alex Certify ವೇದಿಕೆಯಲ್ಲಿ ವಧು-ವರನ ಬೊಂಬಾಟ್ ಸ್ಟೆಪ್ಸ್: ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವೇದಿಕೆಯಲ್ಲಿ ವಧು-ವರನ ಬೊಂಬಾಟ್ ಸ್ಟೆಪ್ಸ್: ವಿಡಿಯೋ ವೈರಲ್

ಇತ್ತೀಚೆಗೆ ದೇಸಿ ಮದುವೆಯಲ್ಲಿ ನೃತ್ಯ ಇಲ್ಲದೆ ಅದು ಪೂರ್ಣ ಅಂದೇನಿಸುವುದೇ ಇಲ್ಲ ಅನ್ನೋ ಹಾಗಾಗಿದೆ. ಹಾಗೆಯೇ ತಮ್ಮ ವಿವಾಹದ ದಿನ ಇಲ್ಲೊಂದು ಜೋಡಿ ಜಬರ್ದಸ್ತ್ ಸ್ಟೆಪ್ಸ್ ಹಾಕಿದ್ದಾರೆ. ಸದ್ಯ, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈಲರ್ ಆಗಿದೆ.

ಮದುವೆಯ ಸಂಪ್ರದಾಯಗಳೆಲ್ಲಾ ಮುಗಿದ ನಂತರ ವಧು-ವರರು ಡಿಜೆಗೆ ಸಖತ್ ಆಗಿ ಕುಣಿದು ಕುಪ್ಪಳಿಸಿದ್ದಾರೆ. ಇವರಿಬ್ಬರ ಡ್ಯಾನ್ಸ್ ನೋಡಿದ ಅತಿಥಿಗಳು ದಂಪತಿಯನ್ನು ಹುರಿದುಂಬಿಸಿದ್ದಾರೆ. ಈ ವೇಳೆ ವರನು ವಧುವನ್ನು ಬ್ಯಾಕ್‌ಫ್ಲಿಪ್ ಶೈಲಿಯಲ್ಲಿ ಎತ್ತಿದ್ದಾನೆ. ಇನ್ನೇನು ಆತ ಸಮತೋಲನ ಕಳೆದುಕೊಂಡು ವಧು ಬೀಳುತ್ತಾಳೆ ಎಂದಾಗ ಗಟ್ಟಿಯಾಗಿ ಹಿಡಿದು, ಏನೂ ಆಗಿಲ್ಲ ಎಂಬಂತೆ ಇಬ್ಬರೂ ಡ್ಯಾನ್ಸ್ ಮಾಡಿದ್ದಾರೆ.

ವೆಬ್ಎಬೌಟ್ ಎಂಬ ಇನ್ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದ್ದು, ಸದ್ಯ ಭಾರಿ ವೈರಲ್ ಆಗಿದೆ.

https://www.instagram.com/p/CVkn7csDKZK/?utm_source=ig_embed&utm_campaign=embed_video_watch_again

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...