದನ್ನು ಪ್ರಸ್ತಾಪಿಸಿ ಕಣ್ಣೀರು ಹಾಕಿದ್ದಾರೆ.

ಅಲ್ಲದೆ ಇಂತಹ ಅಯೋಗ್ಯನನ್ನು ಕಾಲೇಜಿನಲ್ಲಿ ಇಟ್ಟುಕೊಂಡಿದ್ದೀರಲ್ಲ ಎಂದು ಪ್ರಾಂಶುಪಾಲರನ್ನು ಪ್ರಶ್ನಿಸಿದ ಅವರು, ನಾನು ಮನಸ್ಸು ಮಾಡಿದರೆ ಆತನನ್ನು ಸಸ್ಪೆಂಡ್ ಮಾಡಿಸುತ್ತಿದ್ದೆ ಆದರೆ ನನಗೆ ಒಳ್ಳೆಯ ಸಂಸ್ಕಾರವಿರುವ ಕಾರಣ ಇಂತಹ ಕೆಲಸ ಮಾಡಿಲ್ಲ ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...